
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಅವರ ಪತ್ನಿ ಪ್ರತಿಭಾ ಶರತ್ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ದಂಪತಿ ಇಬ್ಬರಿಗೂ ಸೋಂಕು ದೃಢವಾಗಿತ್ತು.
ಹೀಗಾಗಿ ಮನೆಯಲ್ಲೇ ಐಸೋಲೇಷನ್ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಶರತ್ ಬಚ್ಚೇಗೌಡ ಮತ್ತು ಪತ್ನಿ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಶಾಸಕ ಶರತ್ ಈ ಬಗ್ಗೆ ಖುದ್ದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿಕಿತ್ಸೆ ಪಡೆದು ನಿನ್ನೆಯಷ್ಟೆ ಮೊತ್ತೊಮ್ಮೆ ಟೆಸ್ಟ್ ಮಾಡಿಸಿದ್ದ ಶಾಸಕ ಶರತ್ ಟೆಸ್ಟ್ ರಿಪೋರ್ಟ್ ಇದೀಗ ನೆಗಟಿವ್ ಬಂದಿದ್ದಾರೆ.
ನಮಸ್ಕಾರ,
ನಾನು ಹಾಗೂ ನನ್ನ ಧರ್ಮಪತ್ನಿ ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖ ಆಗಿದ್ದೇವೆ. ಇಂದು ಕೊರೋನಾ ಪರೀಕ್ಷೆಯ ಫಲಿತಾಂಶದಲ್ಲಿ #ನೆಗಟಿವ್ ಎಂದು ಬಂದಿದೆ.
ನಾವು ಬೇಗ ಗುಣಮುಖರಾಗಲೆಂದು ನೀವೆಲ್ಲರೂ ಮಾಡಿದ ಆಶೀರ್ವಾದಕ್ಕೆ ನಾವು ಮತ್ತು ನಮ್ಮ ಕುಟುಂಬ ಸದಾ ಚಿರಋಣಿಯಾಗಿರುತ್ತೇವೆ ??. pic.twitter.com/HehY8LlmGm
— Sharath Bachegowda (@SBG4Hosakote) July 18, 2020