ಮೃತಪಟ್ಟು 2 ದಿನವಾದ್ರೂ ಸೋಂಕಿತನ ಮೃತದೇಹ ನೀಡದ ಆಸ್ಪತ್ರೆ -ಕುಟುಂಬಸ್ಥರ ಆರೋಪ
ಬೆಂಗಳೂರು: ಆಸ್ಪತ್ರೆಯ ಬಿಲ್ ಕಟ್ಟಿಲ್ಲವೆಂದು ಸೋಂಕಿತ ಮೃತಪಟ್ಟು ಎರಡು ದಿನಗಳಾಗಿದ್ದರೂ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸದ ಘಟನೆ ನಗರದಲ್ಲಿ ನಡೆದಿದೆ. ಕುಮಾರಸ್ವಾಮಿ ಲೇಔಟ್ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಈ ಆರೋಪ ಕೇಳಿಬಂದಿದೆ. ಜುಲೈ 19ರಂದು ಸೋಂಕಿತ ಅಸ್ಪತ್ರೆಗೆ ಚಿಕಿತ್ಸೆಗೆಂದು ಅಡ್ಮಿಟ್ ಆಗಿದ್ದ. ಕಳೆದ 20ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ 2 ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆಸ್ಪತ್ರೆಯ ಆಡಳಿತ ಮಂಡಳಿ 9 ಲಕ್ಷ ರೂಪಾಯಿಯ ಬಿಲ್ ನೀಡಿದ್ದು, ಇದನ್ನು ಕಟ್ಟಿದ ನಂತರ ಮೃತದೇಹ ಕೊಡುವುದಾಗಿ ತಿಳಿಸಿದ್ದಾರೆ. ಇದರಿಂದ […]

ಬೆಂಗಳೂರು: ಆಸ್ಪತ್ರೆಯ ಬಿಲ್ ಕಟ್ಟಿಲ್ಲವೆಂದು ಸೋಂಕಿತ ಮೃತಪಟ್ಟು ಎರಡು ದಿನಗಳಾಗಿದ್ದರೂ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸದ ಘಟನೆ ನಗರದಲ್ಲಿ ನಡೆದಿದೆ. ಕುಮಾರಸ್ವಾಮಿ ಲೇಔಟ್ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಈ ಆರೋಪ ಕೇಳಿಬಂದಿದೆ.
ಜುಲೈ 19ರಂದು ಸೋಂಕಿತ ಅಸ್ಪತ್ರೆಗೆ ಚಿಕಿತ್ಸೆಗೆಂದು ಅಡ್ಮಿಟ್ ಆಗಿದ್ದ. ಕಳೆದ 20ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ 2 ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆಸ್ಪತ್ರೆಯ ಆಡಳಿತ ಮಂಡಳಿ 9 ಲಕ್ಷ ರೂಪಾಯಿಯ ಬಿಲ್ ನೀಡಿದ್ದು, ಇದನ್ನು ಕಟ್ಟಿದ ನಂತರ ಮೃತದೇಹ ಕೊಡುವುದಾಗಿ ತಿಳಿಸಿದ್ದಾರೆ.
ಇದರಿಂದ ಕಂಗಾಲಾದ ಮೃತನ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸರಿಯಾದ ಚಿಕಿತ್ಸೆ ನೀಡಲಿಲ್ಲ. ಹಾಗಾಗಿ, ನಮ್ಮಣ್ಣ ಮೃತಪಟ್ಟಿದ್ದಾನೆ ಎಂದು ಮೃತ ಸೋಂಕಿತನ ತಮ್ಮ ಅಳಲು ತೋಡಿಕೊಂಡರು.




