DigiLocker: ಡಿಜಿಲಾಕರ್ ಬಳಸಿ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಲು ಸುಲಭ ವಿಧಾನ ಇಲ್ಲಿದೆ

| Updated By: ganapathi bhat

Updated on: Apr 06, 2022 | 7:47 PM

Apply for Passport Services: ಡಿಜಿಲಾಕರ್ ಅಪ್ಲಿಕೇಷನ್​ನ ಮೂಲಕ ಪಾಸ್​ಪೋರ್ಟ್ ಸೇವಾ ಕಾರ್ಯಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಈ ಯೋಜನೆಯಂತೆ, ಪಾಸ್​ಪೋರ್ಟ್ ರಚನೆಗೆ ಬೇಕಿರುವ ಅಗತ್ಯ ದಾಖಲೆಗಳನ್ನು ಡಿಜಿಲಾಕರ್ ಮೂಲಕ ಸಲ್ಲಿಸಬಹುದು.

DigiLocker: ಡಿಜಿಲಾಕರ್ ಬಳಸಿ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಲು ಸುಲಭ ವಿಧಾನ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಭಾರತ ಸರ್ಕಾರ 2018ರಲ್ಲಿ ಡಿಜಿಲಾಕರ್ (DigiLocker) ಎಂಬ ಅಪ್ಲಿಕೇಷನ್​ನ್ನು ಬಿಡುಗಡೆಗೊಳಿಸಿತು. ಡಿಜಿಲಾಕರ್ ಎಂಬುದು ಕ್ಲೌಡ್ ಬೇಸ್​ಡ್ (Cloud Based) ಆಗಿ ದಾಖಲೆಗಳನ್ನು ಕಾಪಿಡುವ ಅಪ್ಲಿಕೇಷನ್ ಆಗಿದೆ. ಅದರಲ್ಲಿ ನಮ್ಮ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಕಾರ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಇತ್ಯಾದಿಗಳನ್ನು ಡಿಜಿಟಲ್ ಸ್ವರೂಪದಲ್ಲಿ (Digital Form) ದಾಖಲಿಸಿಡಬಹುದು. ಡಿಜಿಲಾಕರ್ ಮುಖೇನ ಬಳಕೆದಾರರು ಅಮೂಲ್ಯ ಮತ್ತು ಅಗತ್ಯ ದಾಖಲೆಗಳನ್ನು ಮೊಬೈಲ್​ನಲ್ಲೇ ಸಂಗ್ರಹಿಸಿ ಕೊಂಡೊಯ್ಯಬಹುದು. ಈ ದಾಖಲೆಗಳು ಹಾರ್ಡ್ ಕಾಪಿ ದಾಖಲೆಗಳಷ್ಟೇ (Verified) ಬೆಲೆ ಇರಲಿದೆ.

ಡಿಜಿಲಾಕರ್ ಅಪ್ಲಿಕೇಷನ್​ನ ಮೂಲಕ ಪಾಸ್​ಪೋರ್ಟ್ ಸೇವಾ ಕಾರ್ಯಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಈ ಯೋಜನೆಯಂತೆ, ಪಾಸ್​ಪೋರ್ಟ್ ರಚನೆಗೆ ಬೇಕಿರುವ ಅಗತ್ಯ ದಾಖಲೆಗಳನ್ನು ನಾಗರಿಕರು ಡಿಜಿಲಾಕರ್ ಮೂಲಕ ಸಲ್ಲಿಸಬಹುದು. ತನ್ಮೂಲಕ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಬಹುದು.

ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್, ಡಿಜಿಲಾಕರ್ ಅಪ್ಲಿಕೇಷನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಡಿಜಿಟಲ್ ಇಂಡಿಯಾದ ಭಾಗವಾಗಿದೆ (Digital India) ಎಂದಿದ್ದಾರೆ. ಇ-ಪಾಸ್​ಪೋರ್ಟ್​ನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೂಡ ಸರ್ಕಾರ ಕೆಲಸ ಮಾಡುತ್ತಿದೆ. ಇ-ಪಾಸ್​ಪೋರ್ಟ್​ಗಳು ಬಳಕೆದಾರರ ದಾಖಲೆಯ ಸುರಕ್ಷತೆಯನ್ನು ಹೆಚ್ಚಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಪಾಸ್​ಪೋರ್ಟ್ ಸೇವಾ ಯೋಜನೆ V2.0ನಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ತಂತ್ರಜ್ಞಾನ ಬಳಸಲು ಸರ್ಕಾರ ಉದ್ದೇಶಿಸಿದೆ. ಮೆಷಿನ್ ಲರ್ನಿಂಗ್, ಚಾಟ್​ಬಾಟ್, ಅಂಕಿ-ಅಂಶಗಳು, ರೊಬೋಟಿಕ್ ಪ್ರಾಸೆಸ್ ಆಟೊಮೇಷನ್ (RPA) ತಂತ್ರಜ್ಞಾನ ಬಳಸಿ ಪಾಸ್​ಪೋರ್ಟ್​ ಅರ್ಜಿ ಸಲ್ಲಿಸುವ ಸೌಲಭ್ಯ ಸುಲಭವಾಗಿಸಲು ಸರ್ಕಾರ ಯೋಜಿಸಿದೆ.

ಡಿಜಿಲಾಕರ್ ಸೌಲಭ್ಯ ಬಳಸಿ, ಪಾಸ್​ಪೋರ್ಟ್ ಸೇವಾ ಯೋಜನೆ ಲಾಭ ಪಡೆಯಿರಿ
ಡಿಜಿಲಾಕರ್ ಅಪ್ಲಿಕೇಷನ್ ಮೂಲಕ ಪಾಸ್​ಪೋರ್ಟ್ ಸೇವೆ ಪಡೆಯಲು, ಮೊದಲು ಡಿಜಿಲಾಕರ್​ನಲ್ಲಿ ಅಗತ್ಯ ದಾಖಲೆಗಳನ್ನು ಅಪ್​ಲೋಡ್ ಮಾಡಿರಿ. ಪಾಸ್​ಪೋರ್ಟ್ ಪಡೆಯಲು ಅಗತ್ಯವಿರುವ ದಾಖಲೆಗಳ ಪಟ್ಟಿ ಪಾಸ್​ಪೋರ್ಟ್ ಇಂಡಿಯಾ ಪೋರ್ಟಲ್ (Passport India Portal)  ನಲ್ಲಿ ಸಿಗುತ್ತದೆ.

ಪಾಸ್​ಪೋರ್ಟ್ ರಚನೆಗೆ ಬೇಕಿರುವ ಅಗತ್ಯ ದಾಖಲೆಗಳನ್ನು ನಾಗರಿಕರು ಡಿಜಿಲಾಕರ್ ಮೂಲಕ ಸಲ್ಲಿಸಬಹುದು. ತನ್ಮೂಲಕ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಬಹುದು. ಡಿಜಿಲಾಕರ್ ಅಪ್ಲಿಕೇಷನ್, ಆಪಲ್ ಆ್ಯಪ್ ಸ್ಟೋರ್ ಅಥವಾ ಗೂಗಲ್ ಪ್ಲೇನಲ್ಲಿ ಲಭ್ಯವಿದೆ. ಡಿಜಿಲಾಕರ್​ನ ವೆಬ್ ವರ್ಷನ್ ಕೂಡ ಬಳಕೆಗೆ ಲಭ್ಯವಿದೆ.

ಡಿಜಿಲಾಕರ್ ಇತ್ತೀಚೆಗೆ 50 ಮಿಲಿಯನ್ ರಿಜಿಸ್ಟ್ರೇಷನ್​ಗಳನ್ನು ದಾಟಿದೆ ಎಂದು ಸರ್ಕಾರ ಇತ್ತೀಚೆಗೆ ಘೋಷಿಸಿತ್ತು. 2018ರಲ್ಲಿ ಡಿಜಿಲಾಕರ್ ಆರಂಭವಾದ ಬಳಿಕ ಈವರೆಗಿನ ಅವಧಿಯಲ್ಲಿ ಡಿಜಿಲಾಕರ್ ಅಪ್ಲಿಕೇಷನ್ ಸ್ವರೂಪದಲ್ಲಿ ಬಳಕೆದಾರರಿಗೆ ಅನುಕೂಲಕರ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ.

ಅಪ್ಲಿಕೇಷನ್​ನ ಆರಂಭಿಕ ದಿನಗಳಲ್ಲಿ ಡಿಜಿಲಾಕರ್ ಬಳಕೆದಾರ ಸ್ನೇಹಿ ಎಂದು ಅನಿಸಿಕೊಂಡಿರಲಿಲ್ಲ. ನಂತರ ಅಪ್ಲಿಕೇಷನ್​ನ್ನು ಪರಿಷ್ಕರಿಸಿ ಬಳಕೆದಾರ ಸ್ನೇಹಿಯಾಗಿ ರೂಪಿಸಲಾಗಿದೆ. ಬಳಕೆದಾರರ ಸುರಕ್ಷತೆ (Security) ವಿಚಾರದಲ್ಲಿ ಡಿಜಿಲಾಕರ್ ಡೆವೆಲಪರ್ಸ್ ಮಾತನಾಡಿದ್ದಾರೆ. ಡಿಜಿಲಾಕರ್ ವೇದಿಕೆಯು 256-bit Secure Socket Layer (SSL) encryption ಬಳಸುತ್ತದೆ. ಎಲ್ಲಾ ಮಾಹಿತಿಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತದೆ.

ಜತೆಗೆ, OTP ವೇರಿಫಿಕೇಷನ್ ಮೂಲಕ ಬಳಕೆದಾರರ ದೃಢೀಕರಣವನ್ನು ಡಿಜಿಲಾಕರ್ ಮಾಡುತ್ತದೆ. ಅಷ್ಟಲ್ಲದೆ, ಬಳಕೆದಾರರು ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಇನ್ಯಾಕ್ಟಿವ್ ಆಗಿದ್ದರೆ ಆ್ಯಕ್ಟೀವ್ ಸೆಷನ್​ನ್ನು ಡಿಜಿಲಾಕರ್ ಮುಕ್ತಾಯಗೊಳಿಸುತ್ತದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಹೊಸ ಕೊವಿಡ್ ಮಾರ್ಗಸೂಚಿ ಬಿಡುಗಡೆ; ನೀವು ತಿಳಿದಿರಬೇಕಾದ ವಿಚಾರಗಳು ಇಲ್ಲಿದೆ

ಪಾಸ್​ಪೋರ್ಟ್​​ನಲ್ಲಿದ್ದ ರಾಷ್ಟ್ರೀಯತೆ ಕಾಲಂನ್ನು ತೆಗೆದೇಬಿಟ್ಟಿತಾ ಕೇಂದ್ರ ಸರ್ಕಾರ? ವೈರಲ್​ ಮೆಸೇಜ್​ನ ಸತ್ಯಾಂಶ ಏನು?

Published On - 9:50 pm, Mon, 22 February 21