ಮೊಬೈಲ್ ಕಳವಾದರೆ ಏನು ಮಾಡಬೇಕು? ಮೊಬೈಲ್​ನಲ್ಲಿರುವ ನಿಮ್ಮ ಮುಖ್ಯ ಮಾಹಿತಿಗಳನ್ನು ಸಂರಕ್ಷಿಸುವುದು ಹೇಗೆ?

| Updated By: ganapathi bhat

Updated on: Apr 06, 2022 | 6:57 PM

ಬಳಕೆದಾರರು ತಮ್ಮ ಮಾಹಿತಿಗಳನ್ನು ಲಾಕ್ ಮಾಡಬಲ್ಲ ಅಥವಾ ಅಳಿಸಿ ಹಾಕಬಲ್ಲ ಸೌಲಭ್ಯವನ್ನು ಗೂಗಲ್ ನೀಡಿದೆ. ಬಹುತೇಕ ನಮ್ಮ ಮಾಹಿತಿ (ಡೇಟಾ) ಗೂಗಲ್​ನಲ್ಲೇ ಸೇವ್ ಆಗಿರುತ್ತದೆ. ಈ ತಂತ್ರಜ್ಞಾನದ ಮೂಲಕ ಮೊಬೈಲ್ ಕಳೆದುಹೋದರೂ ಅದೆಲ್ಲವನ್ನೂ ಗೌಪ್ಯವಾಗಿಯೇ ಕಾಪಾಡಬಹುದು.

ಮೊಬೈಲ್ ಕಳವಾದರೆ ಏನು ಮಾಡಬೇಕು? ಮೊಬೈಲ್​ನಲ್ಲಿರುವ ನಿಮ್ಮ ಮುಖ್ಯ ಮಾಹಿತಿಗಳನ್ನು ಸಂರಕ್ಷಿಸುವುದು ಹೇಗೆ?
ಪ್ರಾತಿನಿಧಿಕ ಚಿತ್ರ
Follow us on

ಹೆಚ್ಚು ಹೆಚ್ಚು ತಂತ್ರಜ್ಞಾನಗಳು, ಅದರ ಸಾಧ್ಯತೆಗಳು ಹುಟ್ಟಿಕೊಳ್ಳುತ್ತಿರುವಂತೆ ಅದರ ಸಮಸ್ಯೆಗಳು, ದುಷ್ಪರಿಣಾಮಗಳು ಕೂಡ ಜನರನ್ನು ಕಾಡುತ್ತಿದೆ. ಸೈಬರ್ ಕ್ರೈಂ ಪ್ರಕರಣಗಳು ಕೂಡ ಜಾಸ್ತಿಯಾಗಿ ಕಂಡುಬರುತ್ತಿದೆ. ಇ-ಕಾಮರ್ಸ್ ತಾಣಗಳಲ್ಲಿ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮಾಹಿತಿಗಳ ಮೂಲಕ, ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆ ವಿವರಗಳ ಮೂಲಕ ಹಣ ದೋಚುವ ಪ್ರಕರಣಗಳು ಕಂಡುಬರುತ್ತಿವೆ. ಈಗಿನ ದಿನಮಾನದಲ್ಲಿ ನಾವು ಎಷ್ಟು ಜಾಗರೂಕರಾಗಿದ್ದರೂ ಸಾಲದು ಎಂಬಂತಾಗಿದೆ. ಮೊಬೈಲ್ ಕಳವಾಗುವುದೂ ಇಂಥಾ ಸಮಸ್ಯೆಗಳಲ್ಲೊಂದು.

ಇಂದು ನಾವು ಎಲ್ಲಾ ಮಾಹಿತಿಗಳನ್ನು ಕೂಡ ಮೊಬೈಲ್ ಅಥವಾ ಗೂಗಲ್​ನಲ್ಲಿ ಸೇವ್ ಮಾಡಿ ಇಟ್ಟುಕೊಂಡಿರುತ್ತೇವೆ. ಮೊಬೈಲ್ ಕಳವಾದಾಗ ಅತ್ಯಂತ ಮುಖ್ಯ ಮಾಹಿತಿಗಳು (ಡೇಟಾ) ಸೋರಿಕೆಯಾಗುವ ಸಂಭವ ಹೆಚ್ಚಾಗಿರುತ್ತದೆ. ಅದರಿಂದ ಪಾರಾಗುವುದು ಹೇಗೆ? ಮೊಬೈಲ್​ನಲ್ಲಿರುವ ನಮ್ಮ ಮಾಹಿತಿಗಳನ್ನು ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು? ಒಂದು ವೇಳೆ ಮೊಬೈಲ್ ಕಳವಾದರೆ ಏನು ಮಾಡಬೇಕು ಎಂಬ ಗೊಂದಲಗಳಿದ್ದರೆ ಈ ಮಾಹಿತಿ ನಿಮಗೆ ಸಹಕಾರಿಯಾಗಿ ಇರಲಿದೆ.

ಬಳಕೆದಾರರು ತಮ್ಮ ಮಾಹಿತಿಗಳನ್ನು ಲಾಕ್ ಮಾಡಬಲ್ಲ ಅಥವಾ ಅಳಿಸಿ ಹಾಕಬಲ್ಲ ಸೌಲಭ್ಯವನ್ನು ಗೂಗಲ್ ನೀಡಿದೆ. ಬಹುತೇಕ ನಮ್ಮ ಮಾಹಿತಿ (ಡೇಟಾ) ಗೂಗಲ್​ನಲ್ಲೇ ಸೇವ್ ಆಗಿರುತ್ತದೆ. ಮೊಬೈಲ್ ಕಳೆದುಹೋದರೂ ಅದೆಲ್ಲವನ್ನೂ ಗೌಪ್ಯವಾಗಿಯೇ ಕಾಪಾಡಬಹುದು.

ಕಳೆದು ಹೋದ ಮೊಬೈಲ್ ಹುಡುಕಲು ಹೀಗೆ ಮಾಡಬಹುದು..
ಹೊಸ ಮೊಬೈಲ್ ಫೋನ್​ಗಳು (Smartphones) ಈಗ ‘find my phone’ ಎಂಬ ಆಯ್ಕೆ ಇದೆ. ಐಫೋನ್​ಗಳಲ್ಲಾದರೆ Find my iPhone ಎಂಬ ಆಯ್ಕೆ ಬಳಸಬಹುದು. ಆಡ್ರಾಂಯ್ಡ್ ಫೋನ್​ಗಳಾದರೆ Find My Device ಎಂಬ ಆಯ್ಕೆ ಉಪಯೋಗಿಸಬಹುದು. ಏನೇ ಆದರೂ, ಕಳೆದುಹೋದ ಫೋನ್ ನೆಟ್​ವರ್ಕ್ ಸಂಪರ್ಕ ಹೊಂದಿದ್ದರೆ ಹಾಗೂ ಲೊಕೇಶನ್ ಆನ್ ಇದ್ದರೆ ಮಾತ್ರ ನಾವು ಫೋನ್ ಟ್ರಾಕ್ ಮಾಡಬಹುದಾಗಿದೆ. ಇಲ್ಲವಾದಲ್ಲಿ ಲಾಸ್ಟ್ ಲೊಕೇಶನ್​ನ್ನು ನೀವು ತಿಳಿಯಬಹುದು.

ಮೊಬೈಲ್ ಇರುವ ಸ್ಥಳ ಹತ್ತಿರದಲ್ಲೇ ಆಗಿದ್ದರೆ, ಅಲ್ಲಿಗೆ ನೀವು ತೆರಳಿ ಮೊಬೈಲ್ ಹುಡುಕಬಹುದು. ಮೊಬೈಲ್ ಎಲ್ಲಿದೆ ಎಂದು ತಿಳಿಯಲು ‘ಪ್ಲೇ ಸೌಂಡ್’ ಆಯ್ಕೆಯನ್ನೂ ಒತ್ತಬಹುದು. ಅದರಿಂದ, ಮೊಬೈಲ್ ಸೈಲೆಂಟ್ ಇದ್ದರೂ ಐದು ನಿಮಿಷಗಳ ಕಾಲ ರಿಂಗ್ ಆಗುತ್ತದೆ. ಮೊಬೈಲ್ ಇರುವ ಲೊಕೇಶನ್ ತಿಳಿಯುತ್ತದೆ.

ಅಥವಾ ಕಾನೂನಾತ್ಮಕವಾಗಿ ದೂರು ನೀಡಿ, ಮೊಬೈಲ್ ಹುಡುಕಲು ಹೊರಡುತ್ತೀರಾದರೆ ನಿಮ್ಮ IMEI ನಂಬರ್ ನೀವು ತಿಳಿದಿರುವುದು ಮುಖ್ಯ. ಅದಕ್ಕಾಗಿ,  ಗೂಗಲ್​ನಲ್ಲಿ ಮಾಹಿತಿ ಪಡೆಯಬಹುದು.

ಕಳೆದುಹೋಗಿರುವ ಮೊಬೈಲ್​ನ ಗೂಗಲ್ ಖಾತೆ ಹಾಗೂ ಸ್ಕ್ರೀನ್ ಲಾಕ್ ಆಗಬೇಕು ಎಂದಿದ್ದರೆ ನೀವು Secure Device ಆಯ್ಕೆ ಆರಿಸಬಹುದು. ಅದರ ಮೂಲಕ ಗೂಗಲ್ ಖಾತೆ ಹಾಗೂ ಮೊಬೈಲ್ ಸ್ಕ್ರೀನ್ ಲಾಕ್ ಆಗುತ್ತದೆ. ಕಳೆದುಹೋದ ನಿಮ್ಮ ಫೋನ್ ಸಿಕ್ಕಿದವರಿಗೆ ಫೋನ್ ಮರಳಿಸಬೇಕು ಎಂಬ ಭಾವ ಇದ್ದರೆ, ಅವರು ನಿಮ್ಮನ್ನು ಸಂಪರ್ಕಿಸಬಹುದು. ಸ್ಕ್ರೀನ್ ಲಾಕ್ ಆಗಿದ್ದರೂ ನಿಮ್ಮ ಮೊಬೈಲ್ ಸಂಖ್ಯೆ ಸ್ಕ್ರೀನ್ ಮೇಲೆ ಅವರಿಗೆ ಕಾಣಿಸಿಕೊಳ್ಳುತ್ತದೆ. ಆ ಮೂಲಕ ಅವರು ನಿಮ್ಮನ್ನು ಹುಡುಕಬಹುದು.

ಕೊನೆಯದಾಗಿ ನೀವು Erase Device ಆಯ್ಕೆಯನ್ನೂ ಒತ್ತಬಹುದು. ಆದರೆ, ಇದರಿಂದ ನಿಮ್ಮ ಫೋನ್​ನಲ್ಲಿರುವ ಎಲ್ಲಾ ಮಾಹಿತಿಗಳೂ ಅಳಿಸಿ ಹೋಗುತ್ತವೆ. ಕಳವಾದ ಫೋನ್ ಆನ್​ಲೈನ್ ಬಂದಾಕ್ಷಣ ಡಿವೈಸ್​ನಲ್ಲಿರುವ ಮಾಹಿತಿಗಳು ಅಳಿಸಿ ಹೋಗುತ್ತವೆ. ಇದರಿಂದ ಇತರರು ನಿಮ್ಮ ಮಾಹಿತಿ ಪಡೆಯುವುದು ತಪ್ಪುತ್ತದೆ.

ಇನ್ನೂ ಕೆಲವು ಸುಲಭ ಮಾರ್ಗಗಳು ಹೀಗಿವೆ..
ಮೊಬೈಲ್ ಕಳೆದುಹೋದರೆ ಕೂಡಲೇ ನಾವು ಲಾಗ್​ಇನ್ ಆಗಿರುವ ಅಕೌಂಟ್​ಗಳನ್ನು ಬೇರೆ ಗ್ಯಾಡ್ಜೆಟ್ ಮೂಲಕ ಲಾಗ್​ಇನ್ ಆಗಿ  ಪಾಸ್​ವರ್ಡ್​ಗಳನ್ನೂ ಬದಲಾಯಿಸಿಕೊಳ್ಳಬೇಕು. ಬ್ಯಾಂಕ್ ಖಾತೆ, ಶಾಪಿಂಗ್ ಸೈಟ್ ಇತ್ಯಾದಿಗಳು ಮೊಬೈಲ್ ಫೋನ್​ನಲ್ಲಿ ಅಳವಡಿಕೆಯಾಗಿರುವುದರಿಂದ ಸಮಸ್ಯೆ ತಪ್ಪಿಸಲು ಅಕೌಂಟ್ ಲಾಗ್​ಔಟ್ ಆಗುವುದು ಅನಿವಾರ್ಯ. ಹೆಚ್ಚಿನ ಜಾಗೃತೆಗಾಗಿ, ನಮ್ಮ ಬ್ಯಾಂಕ್​ಗೂ ಫೋನ್ ಕಳುವಾದ ಬಗ್ಗೆ ಮಾಹಿತಿ ತಿಳಿಸುವುದು ಉತ್ತಮ.

ಇಷ್ಟೇ ಅಲ್ಲದೆ, ನಾವು ಇತ್ತೀಚೆಗೆ ಕ್ಲೌಡ್ ಬೇಸ್ಡ್ ಮೊಬೈಲ್ ಫೋನ್​ಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಅಂದರೆ, ಎಲ್ಲಾ ಮಾಹಿತಿಗಳು ನಮ್ಮ ಗೂಗಲ್ ಸ್ಟೋರೇಜ್​ನಲ್ಲಿ ಶೇಖರಣೆಯಾಗಿರುತ್ತದೆ. ಆದ್ದರಿಂದ, ಅವುಗಳಿಂದಲೂ ಮುಖ್ಯ ಮಾಹಿತಿಗಳನ್ನು ಹಿಂತೆಗೆಯುವುದು ಉತ್ತಮ. ಈ ಪ್ರಮುಖ ಕೆಲಸಗಳನ್ನು ಮಾಡುವುದರ ಜೊತೆಗೆ, ನಾವು ಪೊಲೀಸ್ ದೂರು ಕೊಡಬಹುದು.

ಇದನ್ನೂ ಓದಿ: 13 ವರ್ಷದ ಒಳಗಿನ ಮಕ್ಕಳು ಕೂಡ ಇನ್​ಸ್ಟಾಗ್ರಾಂ ಖಾತೆ ತೆರೆಯಬಹುದು.. ಫೇಸ್​ಬುಕ್​ನಿಂದ ಹೊಸ ಆ್ಯಪ್ ಲಾಂಚ್ ಸಾಧ್ಯತೆ

PhonePe Primary Account: ಫೋನ್​ಪೇ ಪ್ರಾಥಮಿಕ ಬ್ಯಾಂಕ್ ಖಾತೆ ಬದಲಾವಣೆ 6 ಹಂತಗಳಲ್ಲಿ ಮಾಡುವುದು ಹೇಗೆ ತಿಳಿಯಿರಿ

Published On - 10:14 pm, Fri, 19 March 21