ಜಮೀನು ಬಾಡಿಗೆ ಪಡೆದು ಈರುಳ್ಳಿ, ಮೆಣಸಿನಕಾಯಿ ಬೆಳೆದ; ಮಧ್ಯೆ ಇದನ್ನೂ ಬೆಳೆದುಬಿಟ್ಟ!

ಅಪ್ಪಟ ರೈತನಂತೆ ಪೋಸ್​ ಕೊಟ್ಟು, ಜಮೀನು ಬಾಡಿಗೆ ಪಡೆದು ಈರುಳ್ಳಿ, ಮೆಣಸಿನಕಾಯಿ ಬೆಳೆದಿದ್ದ; ಆದ್ರೆ ಏನು ದುರ್ಬುದ್ಧಿ ಇತ್ತೋ ಅವನಲ್ಲಿ.. ಬಂಗಾರದಂತ ಆ ಬೆಳೆಗಳ ಮಧ್ಯೆ, ವಿಷಕಾರಿ ಗಾಂಜಾ ಬೆಳೆಯನ್ನು ಬೆಳೆದುಬಿಟ್ಟ ಆ ಖದೀಮ! ಹೌದು, ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮದ‌ ಬಳಿ ಈರುಳ್ಳಿ ಹೊಲದಲ್ಲಿ ಗಾಂಜಾ ಪತ್ತೆಯಾಗಿದ್ದು, ರೈತನೊಬ್ಬನಿಗೆ ಅತಿಯಾಸೆ ಗತಿಕೇಡು ಎಂಬಂತಾಗಿದೆ. ಇದೀಗ ಹುಬ್ಬಳ್ಳಿ‌ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ, 18 ಕೆ.ಜಿ. ಹಸಿ ಗಾಂಜಾ ಗಿಡಗಗಳು ವಶಕ್ಕೆ ಪಡೆದಿದ್ದಾರೆ. ದುರ್ಬುದ್ಧಿತ ಯುವರೈತ […]

ಜಮೀನು ಬಾಡಿಗೆ ಪಡೆದು ಈರುಳ್ಳಿ, ಮೆಣಸಿನಕಾಯಿ ಬೆಳೆದ; ಮಧ್ಯೆ ಇದನ್ನೂ ಬೆಳೆದುಬಿಟ್ಟ!
ಸಾಧು ಶ್ರೀನಾಥ್​

Updated on: Sep 15, 2020 | 2:34 PM

ಅಪ್ಪಟ ರೈತನಂತೆ ಪೋಸ್​ ಕೊಟ್ಟು, ಜಮೀನು ಬಾಡಿಗೆ ಪಡೆದು ಈರುಳ್ಳಿ, ಮೆಣಸಿನಕಾಯಿ ಬೆಳೆದಿದ್ದ; ಆದ್ರೆ ಏನು ದುರ್ಬುದ್ಧಿ ಇತ್ತೋ ಅವನಲ್ಲಿ.. ಬಂಗಾರದಂತ ಆ ಬೆಳೆಗಳ ಮಧ್ಯೆ, ವಿಷಕಾರಿ ಗಾಂಜಾ ಬೆಳೆಯನ್ನು ಬೆಳೆದುಬಿಟ್ಟ ಆ ಖದೀಮ!

ಹೌದು, ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮದ‌ ಬಳಿ ಈರುಳ್ಳಿ ಹೊಲದಲ್ಲಿ ಗಾಂಜಾ ಪತ್ತೆಯಾಗಿದ್ದು, ರೈತನೊಬ್ಬನಿಗೆ ಅತಿಯಾಸೆ ಗತಿಕೇಡು ಎಂಬಂತಾಗಿದೆ. ಇದೀಗ ಹುಬ್ಬಳ್ಳಿ‌ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ, 18 ಕೆ.ಜಿ. ಹಸಿ ಗಾಂಜಾ ಗಿಡಗಗಳು ವಶಕ್ಕೆ ಪಡೆದಿದ್ದಾರೆ. ದುರ್ಬುದ್ಧಿತ ಯುವರೈತ ಚಂದ್ರು ಕಾಶಿನಾಥ ಬನ್ನಿಕೊಪ್ಪ (30) ಎಂಬಾತನನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಂದ ಜಮೀನು ಬಾಡಿಗೆ ಪಡೆದುಕೊಂಡಿದ್ದ ಕಾಶಿನಾಥ ಬನ್ನಿಕೊಪ್ಪ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳನ್ನು ಬೆಳೆದಿದ್ದ. ಅದ್ರೆ ಪಾಪಿ ಕಾಶಿನಾಥ ಬನ್ನಿಕೊಪ್ಪ‌ ಅವುಗಳ ಮಧ್ಯದಲ್ಲಿ ಅಲ್ಲಲ್ಲಿ ಗಾಂಜಾ ಸಸಿಗಳನ್ನೂ ಬೆಳೆಸಿಬಿಟ್ಟಿದ್ದ! ಅದರಿಂದಲೇ ಈಗ ಪೊಲೀಸರಿಗೆ ತಗಲಾಕೊಂಡಿದ್ದಾನೆ.

ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ರಮೇಶ ಗೋಕಾಕ ಹಾಗೂ ತಂಡ ದಾಳಿ ನಡೆಸಿ, ಗಾಂಜಾ ಸಸಿ ಜೊತೆಗೆ ಗಾಂಜಾಲಿ ಮಾಡಿರುವ ಕಾಶಿನಾಥ ಬನ್ನಿಕೊಪ್ಪನನ್ನೂ ಅಲ್ಲಿಂದ ಎಬ್ಬಿಸಿ ಕರೆದುಕೊಂಡುಬಂದಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು, ಆರೋಪಿ ಕಾಶಿನಾಥ ಬನ್ನಿಕೊಪ್ಪನನ್ನು ನ್ಯಾಯಾಂಗ ಬಂಧನಕ್ಕೆ ಬಿಟ್ಟು ಬಂದಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us