ಕೊಳೆತು ನಾರುತಿವೆ ನೆರೆಪೀಡಿತರ ಆಹಾರ ಕಿಟ್​ಗಳು, ಅಧಿಕಾರಿಗಳಿಗೆ ಮಾನವಿಯತೆಯೇ ಇಲ್ವಾ?

ಗದಗ : ಸರ್ಕಾರ ಮತ್ತು ಸರ್ಕಾರಿ ಅಧಿಕಾಗಳೆಂದ್ರೆ ಜನರಲ್ಲಿರೋ ಭಾವನೆ ಅಷ್ಟಕಷ್ಟೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಇಂಥ ಸರ್ಕಾರಿ ಅಧಿಕಾರಿಗಳ ನಿರ್ಲ್ಯಕ್ಷ್ಯ ಮತ್ತು ಬೇಜವಾಬ್ದಾರಿಗೆ ಮತ್ತೊಂದು ಉದಾಹರಣೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಹತ್ತು ತಿಂಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಲುಕಿ ನಲುಗಿದ ಸಾವಿರಾರು ಜನ ನಿರಾಶ್ರಿತರಿಗಾಗಿ ಸರ್ಕಾರ ನೀಡಿದ್ದ ಆಹಾರ ಕಿಟ್‌ಗಳನ್ನ ನೀಡದೇ ಅಧಿಕಾರಿಗಳು ಹಾಳು ಮಾಡಿ ಮಾನವಿಯತೆನ್ನೇ ಕೊಂದಿದ್ದಾರೆ. ಪ್ರವಾಹಕ್ಕೆ ತತ್ತರಿಸಿದ್ದ ಗದಗ ಜಿಲ್ಲೆಯ 42 ಗ್ರಾಮಗಳು ಹೌದು, ಗದಗ ಜಿಲ್ಲೆಯ ನರಗುಂದ ಹಾಗೂ […]

ಕೊಳೆತು ನಾರುತಿವೆ ನೆರೆಪೀಡಿತರ ಆಹಾರ ಕಿಟ್​ಗಳು, ಅಧಿಕಾರಿಗಳಿಗೆ ಮಾನವಿಯತೆಯೇ ಇಲ್ವಾ?
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 15, 2020 | 11:06 AM

ಗದಗ : ಸರ್ಕಾರ ಮತ್ತು ಸರ್ಕಾರಿ ಅಧಿಕಾಗಳೆಂದ್ರೆ ಜನರಲ್ಲಿರೋ ಭಾವನೆ ಅಷ್ಟಕಷ್ಟೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಇಂಥ ಸರ್ಕಾರಿ ಅಧಿಕಾರಿಗಳ ನಿರ್ಲ್ಯಕ್ಷ್ಯ ಮತ್ತು ಬೇಜವಾಬ್ದಾರಿಗೆ ಮತ್ತೊಂದು ಉದಾಹರಣೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಹತ್ತು ತಿಂಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಲುಕಿ ನಲುಗಿದ ಸಾವಿರಾರು ಜನ ನಿರಾಶ್ರಿತರಿಗಾಗಿ ಸರ್ಕಾರ ನೀಡಿದ್ದ ಆಹಾರ ಕಿಟ್‌ಗಳನ್ನ ನೀಡದೇ ಅಧಿಕಾರಿಗಳು ಹಾಳು ಮಾಡಿ ಮಾನವಿಯತೆನ್ನೇ ಕೊಂದಿದ್ದಾರೆ.

ಪ್ರವಾಹಕ್ಕೆ ತತ್ತರಿಸಿದ್ದ ಗದಗ ಜಿಲ್ಲೆಯ 42 ಗ್ರಾಮಗಳು ಹೌದು, ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ವಾಸನ, ಕೊಣ್ಣೂರ, ಮೆಣಸಗಿ, ಹೊಳೆ ಆಲೂರು ಸೇರಿದಂತೆ 42 ಗ್ರಾಮಗಳು ಮಲಪ್ರಭೆ ಹಾಗೂ ಬೆಣ್ಣೆ ಹಳ್ಳದ ಪ್ರವಾಹದಿಂದಾಗಿ ನೀರು ನುಗ್ಗಿ ಜಲಾವೃತ ಗೊಂಡಿದವು. ಆ 42 ಗ್ರಾಮಗಳ ಜನರ ಬದುಕು ಮೂರಾಬಟ್ಟೆಯಾಗಿತ್ತು. ಅನ್ನ ನೀರು ಸಿಗದೆ ಅದೆಷ್ಟೋ ಜನರು ಪರದಾಡಿದ್ರು. ವಸತಿ ವ್ಯವಸ್ಥೆ ಇಲ್ದೆ ಅದೆಷ್ಟೋ ಕುಟುಂಬಗಳು ರಸ್ತೆ ಬದಿಯಲ್ಲಿ ಗುಡಿಸಲು ಹಾಕಿ ಜೀವನ ಸಾಗಿಸಿದ್ರು. ಇದನ್ನೆಲ್ಲಾ ನೋಡಿದ ನಾಡಿನ ಜನರು ಜಲಾಸುರನ ಆರ್ಭಟಕ್ಕೆ ನಲುಗಿದವರಿಗಾಗಿ ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡಿದ್ರು.

ಅಧಿಕಾರಿಗಳ ಬೇಜವಾಬ್ದಾರಿಗೆ ಆಹಾರ ಕಿಟ್‌ಗಳು ನಾಶ ಆದ್ರೇ ಅದೇ ಪ್ರವಾಹ ಪೀಡಿತ ಪ್ರದೇಶದಲ್ಲಿನ ಅಧಿಕಾರಿಗಳು ಮಹಾ ಬೇಜವಾಬ್ದಾರಿ ತೋರಿದ್ದಾರೆ. ನೆರೆ ಸಂತ್ರಸ್ತರಿಗಾಗಿ ರಾಜ್ಯ ಸರ್ಕಾರ ನೀಡಿದ್ದ ದಿನಸಿ ಕಿಟ್ ಸಾಮಗ್ರಿಗಳನ್ನು ವಿತರಣೆ ಮಾಡದೆ ಕೊಳೆಯುವಂತೆ ಮಾಡಿದ್ದಾರೆ. ಅದ್ರಲ್ಲೂ ಗದಗ ಜಿಲ್ಲೆ ರೋಣ ತಾಲೂಕಿನ ನವಗ್ರಾಮ ಮೆಣಸಗಿಯ ಪಶು ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆಂದು ನೀಡಿದ 380 ಕಿಟ್‌ಗಳು 10 ತಿಂಗಳಲ್ಲಿಂದ ವಿತರಣೆ ಮಾಡದೆ ಅಲ್ಲಿಯೇ ಕೊಳೆತು ನಾರುತಿವೆ.

ಬಡ ಜನರ ಹೊಟ್ಟೆ ಸೇರಬೇಕಿದ್ದ ಆಹಾರ ಧಾನ್ಯಗಳು ಹುಳುಗಳ ಪಾಲಾಗುವಂತೆ ಮಾಡಿದ್ದಾರೆ ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು. ಇದು ನೆರೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಆಹಾರ ಕಿಟ್‌ನಲ್ಲಿ ಏನೇನಿದ್ದವು? ಮೆಣಸಗಿ ಗ್ರಾಮದ ಪಶು ಆಸ್ಪತ್ರೆಯಲ್ಲಿ ಹೀಗೆ ಕೊಳೆತು ಹುಳು ಹತ್ತಿರುವ ಕಿಟ್‌ಗಳಲ್ಲಿ 10 ಕೆಜಿ ಅಕ್ಕಿ, 1 ಲೀಟರ್ ಅಡುಗೆ ಎಣ್ಣೆ, 1 ಕೆಜಿ ಉಪ್ಪು, ತೊಗರಿ ಬೆಳೆ, 5 ಲೀಟರ್ ಸೀಮೆ ಎಣ್ಣೆ ನೀಡಲಾಗಿತ್ತು. ಇದಕ್ಕಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ.

ಸರ್ಕಾರ ನಿರಾಶ್ರಿತರಿಗಾಗಿ ಇಷ್ಟೇಲ್ಲಾ ಮಾಡಿದ್ರೂ, ನೀರಾಶ್ರಿತರಿಗಾಗಿ ನೀಡಿರುವ ಕಿಟ್‌ಗಳು ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಕೆಟ್ಟು ಹೋಗಿವೆ. ಸರ್ಕಾರ ಕೂಡಲೇ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಅಮಾನತು ಮಾಡಬೇಕು ಎಂದು ಸ್ಥಳೀಯ ನೀರಾಶ್ರಿತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Published On - 5:40 pm, Sun, 14 June 20

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್