AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ಪಾತ್ರಧಾರಿ ಸುಶಾಂತ್​, ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಶಿಕ್ಷಣ ತೊರೆಯಲು ಕಾರಣ ಆಕೆ..?!

ಹಿಂದಿ​ ಚಿತ್ರರಂಗಕ್ಕೆ 2020ನೇ ವರ್ಷ ಬಹಳ ಆಘಾತಕಾರಿಯಾಗಿ ಪರಿಣಮಿಸಿದೆ. ಇರ್ಫಾನ್​ ಖಾನ್​, ರಿಷಿ ಕಪೂರ್​ ಮತ್ತು ವಾಜಿದ್​ ಖಾನ್​ರಂಥ ಘಟಾನುಘಟಿಗಳನ್ನು ಕಳೆದುಕೊಂಡ ಬಾಲಿವುಡ್​ ಈಗ ಮತ್ತೊಬ್ಬ ಪ್ರತಿಭಾವಂತ ಕಲಾವಿದ ಸುಶಾಂತ್​ ಸಿಂಗ್​ ರಜಪೂತ್​ರನ್ನು ಕಳೆದುಕೊಂಡಿದೆ. ಇತರೆ ಅಗಲಿದ ಚಿತ್ರರಂಗದ ಗಣ್ಯರಂತೆ ಸುಶಾಂತ್​ ಕೂಡ ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಛಾಪು ಮೂಡಿಸಿಬಿಟ್ಟಿದ್ದರು. ಸ್ಟ್ಯಾನ್​ಫರ್ಡ್​ ವಿದ್ಯಾಭ್ಯಾಸದ ಅವಕಾಶ ತೊರೆಯಲು ಕಾರಣ ಆ ಒಂದು ಆಸೆ..! ಭಾರತೀಯ ಕ್ರಿಕೆಟ್​ ರಂಗದ ದೈತ್ಯ ಪ್ರತಿಭೆ ಧೋನಿ ಅವರ ಜೀವನಾಧಾರಿತ ಸಿನಿಮಾದಲ್ಲಿ ತಮ್ಮ […]

ಧೋನಿ ಪಾತ್ರಧಾರಿ ಸುಶಾಂತ್​, ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಶಿಕ್ಷಣ ತೊರೆಯಲು ಕಾರಣ ಆಕೆ..?!
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 15, 2020 | 11:09 AM

ಹಿಂದಿ​ ಚಿತ್ರರಂಗಕ್ಕೆ 2020ನೇ ವರ್ಷ ಬಹಳ ಆಘಾತಕಾರಿಯಾಗಿ ಪರಿಣಮಿಸಿದೆ. ಇರ್ಫಾನ್​ ಖಾನ್​, ರಿಷಿ ಕಪೂರ್​ ಮತ್ತು ವಾಜಿದ್​ ಖಾನ್​ರಂಥ ಘಟಾನುಘಟಿಗಳನ್ನು ಕಳೆದುಕೊಂಡ ಬಾಲಿವುಡ್​ ಈಗ ಮತ್ತೊಬ್ಬ ಪ್ರತಿಭಾವಂತ ಕಲಾವಿದ ಸುಶಾಂತ್​ ಸಿಂಗ್​ ರಜಪೂತ್​ರನ್ನು ಕಳೆದುಕೊಂಡಿದೆ. ಇತರೆ ಅಗಲಿದ ಚಿತ್ರರಂಗದ ಗಣ್ಯರಂತೆ ಸುಶಾಂತ್​ ಕೂಡ ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಛಾಪು ಮೂಡಿಸಿಬಿಟ್ಟಿದ್ದರು.

ಸ್ಟ್ಯಾನ್​ಫರ್ಡ್​ ವಿದ್ಯಾಭ್ಯಾಸದ ಅವಕಾಶ ತೊರೆಯಲು ಕಾರಣ ಆ ಒಂದು ಆಸೆ..! ಭಾರತೀಯ ಕ್ರಿಕೆಟ್​ ರಂಗದ ದೈತ್ಯ ಪ್ರತಿಭೆ ಧೋನಿ ಅವರ ಜೀವನಾಧಾರಿತ ಸಿನಿಮಾದಲ್ಲಿ ತಮ್ಮ ಮನೋಜ್ಞ ನಟನೆಯಿಂದ ಇಡೀ ದೇಶದಲ್ಲೇ ಗುರುತಿಸಿಕೊಂಡಿದ್ದ ಈ ನಟ ಮೂಲತ: ಬಣ್ಣದ ಲೋಕದ ಬಗ್ಗೆ ಯಾವುದೇ ಆಸಕ್ತಿ ಹೊಂದಿರಲಿಲ್ಲ ಎಂದು ಹೇಳಿದರೆ ಯಾರೂ ಸಹ ನಂಬೋದಿಲ್ಲ.

ಚೆನ್ನಾಗಿ ಓದಿ ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಹಂಬಲವನ್ನು ಸುಶಾಂತ್​ ಹೊಂದಿದ್ದರು. ಅವರ ಆಸೆಯಂತೆ ಸ್ಟ್ಯಾನ್​ಫರ್ಡ್​ ವಿಶ್ವವಿದ್ಯಾಲಯದಿಂದ ಇವರಿಗೆ ಸ್ಕಾಲರ್​ಶಿಪ್​ ಸಹ ದೊರೆತಿತ್ತು. ಆದರೆ ಅಲ್ಲೇ ನೋಡಿ ಇವರ ಕಥೆಯಲ್ಲಿ ಟ್ವಿಸ್ಟ್​ ಹುಟ್ಟಿದ್ದು.

ಸುಂದರ ಹುಡುಗಿಯ ಹಂಬಲದಲ್ಲಿ ವಿದ್ಯಾಭ್ಯಾಸ ಬಿಟ್ಟರು! ಅದೇಕೋ ಏನೋ ತನ್ನ ಜೀವನದಲ್ಲಿ ಯಾವುದಾದರೂ ಒಂದು ಸುಂದರ ಹುಡುಗಿಯೊಂದಿಗೆ ಲವ್ವಲ್ಲಿ ಬೀಳುವ ಹಂಬಲ ತನ್ನಲ್ಲಿ ಹುಟ್ಟಿತ್ತು ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವತಃ ಸುಶಾಂತ್​ ಹೇಳಿಕೊಂಡಿದ್ದರು. ಆ ಒಂದು ಆಸೆಯಿಂದಾಗಿ, ಸುಶಾಂತ್​ಗೆ ಸಿಕ್ಕಿದ್ದ ಸ್ಕಾಲರ್​ಶಿಪ್ ತೊರೆದು, ಕನಸಿನ ನಗರಿ ಮುಂಬೈನತ್ತ ಮುಖ ಮಾಡಲು ಪ್ರೇರಣೆಯಾಯಿಗಿತ್ತಂತೆ.

ಬಣ್ಣದ ಲೋಕದತ್ತ ಸುಶಾಂತ್​ ಪಯಣ ಮುಂಬೈಗೆ ಮೊಟ್ಟಮೊದಲ ಬಾರಿ ಬಂದ ಸುಶಾಂತ್​, ನಗರದ ವರ್ಸೋವಾದಲ್ಲಿ 6 ಜನ ಸ್ನೇಹಿತರೊಂದಿಗೆ ಒಂದು ರೂಮ್​ ಶೇರ್​ ಮಾಡಿದ್ರು. ಅಲ್ಲಿಂದಲೇ ಶುರುವಾಗಿದ್ದು ಅವರ ನಟನಾ ಪಯಣ.  ಹಲವು ಸತತ ಪ್ರಯತ್ನಗಳ ನಂತರ ಪ್ರತಿಷ್ಠಿತ ಹಿಂದಿ ಧಾರಾವಾಹಿ ನಿರ್ಮಾಪಕಿ ಏಕ್ತಾ ಕಪೂರ್​ ನಿರ್ಮಾಣದ ‘ಪವಿತ್ರ ರಿಷ್ತಾ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ರು.

ಕೆಲವು ಧಾರಾವಾಹಿಗಳ ನಂತ್ರ ಬೆಳ್ಳಿ ಪರದೆಯ ಮೇಲೆ ಮಿಂಚ ಬೇಕು ಎಂಬ ಆಸೆ ಹೊತ್ತ ಸುಶಾಂತ್​ ‘ಕಾಯ್​ ಪೋಚೆ’ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಹಲವು ಸಿನಿಮಾಗಳ ನಂತ್ರ ನಟಿಸಿದ ಎಂ.ಎಸ್.​ ಧೋನಿ (ದಿ ಅನ್​ಟೋಲ್ಡ್​ ಸ್ಟೋರಿ) ಮೂಲಕ ಖ್ಯಾತಿ ಪಡೆದ ಸುಶಾಂತ್​ರ ನಾಗಾಲೋಟವನ್ನ ತಡೆಯುವವರೇ ಇರಲಿಲ್ಲ.

‘ಶಾರೂಖ್​ ಖಾನ್​ರ DDLJ ನನಗೆ ಪ್ರೇರಣೆ’ ಬಾಲಿವುಡ್​ ದಿಗ್ಗಜ ಶಾರೂಖ್​ ಖಾನ್​ರ​ ದೊಡ್ಡ ಅಭಿಮಾನಿಯಾಗಿದ್ದ ಸುಶಾಂತ್​ ತಮ್ಮ ಜಿವನದಲ್ಲಿ ಅವರ ಸಿನಿಮಾವೊಂದು ಪ್ರೇರಣೆ ಎಂದು ಒಮ್ಮೆ ಹೇಳಿದ್ರು. ಶಾರೂಖ್​ ನಟನೆಯ ‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಚಿತ್ರವನ್ನು ತಮ್ಮ ಬಾಲ್ಯದಲ್ಲಿ ನೋಡಿದ್ದ ಸುಶಾಂತ್​ಗೆ ಜೀವನದ ದಿಕ್ಕೇ ಬದಲಾಗಿ ಹೋಯ್ತಂತೆ.

ದೇಶದ ಸಂಪ್ರದಾಯಕ್ಕೂ ಗೌರವ ಕೊಡುತ್ತಾ ತನ್ನತನವನ್ನು ಬಿಟ್ಟುಕೊಡದೆ ಬಾಳುವುದನ್ನು ಶಾರೂಖ್​ರ​ ಪಾತ್ರ ಹೇಳಿಕೊಟ್ಟಿತಂತೆ. ಹಲವು ಬಾರಿ ಕನ್ನಡಿಯ ಮುಂದೆ ಶಾರೂಖ್​ ಸಿನಿಮಾದ ಹಾಡಿನ ನಕಲು ಸಹ ಮಾಡುತ್ತಿದ್ರು ಎಂದು ಹೇಳಿಕೊಂಡಿದ್ದರು.

ಅದೇನೇ ಇರಲಿ, ಯಶಸ್ಸಿನ ಹಾದಿಯಲ್ಲಿ ಇನ್ನೂ ಬಹಳಷ್ಟು ದೂರ ಪಯಣಿಸಬೇಕಿದ್ದ ಈ ನಟ ಇಷ್ಟು ಬೇಗ ಇಹಲೋಕ ತ್ಯಜಿಸಲು ಕಾರಣವೇನು ಎಂದು ಗೊತ್ತಾಗಿಲ್ಲ. ಒಟ್ಟಾರೆ, ಮುಂಬರುವ ದಿನಗಳಲ್ಲಿ ಆ್ಯಂಕ್ಟಿಂಗ್​ನಲ್ಲಿ  ಹಲವು ಮೈಲಿಗಲ್ಲನ್ನು ದಾಟಬೇಕಿದ್ದ ನಟ ಇಂದು ತನ್ನ ಬದುಕಿನ ಕೊನೆಯ ಅಧ್ಯಾಯವನ್ನು ಮುಗಿಸಿ ವಿದಾಯ ಹೇಳಿದ್ದಾರೆ.

https://www.facebook.com/IamSRK/posts/4668781053148121

Published On - 6:44 pm, Sun, 14 June 20

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್