ಚಿತ್ರದುರ್ಗ: 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನೇ ಕಾರಣ. ಪಕ್ಷೇತರ ಶಾಸಕನಾಗಿದ್ದ ನಾನೇ ಮೊದಲ ವಿಕೆಟ್, ಮೊದಲ ಕುರಿಯಾಗಿ ಹಳ್ಳಕ್ಕೆ ಬಿದ್ದಿದ್ದು ನಾನೇ. ಈಗ ಸಿಎಂ ಯಡಿಯೂರಪ್ಪ ಲೆಫ್ಟ್, ರೈಟ್ ಇರೋರು ಆಗ ಇರಲಿಲ್ಲ. ಅವರು ಯಾರೂ ಆಗ ರಾಜೀನಾಮೆ ಕೊಟ್ಟು ಬಂದಿರಲಿಲ್ಲ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.
ನಾನೂ ಸಚಿವ ಸ್ಥಾನದ ಆಕಾಂಕ್ಷಿ:
17 ಜನರ ತ್ಯಾಗದಿಂದಾಗಿ ಈಗ ಬಿಜೆಪಿ ಸರ್ಕಾರ ಬಂದಿದೆ. 17 ಜನರಿಗೆ ನ್ಯಾಯ ನೀಡುವುದರ ಜತೆಗೆ ನನ್ನನ್ನೂ ಪರಿಗಣಿಸಬೇಕು. 2008ರಲ್ಲಿ ಸರ್ಕಾರ ರಚನೆಗೆ ಮೂವರು ಶಾಸಕರು ಬೇಕಿತ್ತು. ಆಗ ಸರ್ಕಾರ ರಚನೆಗೆ ಮೊದಲು ನಾನು ಬೆಂಬಲಿಸಿದ್ದೆ. 2008ರ ಬಿಜೆಪಿ ಸರ್ಕಾರದಲ್ಲಿ ನನಗೆ ಅನ್ಯಾಯ ಆಗಿತ್ತು. ಪ್ರಬಲ ಖಾತೆ, ಜಿಲ್ಲಾ ಉಸ್ತುವಾರಿ, ಮೆಡಿಕಲ್ ಕಾಲೇಜು, ಸಾವಿರಾರು ಕೋಟಿ ಅನುದಾನ ಸೇರಿದಂತೆ ಯಾವುದೂ ಆಗ ಕೊಡಲಿಲ್ಲ. ಆಗ ಆಗಿರುವ ಅನ್ಯಾಯವನ್ನು ಈಗ ಸರಿದೂಗಿಸಬೇಕು ಎಂದು ಗೂಳಿಹಟ್ಟಿ ಶೇಖರ್ ಆಗ್ರಹಿಸಿದ್ರು.
Published On - 5:25 pm, Tue, 17 December 19