AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರುತೇಶ್ವರನ ಜಾತ್ರೆಯಲ್ಲಿ ಮೂಟೆಗಟ್ಟಲೆ ತೆಂಗಿನಕಾಯಿ ತೂರಾಡಿ ಭಕ್ತರ ಸಂಭ್ರಮ

ಬಾಗಲಕೋಟೆ: ನಿಂತಲ್ಲೇ ಕಿಕ್ ಕೊಡೋ ಡಿಜೆ ಮ್ಯೂಸಿಕ್.. ಹೆಜ್ಜೆ ಹೆಜ್ಜೆಗೂ ಹೆಚ್ಚಾಗೋ ಜೋಶ್.. ತಾಳ ಮೇಳ ಕಿವಿಗೆ ಬೀಲ್ತಾ ಇದ್ರೆ ಕುಣೀಬೇಕು ಅನ್ಸುತ್ತೆ.. ಎಲ್ಲರ ಜೊತೆ ಎಲ್ಲವನ್ನೂ ಮರೆತು ಮೈ ಮನ ಕುಣಿಸ್ಬೇಕು ಅನ್ಸುತ್ತೆ.. ಅತ್ತ ರೋಡ್ ತುಂಬಾ ಕುಣಿಯೋರ ಗ್ಯಾಂಗ್.. ಇತ್ತ ಭಕ್ತಿಯ ಅಲೆಯಲ್ಲೇ ತೇಲೋ ಮಂದಿ.. ಸರ್ವಾಲಂಕಾರಗಳಲ್ಲಿ ಕಂಗೊಳಿಸೋ ದೇವನನ್ನ ನೋಡ್ತಾ ಜನ ಭಕ್ತಿಯಲ್ಲಿ ಕಳೆದೋಗಿದ್ರು. ತೆಂಗಿನ ಕಾಯಿ ತೂರೋದೇ ಜಾತ್ರೆಯ ವಿಶೇಷ:  ಬಾಗಲಕೋಟೆ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯ ಸಂಭ್ರಮವಿದು. […]

ಮಾರುತೇಶ್ವರನ ಜಾತ್ರೆಯಲ್ಲಿ ಮೂಟೆಗಟ್ಟಲೆ ತೆಂಗಿನಕಾಯಿ ತೂರಾಡಿ ಭಕ್ತರ ಸಂಭ್ರಮ
ಸಾಧು ಶ್ರೀನಾಥ್​
|

Updated on:Dec 18, 2019 | 12:13 PM

Share

ಬಾಗಲಕೋಟೆ: ನಿಂತಲ್ಲೇ ಕಿಕ್ ಕೊಡೋ ಡಿಜೆ ಮ್ಯೂಸಿಕ್.. ಹೆಜ್ಜೆ ಹೆಜ್ಜೆಗೂ ಹೆಚ್ಚಾಗೋ ಜೋಶ್.. ತಾಳ ಮೇಳ ಕಿವಿಗೆ ಬೀಲ್ತಾ ಇದ್ರೆ ಕುಣೀಬೇಕು ಅನ್ಸುತ್ತೆ.. ಎಲ್ಲರ ಜೊತೆ ಎಲ್ಲವನ್ನೂ ಮರೆತು ಮೈ ಮನ ಕುಣಿಸ್ಬೇಕು ಅನ್ಸುತ್ತೆ.. ಅತ್ತ ರೋಡ್ ತುಂಬಾ ಕುಣಿಯೋರ ಗ್ಯಾಂಗ್.. ಇತ್ತ ಭಕ್ತಿಯ ಅಲೆಯಲ್ಲೇ ತೇಲೋ ಮಂದಿ.. ಸರ್ವಾಲಂಕಾರಗಳಲ್ಲಿ ಕಂಗೊಳಿಸೋ ದೇವನನ್ನ ನೋಡ್ತಾ ಜನ ಭಕ್ತಿಯಲ್ಲಿ ಕಳೆದೋಗಿದ್ರು.

ತೆಂಗಿನ ಕಾಯಿ ತೂರೋದೇ ಜಾತ್ರೆಯ ವಿಶೇಷ:  ಬಾಗಲಕೋಟೆ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯ ಸಂಭ್ರಮವಿದು. ಈ ಜಾತ್ರೆಯಲ್ಲಿ ವಿಶೇಷ ಅಂದ್ರೆ ತೆಂಗಿನ ಕಾಯಿ ತೂರೋದು. ಜಾತ್ರೆಗೆ ಬರೋ ಭಕ್ತರು ಮೂಟೆಗಟ್ಟಲೇ ತಂದ ತೆಂಗಿನಕಾಯಿಯನ್ನ ದೇವಸ್ಥಾನದ ಆವರಣದಲ್ಲಿ ತೂರಾಡಿ ಸಂಭ್ರಮ ಪಡುತ್ತಾರೆ. ತೂರಿದ ತೆಂಗಿನಕಾಯಿಯನ್ನು ಹಿಡಿಯೋದಕ್ಕೆ ಯುವಕರು ಮುಗಿಬೀಳ್ತಾರೆ. ಈ ತೆಂಗಿನಕಾಯಿ ತೂರುವ ಸಂಭ್ರಮವನ್ನು ನೋಡ್ಬೇಕು ಅಂತಾನೇ ಸಾವಿರಾರು ಜನ ಬರ್ತಾರೆ. ಮಾರುತೇಶ್ವರನಿಗೆ ಪೂಜೆ ಸಲ್ಲಿಸಿ ಜಾತ್ರೆಯ ಸಂಭ್ರಮ ಕಂಡು ಸಂಭ್ರಮ ಪಡುತ್ತಾರೆ.

ಜಾತ್ರೆಗೆ ನೂರಾರು ವರ್ಷಗಳ ಇತಿಹಾಸ:  ಇನ್ನು ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹನುಮದೇವರ ಹೊತ್ತ ಪಲ್ಲಕ್ಕಿ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಜಾತ್ರೆಗೆ ಬಂದ ಭಕ್ತರೆಲ್ಲರೂ ಪಲ್ಲಕ್ಕಿ ಮೆರವಣಿಗೆ ವೇಳೆ ಹೂವು, ಮಂಡಕ್ಕಿಯನ್ನ ಪಲ್ಲಕ್ಕಿ ಮೇಲೆ ತೂರಿ ಭಕ್ತಿ ಸಮರ್ಪಿಸಿದರು. ಇನ್ನು ಈ ಜಾತ್ರೆಯಲ್ಲಿ ತೆಂಗಿನ ಕಾಯಿ ತೂರುವ ಹಿನ್ನೆಲೆಗೆ ನೂರಾರು ವರ್ಷಗಳ ಇತಿಹಾಸವಿದೆ.

ಹಿಂದೆ ಮಾರುತೇಶ್ವರ ದೇವರಿಗೆ ಭಕ್ತನೊಬ್ಬ ಬೇಡಿಕೆ ಈಡೇರಿದಾಗ ತೆಂಗಿನ ಕಾಯಿ ತೂರಿ ಹರಕೆ ತೀರಿಸಿದ್ದನಂತೆ. ಅಂದಿನಿಂದ ಈ ಹನುಮನಿಗೆ ಬೇಡಿಕೊಂಡವರೆಲ್ಲರೂ ದೇವಸ್ಥಾನಕ್ಕೆ ತೆಂಗಿನಕಾಯಿ ತೂರುತ್ತಾ ಹರಕೆ ಸಮರ್ಪಿಸ್ತಾರೆ. ಮನೆ ಮಾಳಿಗೆ ಮೇಲೆ ನಿಂತು ಸಾವಿರಾರು ತೆಂಗಿನಕಾಯಿಗಳನ್ನು ಆಕಾಶಕ್ಕೆ ಮೇಲ್ಮುಖ ಮಾಡಿ ತೂರ್ತಾರೆ.

ಹೀಗೆ ತೂರಿ ಬಂದ ತೆಂಗಿನಕಾಯಿಯನ್ನ ಹಿಡಿಯೋಕೆ ಅಂತ್ಲೇ ಕೆಲವ್ರು ಸರ್ಕಸ್ ಮಾಡ್ತಾರೆ. ಜಾತ್ರೆಗಳು ಅಂದ್ರೆನೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಜಾತ್ರೆಯಲ್ಲೂ ಒಂದೊಂದು ರೀತಿಯ ಆಚರಣೆಗಳಿರುತ್ತವೆ. ಅದ್ರಂತೆ ಈ ಜಾತ್ರೆಯಲ್ಲಿ ತೆಂಗಿನಕಾಯಿ ತೂರೋದು ಪ್ರತೀತಿಯಾಗಿ ಬಂದಿದ್ದು, ಇದು ಇಲ್ಲಿನ ಜನರ ನಂಬಿಕೆಯೂ ಆಗಿದೆ.

Published On - 6:49 am, Wed, 18 December 19

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ