
ಬೆಂಗಳೂರು: ಇಂದು ಸಂಜೆಯೇ ನಾನು ಮಂತ್ರಿ ಆಗಬಹುದು, ಹೇಳಲಾಗಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೇಟಿ ಬಳಿಕ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಘೋಷಿಸಿಕೊಂಡಿದ್ದಾರೆ.
ಎಂದಿನಂತೆ ಸಿಎಂ ಬಿಎಸ್‌ವೈ ಭೇಟಿಗೆ ಬಂದಿದ್ದ MLC ಆರ್.ಶಂಕರ್ ಸಿಎಂ ಭೇಟಿ ಮಾಡಿ ಅವರೊಂದಿಗೆ ಜೊತೆ ಚರ್ಚೆ ನಡೆಸಿ ಸಂತೋಷದಿಂದ ಆಚೆ ಬಂದ ಬಳಿಕ ಮಾಧ್ಯಮದೊಂದಿಗೆ ಮಾತನಾಡುದ್ರು.
ಈ ವೇಳೆ ಅವರು ಹೇಳಿದ್ದು: ಎಂದಿನಂತೆ ಇಂದೂ ಸಿಎಂ ಬಿಎಸ್‌ವೈ ಭೇಟಿಗೆ ಬಂದಿದ್ದೆ. 2-3 ದಿನದಲ್ಲಿ ಮಂತ್ರಿ ಆಗ್ತೀಯ ಎಂದು ಸಿಎಂ ಹೇಳಿದ್ರು. ನಾನು, ಉಮೇಶ್ ಕತ್ತಿ ಸಿಎಂ ಜೊತೆ ತಿಂಡಿ ಮಾಡುದ್ವಿ. ಈ ವೇಳೆ ಶಾಸಕ ಉಮೇಶ್ ಕತ್ತಿಗೂ ಬಿಎಸ್‌ವೈ ಇದನ್ನೇ ಹೇಳಿದ್ರು. ಇಬ್ಬರೂ ಜತೆಯಲ್ಲೇ ಮಂತ್ರಿ ಆಗ್ತೀರಿ ಎಂದು ಹೇಳಿದ್ರು. 2-3 ದಿನದಲ್ಲಿ ಮಂತ್ರಿ ಆಗ್ತೀರಿ, ಆಗ ಅಹವಾಲು ಕೊಡಿ ಎಂದು ಅಹವಾಲು ನೀಡಲು ಮುಂದಾದ ಕತ್ತಿ ಬಳಿ ಸಿಎಂ ಹೇಳಿದ್ರು.
ಈಗ ವಾತಾವರಣ ತಿಳಿಯಾಗಿದೆ. ನಾನು ಮಂತ್ರಿ ಆಗುವ ಭರವಸೆ ಇದೆ. ಇವತ್ತು ಸಂಜೆಯೇ ಮಂತ್ರಿ ಆಗಬಹುದು ನಾನು ಹೇಳಕ್ಕಾಗಲ್ಲ. ಸಿಎಂ ಇನ್ನು ಯಾರ್ಯಾರನ್ನು ಮಂತ್ರಿ ಮಾಡ್ತಾರೋ ನೋಡಬೇಕು ಎಂದು ಹೇಳಿದ್ರು.
Published On - 11:04 am, Tue, 5 January 21