ಪುಣ್ಯಾತ್ಮ ಈ ಟೆಕ್ಕಿ 15 ವರ್ಷದಿಂದ ಸಿಕ್ ಲೀವ್‌ನಲ್ಲಿದ್ದಾನೆ, ಕಂಪನಿಯೂ 55 ಲಕ್ಷ ಸಂಬಳ ನೀಡಿದೆ, ಆದರೂ ಸಂಬಳ ಏರಿಕೆ ಮಾಡಿಲ್ಲ ಅಂತಾ ಕಂಪನಿ ವಿರುದ್ಧ ದೂರು!

ಉದ್ಯೋಗಿ ಫೆಬ್ರವರಿ 2022 ರಲ್ಲಿ ಕಂಪನಿಯ ವಿರುದ್ಧ ಅರ್ಜಿಯನ್ನು ಸಲ್ಲಿಸಿದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಕಚೇರಿಗೆ ಬರುವ ನೌಕರರಿಗೆ ಮಾತ್ರ ವೇತನ ಹೆಚ್ಚಳವಾಗಲಿದ್ದು, ಕೆಲಸ ಮಾಡದ ನೌಕರರಿಗೆ ವೇತನ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದರು

ಪುಣ್ಯಾತ್ಮ ಈ ಟೆಕ್ಕಿ 15 ವರ್ಷದಿಂದ ಸಿಕ್ ಲೀವ್‌ನಲ್ಲಿದ್ದಾನೆ, ಕಂಪನಿಯೂ 55 ಲಕ್ಷ ಸಂಬಳ ನೀಡಿದೆ, ಆದರೂ ಸಂಬಳ ಏರಿಕೆ ಮಾಡಿಲ್ಲ ಅಂತಾ ಕಂಪನಿ ವಿರುದ್ಧ ದೂರು!
ಪುಣ್ಯಾತ್ಮ ಸಂಬಳ ಏರಿಕೆ ಮಾಡಿಲ್ಲ ಅಂತಾ ಕಂಪನಿಯ ವಿರುದ್ಧ ದೂರು ನೀಡಿದ!
Updated By: ಸಾಧು ಶ್ರೀನಾಥ್​

Updated on: May 15, 2023 | 5:34 PM

ಆರ್ಥಿಕ ಹಿಂಜರಿತದಿಂದಾಗಿ ಹಲವು ಕಂಪನಿಗಳು ಲಕ್ಷಾಂತರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಒಂದೆಡೆ ಉದ್ಯೋಗ ಸಿಗುತ್ತದೆಯೋ ಇಲ್ಲವೋ ಎಂದು ತಿಳಿಯದೆ ಯುವಜನತೆ ದಿನ ದೂಡುತ್ತಿದ್ದಾರೆ. ಆದರೆ ಐಟಿ ಉದ್ಯೋಗಿಯೊಬ್ಬರು 15 ವರ್ಷಗಳಿಂದ ಅನಾರೋಗ್ಯದ ರಜೆಯಲ್ಲಿದ್ದಾರೆ! ಅವರು ಕೆಲಸ ಮಾಡುವ ಕಂಪನಿಯೂ ವರ್ಷಕ್ಕೆ 55 ಲಕ್ಷ ರೂ. ಸಂಬಳವನ್ನೂ ನೀಡಿದೆ. ಹಲವು ವರ್ಷಗಳಿಂದ ರಜೆಯಲ್ಲಿದ್ದರೂ ಕೆಲಸ ಕಳೆದುಕೊಳ್ಳದಂತೆ ಎಚ್ಚರ ವಹಿಸುವ ಬದಲು ಕಂಪನಿಯ ವಿರುದ್ಧವೇ ಪ್ರಕರಣ ದಾಖಲಿಸಿದ್ದಾನೆ. ಈಗಿನ ಸಂಬಳ ಸಾಲುತ್ತಿಲ್ಲ, ಕಂಪನಿ ಸಂಬಳ ಹೆಚ್ಚಿಸುತ್ತಿಲ್ಲ ಎಂಬುದು ವ್ಯಕ್ತಿಯ ದೂರು. ಈ ವಿಚಿತ್ರ ಘಟನೆ ಯುನೈಟೆಡ್​​ ಕಿಂಗ್ಡಮ್​​​ನಲ್ಲಿ ನಡೆದಿದೆ.

ಪ್ರಸಿದ್ಧ ಐಬಿಎಂ ಕಂಪನಿಯ ಉದ್ಯೋಗಿ ಇಯಾನ್ ಕ್ಲಿಫರ್ಡ್ ಸೆಪ್ಟೆಂಬರ್ 2008 ರಿಂದ ಅನಾರೋಗ್ಯ ರಜೆ ತೆಗೆದುಕೊಂಡ ನಂತರ 15 ವರ್ಷಗಳ ಕಾಲ ಮನೆಯಲ್ಲಿಯೇ ಇದ್ದಾರೆ. ಕಂಪನಿ ನಿಯಮಗಳ ಪ್ರಕಾರ.. ಪ್ರತಿ ತಿಂಗಳು ಸಂಬಳ ಪಡೆಯುತ್ತಿದ್ದಾರೆ. 15 ವರ್ಷಗಳಿಂದ ಅನಾರೋಗ್ಯ ರಜೆಯಲ್ಲಿರುವ ಐಬಿಎಂ ಉದ್ಯೋಗಿ ವರ್ಷಕ್ಕೆ 55 ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ. 2013 ರಿಂದ ವೈದ್ಯಕೀಯವಾಗಿ ನಿವೃತ್ತರಾಗಿದ್ದಾರೆ. ಆದರೆ, ತಮಗೆ ಸಿಗುತ್ತಿದ್ದ ಸಂಬಳ ಸಾಕಾಗುತ್ತಿಲ್ಲ, ಕಂಪನಿ ಸಂಬಳ ಏರಿಸಿಲ್ಲ ಎಂದು ಇದೀಗ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಕಂಪನಿಯು ತನ್ನ ವಿರುದ್ಧ ವಿಕಲಚೇತನರ ತಾರತಮ್ಯವನ್ನು ತೋರಿಸುತ್ತಿದೆ ಎಂದು ಇಯಾನ್ ಕ್ಲಿಫರ್ಡ್ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ. ಇಷ್ಟಾದರೂ ದೂರು ನೋಡಿ ಕಂಗಾಲಾದ ಕಂಪನಿ IBM ಅವರ ಜೊತೆ ರಾಜಿ ಒಪ್ಪಂದಕ್ಕೆ ಮುಂದಾಗಿತ್ತು. ಅವರ ಒಟ್ಟು ಸಂಬಳ 73,037 ಪೌಂಡ್‌ಗಳಾಗಿದ್ದರೆ, ಕಂಪನಿಯು 2013 ರಿಂದ 25 ಪ್ರತಿಶತ ಕಡಿತದೊಂದಿಗೆ ಪ್ರತಿ ವರ್ಷ 54,028 ಪೌಂಡ್‌ಗಳನ್ನು (75 ಪ್ರತಿಶತ) ಪಾವತಿಸಿದೆ!

Also Read: ಮೈಸೂರು ಟಿಪ್ಪು ಸುಲ್ತಾನ್ ಚಿನ್ನದ ಖಡ್ಗ ಲಂಡನ್ ಮನೆಯಲ್ಲಿ ಶೀಘ್ರದಲ್ಲೇ ಹರಾಜು, ಬೆಲೆ ಎಷ್ಟಿರಬಹುದು?

ಉದ್ಯೋಗಿ ಫೆಬ್ರವರಿ 2022 ರಲ್ಲಿ ಕಂಪನಿಯ ವಿರುದ್ಧ ಅರ್ಜಿಯನ್ನು ಸಲ್ಲಿಸಿದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಕಚೇರಿಗೆ ಬರುವ ನೌಕರರಿಗೆ ಮಾತ್ರ ವೇತನ ಹೆಚ್ಚಳವಾಗಲಿದ್ದು, ಕೆಲಸ ಮಾಡದ ನೌಕರರಿಗೆ ವೇತನ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಯೋಜನೆಯು ಅಂಗವಿಕಲರಿಗೆ ಮಾತ್ರ ಆಗಿದ್ದು, ವಿಕಲಚೇತನ ಅಭ್ಯರ್ಥಿಯು 65 ವರ್ಷದವರೆಗೆ ವರ್ಷಕ್ಕೆ 50 ಸಾವಿರ ಪೌಂಡ್ ಪಡೆಯುವುದರಿಂದ ವಾದವು ಅಸಿಂಧುವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:29 pm, Mon, 15 May 23