AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾ ಪ್ರವಾಸ ಬಂದಿರುವ ಭಾರತದ ಟೀಮ್ ಯಾವ ದೃಷ್ಟಿಯಿಂದಲೂ ಎರಡನೇ ದರ್ಜೆ ತಂಡವಲ್ಲ: ಅರವಿಂದ ಡಿ ಸಿಲ್ವಾ

ಭಾರತದಲ್ಲಿ ಪ್ರತಿಭಾವಂತ ಆಟಗಾರರ ದಂಡೇ ಇದೆ, ಎರಡೆರಡು ರಾಷ್ಟ್ರೀಯ ತಂಡಗಳನ್ನು ಮಾಡವಷ್ಟರ ಮಟ್ಟಿಗೆ ಅವರ ಬೆಂಚ್ ಸ್ಟ್ರೆಂಗ್ತ್ ಬಲವಾಗಿದೆ, ಲಂಕಾಗೆ ಬಂದಿರೋದು ಯಾವ ಕೋನದಿಂದಲೂ ಎರಡನೇ ದರ್ಜೆ ತಂಡವಲ್ಲ ಅಂತ ಅರವಿಂದ ಡಿ ಸಿಲ್ವಾ ಹೇಳಿದ್ದಾರೆ.

ಶ್ರೀಲಂಕಾ ಪ್ರವಾಸ ಬಂದಿರುವ ಭಾರತದ ಟೀಮ್ ಯಾವ ದೃಷ್ಟಿಯಿಂದಲೂ ಎರಡನೇ ದರ್ಜೆ ತಂಡವಲ್ಲ: ಅರವಿಂದ ಡಿ ಸಿಲ್ವಾ
ಅರವಿಂದ ಡಿ ಸಿಲ್ವಾ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 09, 2021 | 5:53 PM

Share

ಶ್ರೀಲಂಕಾ ಪ್ರವಾಸದಲ್ಲಿರುವ ಬಾರತೀಯ ತಂಡವನ್ನು ಎರಡನೇ ದರ್ಜೆ ಅಂತ ಹೇಳಿ, ಅಂಥ ಟೀಮನ್ನು ಕಳಿಸಿ ಭಾರತೀಯ ಕ್ರಿಕೆಟ್​ ಮಂಡಳಿ ಶ್ರೀಲಂಕಾ ಕ್ರಿಕೆಟ್​ಗೆ ಅವಮಾನವೆಸಗಿದೆ ಎಂದಿದ್ದ ಮಾಜಿ ಕ್ಯಾಪ್ಟನ್ ಅರ್ಜುನ ರಣತುಂಗ ಅಲ್ಲಿನ ಕ್ರಿಕೆಟ್​ ವ್ಯವಸ್ಥೆ ಮತ್ತಯ ಮಾಜಿ ಆಟಗಾರರರಿಂದ ತೀವ್ರ ಸ್ವರೂಪದ ಟೀಕೆಗಗೊಳಗಾಗಿದ್ದಾರೆ. ರಣತುಂಗಾ ಹೇಳಿಕೆಯನ್ನು ಬಲವಾಗಿ ಖಂಡಿಸಿರುವ ಪಟ್ಟಿಗೆ 1996ರಲ್ಲಿ ಲಂಕಾ ವಿಶ್ವಕಪ್​ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ ಮಾಸ್ಟರ್ ಬ್ಯಾಟ್ಸ್​ಮನ್ ಮತ್ತ ವಿಶ್ವದ ಸರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆನಿಸಿಕೊಂಡಿರುವ ಅರವಿಂದ ಡಿ ಸಿಲ್ವಾ ಸಹ ಸೇರಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವೆ ಜುಲೈ 13ರಿಂದ ಆರಂಭವಾಗುವ ಸರಣಿಗೆ ಮುಂಚೆ ನಡೆಯುತ್ತಿರುವ ಚಾಟ್​ ಶೋಗಳ ಪೈಕಿ ಒಂದರಲ್ಲಿ ಮಾತಾಡಿದ ಲೆಜೆಂಡರಿ ಬ್ಯಾಟ್ಸ್​ಮನ್ ಡಿ ಸಿಲ್ವಾ ಅವರು ರಣತುಂಗ ಹೇಳಿಕೆಯನ್ನು ತಾನು ಸಂಪೂರ್ಣವಾಗಿ ವಿರೋಧಿಸುವುದಾಗಿ ಹೇಳಿದ್ದಾರೆ. ಭಾರತದಲ್ಲಿ ಪ್ರತಿಭಾವಂತ ಆಟಗಾರರ ದಂಡೇ ಇದೆ, ಎರಡೆರಡು ರಾಷ್ಟ್ರೀಯ ತಂಡಗಳನ್ನು ಮಾಡವಷ್ಟರ ಮಟ್ಟಿಗೆ ಅವರ ಬೆಂಚ್ ಸ್ಟ್ರೆಂಗ್ತ್ ಬಲವಾಗಿದೆ, ಲಂಕಾಗೆ ಬಂದಿರೋದು ಯಾವ ಕೋನದಿಂದಲೂ ಎರಡನೇ ದರ್ಜೆ ತಂಡವಲ್ಲ ಅಂತ ಅವರು ಹೇಳಿದ್ದಾರೆ.

ಭಾರತದ ಸೀನಿಯರ್ ತಂಡ ಈಗ ಇಂಗ್ಲೆಂಡ್​ ಪ್ರವಾಸದಲ್ಲಿರುವುದರಿಂದ ಲಂಕಾಗೆ ಹಿರಿಯ ಅನುಭವಿ ಆಟಗಾರ ಶಿಖರ್​ ಧವನ್ ಅವರ ನೇತೃತ್ವದಲ್ಲಿ ಮತ್ತೊಂದು ತಂಡವನ್ನು ಕಳಿಸಲಾಗಿದೆ. ಲೆಜೆಂಡರಿ ಆಟಗಾರ ರಾಹುಲ್ ದ್ರಾವಿಡ್ ಟೀಮಿನ ಕೋಚ್ ಆಗಿದ್ದಾರೆ.

‘ಭಾರತದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಇಲ್ಲಿಗೆ ಆಗಮಿಸಿರುವ ಭಾರತದ ತಂಡವನ್ನು ಯಾವ ಕಾರಣಕ್ಕೂ ಎರಡನೇ ದರ್ಜೆ ಟೀಮ್ ಎಂದು ಕರೆಯುವಂತಿಲ್ಲ,’ ಎಂದು ಡಿ ಸಿಲ್ವಾ ಹೇಳಿದ್ದಾರೆ.

‘ಈಗಿನ ಕ್ರಿಕೆಟ್ ವಿದ್ಯಮಾನಗಳನ್ನು ಕೊಂಚ ಗಮನಿಸಿ. ಎಲ್ಲ ಕ್ಷೇತ್ರಗಳಂತೆ ಕ್ರಿಕೆಟ್ ಮೇಲೂ ಕೋವಿಡ್​ ಸೋಂಕು ದೊಡ್ಡ ಪರಿಣಾಮವನ್ನು ಬೀರಿದೆ. ಬಯೋ ಬಬಲ್​ಗಳಲ್ಲಿ ತಿಂಗಳುಗಟ್ಟಲೆ ಕಾಲ ಕಳೆಯುವುದು ಯುವ ಆಟಗಾರರಿಗೆ ಸವಾಲಾಗಿ ಪರಿಣಮಿಸಿದೆ. ಹಾಗಾಗೇ, ವಿಶ್ವದೆಲ್ಲೆಡೆ ರೊಟೇಶನ್ ಪಾಲಿಸಿಯನ್ನು ಜಾರಿಗೊಳಿಸಲಾಗಿದೆ. ಯುವ ಆಟಗಾರರ ಮನಸ್ಸನ್ನು ಖಾಲಿಯಾಗಲು ಬಿಡಬಾರದು, ಹಾಗಾದಲ್ಲಿ ಅವರಲ್ಲಿ ಹುಚ್ಚು ಅಲೋಚನೆಗಳು ಹುಟ್ಟಿಕೊಳ್ಳುತ್ತವೆ. ನಾನು ಅಂದುಕೊಳ್ಳುವ ಹಾಗೆ ಕೇವಲ ಆಟಗಾರರು ಮಾತ್ರವಲ್ಲ, ಅಧಿಕಾರಿಗಳು ಮತ್ತು ಸಪೋರ್ಟ್​ ಸ್ಟಾಫ್​ಗೂ ರೊಟೇಶನ್ ಪಾಲಿಸಿ ಅನ್ವಯಿಸುವ ದಿನ ದೂರವಿಲ್ಲ. ಹಾಗಾಗಿ, ಎರಡನೇ ದರ್ಜೆ ಅಥವಾ ಮೂರನೇ ದರ್ಜೆ ಟೀಮ್ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಅದು ರೊಟೇಶನ್ ಪಾಲಿಸಿಯ ಭಾಗ ಅಷ್ಟೇ,’ ಎಂದು ಡಿ ಸಿಲ್ವಾ ಹೇಳಿದ್ದಾರೆ.

‘ಟೀಮುಗಳನ್ನು ಬದಲಾಯಿಸುವುದಕ್ಕೆ ಮತ್ತು ಪ್ರವಾಸಕ್ಕೆ ಭಿನ್ನ ತಂಡಗಳನ್ನು ಕಳಿಸುವುದಕ್ಕೆ ನಾನು ಯಾರನ್ನೂ ದೂಷಿಸುವುದಿಲ್ಲ. ಕ್ರಿಕೆಟ್ ಭವಿಷ್ಯವೇ ಹಾಗಾಗಲಿದೆ ಅಂತ ನಾನು ಭಾವಿಸುತ್ತೇನೆ,’ ಎಂದು 55-ವರ್ಷ ವಯಸ್ಸಿನ ಡಿ ಸಿಲ್ವಾ ಹೇಳಿದ್ದಾರೆ.

ರಣತುಂಗಾ ಮಾಡಿರುವ ಕಾಮೆಂಟ್​ಗೆ ಶ್ರೀಲಂಕಾ ಕ್ರಿಕೆಟ್ (ಎಸ್​ಎಲ್​ಸಿ) ಸಹ ಪ್ರತಿಕ್ರಿಯೆ ನೀಡಿ, ‘ಇಲ್ಲಿಗೆ ಪ್ರವಾಸ ಬಂದಿರುವ ಭಾರತದ20 ಸದಸ್ಯರ ತಂಡದಲ್ಲಿ 14 ಜನ ಒಂದಿಲ್ಲೊಂದು ಫಾರ್ಮಾಟ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಹಾಗಾಗಿ, ರಣತುಂಗಾ ಹೇಳಿರುವಂತೆ ಇದು ಎರಡನೇ ದರ್ಜೆ ತಂಡ ಅಲ್ಲ,’ ಎಂದಿದೆ.

ತಮ್ಮ ರಾಷ್ಟ್ರೀಯ ತಂಡದ ಬಗ್ಗೆಯೂ ಮಾತಾಡಿರುವ ಡಿ ಸಿಲ್ವಾ ಅವರು, ಪ್ರಸಕ್ತ ಟೀಮಿನಲ್ಲಿ ಸಮತೋಲನದ ಕೊರತೆ ಇದೆ ಎಂದು ಹೇಳಿದ್ದಾರೆ.

‘ಆದಷ್ಟು ಬೇಗ ಲಂಕಾ ಕ್ರಿಕೆಟ್​ ಮಂಡಳಿ ಟೀಮಿಗೆ ಸಮತೋಲನ ಒದಗಿಸುವ ಕೆಲಸ ಮಾಡಬೇಕಿದೆ, ಯಾಕೆಂದರೆ 1996ರಲ್ಲಿ ನಮ್ಮ ತಂಡ ಸಮತೋಲನದಿಂದ ಕೂಡಿದ್ದರಿಂದಲೇ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು,’ ಎಂದು ಅವರು ಹೇಳಿದ್ದಾರೆ.

‘ಇಂಗ್ಲೆಂಡ್​ ಪ್ರವಾಸದಲ್ಲಿ ಲಂಕಾ ಟೀಮಿನ ಈ ಕೊರತೆ ನಿಚ್ಚಳವಾಗಿ ಕಂಡು ಬಂತು. ಇದು ಯುವ ತಂಡವೇನೂ ಆಗಿರದೆ ಸಾಕಷ್ಟು ಅನುಭವಿ ತಂಡವಾಗಿದೆ. ಆದರೆ ಟೀಮಿನ ಕಾಂಪೋಸಿಷನ್​ನಲ್ಲಿ ಬ್ಯಾಲೆನ್ಸ್ ಇಲ್ಲ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು,’ ಎಂದು ಲಂಕಾ ಪರ 93 ಟೆಸ್ಟ್​ಗಳನ್ನಾಡಿದ ಡಿ ಸಿಲ್ವಾ ಹೇಳಿದ್ದಾರೆ

ಭಾರತದ ವಿರುದ್ಧ ನಡೆಯುವ ಸರಣಿಯಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಭಾಗವಹಿಸದಿರಲು ನಿರ್ಧರಿಸಿರುವ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಅವರ ನಿರ್ಧಾರ ಸರಿಯಲ್ಲ ಎಂದು ಡಿ ಸಿಲ್ವಾ ಹೇಳಿದ್ದಾರೆ.

‘ಈ ಹಂತದಲ್ಲಿ ಅವರು ಆಡದಿರಲು ನಿರ್ಧರಿಸಿರುವುದು ವಿಷಾದಕರ, ಯಾಕೆಂದರೆ ಶ್ರೀಲಂಕಾ ಕ್ರಿಕೆಟ್​ಗೆ ಅವರು ಬಹಳಷ್ಟು ಕಾಣಿಕೆ ನೀಡಿದ್ದಾರೆ,’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: IND vs SL: ಜೂ.14 ರಿಂದ ಮುಂಬೈನಲ್ಲಿ ಕ್ವಾರಂಟೈನ್! ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾದ ಸಿದ್ಧತೆ ಹೇಗಿದೆ ಗೊತ್ತಾ?

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್