ಫ್ಯಾನ್ಸ್ ಎಂದು ಯಾಮಾರಿದ ರಶ್ಮಿಕಾ ಮನೆಯವರು, ಒಳಗೆ ಬಂದ್ಮೇಲೆ ಫುಲ್ ಶಾಕ್

ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಹೆಸರಿನಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ರಶ್ಮಿಕಾ ನಿವಾಸ‌ಕ್ಕೆ ರಶ್ಮಿಕಾ ಫ್ಯಾನ್ಸ್ ಅಂತಾ ಎಂಟ್ರಿ ಕೊಟ್ಟ ಐಟಿ ಅಧಿಕಾರಿಗಳನ್ನು ರಶ್ಮಿಕಾ ಮನೆಯವರು ಸ್ವಾಗತಿಸಿದ್ದಾರೆ. ಮನೆ ಒಳಗೆ ಬಂದ ನಂತರ ಬಂದಿರುವುದು ಐಟಿ ಅಧಿಕಾರಿಗಳು ಫ್ಯಾನ್ಸ್ ಅಲ್ಲ ಎಂದು ತಿಳಿದ ಮೇಲೆ ಮನೆಯವರೆಲ್ಲಾ ಕಕ್ಕಾಬಿಕ್ಕಿಯಾಗಿದ್ದಾರೆ. ಸದ್ಯ ರಶ್ಮಿಕಾ ಏನ್ ಮಾಡ್ತಿದ್ದಾರೆ. ಎಲ್ಲಿದ್ದಾರೆ? ತಮಿಳು ಸಿನಿಮಾದಲ್ಲೂ ಫುಲ್ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ. ಖ್ಯಾತ ನಟ ಕಾರ್ತಿ ಶಿವಕುಮಾರ್ ಜತೆ […]

ಫ್ಯಾನ್ಸ್ ಎಂದು ಯಾಮಾರಿದ ರಶ್ಮಿಕಾ ಮನೆಯವರು, ಒಳಗೆ ಬಂದ್ಮೇಲೆ ಫುಲ್ ಶಾಕ್
ಸಾಧು ಶ್ರೀನಾಥ್​

Updated on: Jan 16, 2020 | 2:17 PM

ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಹೆಸರಿನಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ರಶ್ಮಿಕಾ ನಿವಾಸ‌ಕ್ಕೆ ರಶ್ಮಿಕಾ ಫ್ಯಾನ್ಸ್ ಅಂತಾ ಎಂಟ್ರಿ ಕೊಟ್ಟ ಐಟಿ ಅಧಿಕಾರಿಗಳನ್ನು ರಶ್ಮಿಕಾ ಮನೆಯವರು ಸ್ವಾಗತಿಸಿದ್ದಾರೆ. ಮನೆ ಒಳಗೆ ಬಂದ ನಂತರ ಬಂದಿರುವುದು ಐಟಿ ಅಧಿಕಾರಿಗಳು ಫ್ಯಾನ್ಸ್ ಅಲ್ಲ ಎಂದು ತಿಳಿದ ಮೇಲೆ ಮನೆಯವರೆಲ್ಲಾ ಕಕ್ಕಾಬಿಕ್ಕಿಯಾಗಿದ್ದಾರೆ.

ಸದ್ಯ ರಶ್ಮಿಕಾ ಏನ್ ಮಾಡ್ತಿದ್ದಾರೆ. ಎಲ್ಲಿದ್ದಾರೆ?
ತಮಿಳು ಸಿನಿಮಾದಲ್ಲೂ ಫುಲ್ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ. ಖ್ಯಾತ ನಟ ಕಾರ್ತಿ ಶಿವಕುಮಾರ್ ಜತೆ ನಟಿಸುತ್ತಿದ್ದಾರೆ. ತಮಿಳಿನ ಬಕ್ಕಿಯರಾಜ್ ಕಣ್ಣನ್ ನಿರ್ದೇಶನದ ಸುಲ್ತಾನ್ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. 2021ಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ರಶ್ಮಿಕಾ ತೆಲುಗು ನಂತರ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಕನ್ನಡದಲ್ಲಿ ಕಿರಿಕ್ ಪಾರ್ಟಿ, ಅಂಜನಿ ಪುತ್ರ,ಚಮಕ್, ಯಜಮಾನ, ಪೊಗರು ಸೇರಿದಂತೆ ಒಟ್ಟು ಐದು ಚಿತ್ರಗಳಲ್ಲಿ ರಶ್ಮಿಕಾ ಅಭಿನಯಿಸಿದ್ದಾರೆ. ತೆಲುಗಿನಲ್ಲಿ ಒಪ್ಪಿಕೊಂಡಿರುವ ಚಿತ್ರಗಳನ್ನು ಸೇರಿಸಿದರೆ ಒಟ್ಟು ಏಳು ಚಿತ್ರಗಳಾಗಿವೆ. ಚಲೋ, ಗೀತಗೋವಿಂದಂ, ದೇವದಾಸ್, ಡಿಯರ್ ಕಾಮ್ ರೇಡ್, ಸರಿಲೇರು ನೀಕ್ಕೆವರು, ಭೀಷ್ಮಾ, AA-20 ರಶ್ಮಿಕಾಳ ತೆಲುಗು ಚಿತ್ರಗಳು.

ಸೆರೆನಿಟಿ ಹಾಲ್​ನಲ್ಲಿ ಐಟಿ ಅಧಿಕಾರಿಗಳಿಂದ ಪರಿಶೀಲನೆ:
ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ ಬೆನ್ನಲೆ ಈಗ ರಶ್ಮಿಕಾ ಮಂದಣ್ಣ ತಂದೆ ಒಡೆತನದ ಸೆರೆನಿಟಿ ಹಾಲ್​ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಒಂದು ತಂಡದಿಂದ ರಶ್ಮಿಕಾ ನಿವಾಸ‌ದಲ್ಲಿ ಪರಿಶೀಲನೆ ನಡೀತಿದ್ರೆ. ಮತ್ತೊಂದು ತಂಡದಿಂದ ಸೆರೆನಿಟಿ ಹಾಲ್​ನಲ್ಲಿ ಪರಿಶೀಲನೆ ನಡೆಯುತ್ತಿದೆ.

Published On - 12:17 pm, Thu, 16 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us