India vs Australia ಕೊನೆಯ ಟೆಸ್ಟ್: ಮೊದಲ ದಿನದಂತ್ಯಕ್ಕೆ 5 ವಿಕೆಟ್​ಗೆ 274 ರನ್​ ಗಳಿಸಿದ ಕಾಂಗರೂಗಳು..

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ಟೀಂ ಆಸ್ಟ್ರೇಲಿಯಾ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 275 ರನ್ ಗಳಿಸಿದೆ.

  • TV9 Web Team
  • Published On - 13:22 PM, 15 Jan 2021
ವಿಕೆಟ್​ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು

ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ಟೀಂ ಆಸ್ಟ್ರೇಲಿಯಾ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 274 ರನ್ ಗಳಿಸಿದೆ. ಭಾರತದ ಪರ ನಟರಾಜನ್​ 2 ವಿಕೆಟ್​ ಪಡೆದು ಮಿಂಚಿದರೆ,ಮಹಮದ್ ಸಿರಾಜ್​, ಶಾರ್ದೂಲ್​ ಠಾಕೂರ್​, ವಾಷಿಂಗ್​ಟನ್​ ಸುಂದರ್​ ತಲಾ 1 ವಿಕೆಟ್​ ಪಡೆದಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸಿಸ್​ನ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್​ ವಾರ್ನರ್ (1 ರನ್​)​ ಹಾಗೂ ಹ್ಯಾರಿಸ್​ (5 ರನ್) ಬಹುಬೇಗನೆ ಟೀಂ ಇಂಡಿಯಾದ ದಾಳಿಗೆ ಬಲಿಯಾದರು. ನಂತರ ಬಂದ ಸ್ಮಿತ್​ ಹಾಗೂ ಲಾಬುಶೆನ್ ಅವರ ಅರ್ಧಶತಕದ ಜೊತೆಯಾಟ ತಂಡಕ್ಕೆ ನೆರವಾಯಿತು. ಉತ್ತಮವಾಗಿ ಆಡುತ್ತಿದ್ದ ಸ್ಮಿತ್​ಗೆ (36 ರನ್) ವಾಷಿಂಗ್​ಟನ್​ ಸುಂದರ್​ ಪೆವಿಲಿಯನ್​ ದಾರಿ ತೋರಿಸಿದರು.

ಟೀಂ ಇಂಡಿಯಾ ನಾಯಕ ಅಜಿಂಕ್ಯಾ ರಹಾನೆ ಕೈಚೆಲ್ಲಿದ ಕ್ಯಾಚ್​ನ ಸದುಪಯೋಗ ಪಡಿಸಿಕೊಂಡ ಲಾಬುಶೆನ್ ಭರ್ಜರಿ ಶತಕ ಬಾರಿಸಿ ಸಂಭ್ರಮಿಸಿದರು. ಶತಕದೊಂದಿಗೆ ಇನ್ನಿಂಗ್ಸ್​ ಮುಂದುವರೆಸಿದ್ದ ಲಾಬುಶೆನ್ ನಟರಾಜ್​ನ ದಾಳಿಗೆ ಬಲಿಯಾದರು. ನಂತರ 45 ರನ್​ ಗಳಿಸಿ ಅಪಾಯಕಾರಿಯಾಗುತ್ತಿದ್ದ ಮ್ಯಾಥ್ಯೂ ವೆಡ್​ನನ್ನು ಸಹ ನಟರಾಜನ್ ತಮ್ಮ ಯಾರ್ಕರ್​ ದಾಳಿಯಿಂದ ಔಟಾಗುವಂತೆ ಮಾಡಿದರು. ನಾಳಿನ ಆಟಕ್ಕೆ ಕ್ಯಾಮರೂನ್​ ಗ್ರೀನ್ ಹಾಗೂ ಟಿಂ ಪೈನ್​ ಬ್ಯಾಟಿಂಗ್​ ಉಳಿಸಿಕೊಂಡಿದ್ದಾರೆ.