India vs Australia, 2nd T20: ಆರೊನ್ ಫಿಂಚ್ ಅನುಮಾನ, ಸ್ಮಿತ್ ಪಾಲಿಗೆ ನಾಯಕತ್ವ?

ಆಸ್ಟ್ರೇಲಿಯಾ ಆಟಗಾರರ ವಿಶ್ರಾಂತಿ ವಿಚಾರ ಟೆಸ್ಟ್ ಸರಣಿಗೆ ತಯಾರಿಯೇ ಎಂಬ ಪ್ರಶ್ನೆ ಮೂಡಿಸಿದೆ. ಏಕದಿನ ಸರಣಿ ಗೆದ್ದಿರುವ ಆಸಿಸ್, ಟೆಸ್ಟ್ ಸರಣಿಯನ್ನೂ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.

India vs Australia, 2nd T20: ಆರೊನ್ ಫಿಂಚ್ ಅನುಮಾನ, ಸ್ಮಿತ್ ಪಾಲಿಗೆ ನಾಯಕತ್ವ?
ಆರೊನ್ ಫಿಂಚ್ ಮತ್ತು ಸ್ಟೀವನ್ ಸ್ಮಿತ್
Follow us
TV9 Web
| Updated By: ganapathi bhat

Updated on:Apr 07, 2022 | 5:37 PM

ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಆರೊನ್ ಫಿಂಚ್ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಸ್ಮಿತ್, 2018ರಲ್ಲಿ ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿ (Sandpaper Gate) ಭಾಗಿಯಾದ ಆರೋಪದಡಿ, ನಾಯಕತ್ವ ಸ್ಥಾನದಿಂದ ನಿಷೇಧಿಸಲ್ಪಟ್ಟಿದ್ದರು. ಇಂದು ಅದೇ ಆಟಗಾರ ಮತ್ತೆ ತಂಡದ ನಾಯಕನಾಗಿ ಮಿಂಚಲಿದ್ದಾರಾ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.

ಮಾರ್ಕಸ್ ಇಲ್ಲ, ವಾರ್ನರ್ ಇಲ್ಲ. ಫಿಂಚ್ ಕೂಡ ಇಲ್ಲ? ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಲ್​ರೌಂಡರ್ ಮಾರ್ಕಸ್ ಗಾಯಗೊಂಡಿದ್ದರು. ತಮ್ಮ ಏಳನೇ ಓವರ್​ನ ಎರಡನೇ ಎಸೆತದಲ್ಲಿ ದೇಹದ ಎಡಭಾಗದಲ್ಲಿ ನೋವು ಕಾಣಿಸಿಕೊಂಡ ಕಾರಣ ಆಟವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ನಂತರದ ಪಂದ್ಯಗಳಲ್ಲಿ ಅವರು ಆಡಿಲ್ಲ.

ಏಕದಿನ ಸರಣಿಯ ಮೊದಲೆರಡು ಪಂದ್ಯದಲ್ಲಿ ಮಿಂಚಿದ್ದ ಆಸಿಸ್​ನ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಎರಡನೆಯ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದರು. ತೊಡೆಯ ಭಾಗಕ್ಕೆ ಏಟಾದ ಕಾರಣ ವಿಶ್ರಾಂತಿಯಲ್ಲಿರುವ ಅವರು ಕೊನೆಯ ಏಕದಿನ ಪಂದ್ಯ ಮತ್ತು ಮೊದಲ ಟಿ20 ಪಂದ್ಯವನ್ನು ಆಡಿರಲಿಲ್ಲ. ಇದೀಗ ಟೆಸ್ಟ್ ಸರಣಿ ಗೆಲ್ಲುವ ಆಶಯ ತೋರಿರುವ ಆಸಿಸ್, ವಾರ್ನರ್ ಟೆಸ್ಟ್​ಗೆ ತಯಾರಾಗಿ ಬರುತ್ತಾರೆ ಎಂದು ಹೇಳಿದ್ದು, ಇಂದಿನ ಪಂದ್ಯದಲ್ಲೂ ವಾರ್ನರ್ ಭಾಗವಹಿಸುವುದಿಲ್ಲ ಎಂದು ಸೂಚಿಸಿದೆ.

ಮತ್ತೊಂದೆಡೆ, ನಾಯಕ ಆರೊನ್ ಫಿಂಚ್, ಕಳೆದ ಪಂದ್ಯದಲ್ಲಿ (ಮೊದಲ ಟಿ20) ಗಾಯಗೊಂಡಿದ್ದಾರೆ. ಸೊಂಟದ ಭಾಗಕ್ಕೆ ಏಟು ಮಾಡಿಕೊಂಡಿರುವ ಅವರು ಕೂಡ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಹೀಗಾಗಿ ಸ್ಮಿತ್ ನಾಯಕತ್ವ ವಹಿಸಿಕೊಳ್ಳಲಿರುವ ಬಗ್ಗೆ ಅಭಿಪ್ರಾಯಗಳು ಕೇಳಿಬಂದಿವೆ.

ಆರಂಭಿಕ ಆಟಗಾರರು ಆಡದಿದ್ದರೆ ಭಾರತಕ್ಕೆ ಅನುಕೂಲ ಫಿಂಚ್ ಮತ್ತು ವಾರ್ನರ್ ಇಬ್ಬರು ಅನುಭವಿ ಆಟಗಾರರು ಪಂದ್ಯದಲ್ಲಿ ಭಾಗವಹಿಸದೇ ಹೋದರೆ ಭಾರತಕ್ಕೆ ಅನುಕೂಲವಾಗಲಿದೆ. ಈರ್ವರು ಆಟಗಾರರೂ ಆರಂಭಿಕ ದಾಂಡಿಗರಾಗಿರುವುದು, ಅವರಿಬ್ಬರೂ ಆಡದಿದ್ದರೆ ಭಾರತಕ್ಕೆ ಆಸಿಸ್ ತಂಡವನ್ನು ಕಡಿಮೆ ರನ್​ಗೆ ಕಟ್ಟಿಹಾಕುವುದು ಸುಲಭವಾಗಲಿದೆ.

ಆದರೆ ಇದು ಸಂಭ್ರಮಿಸುವ ವಿಚಾರವಲ್ಲ. ಆಸ್ಟ್ರೇಲಿಯಾದ ಅನಾನುಕೂಲವನ್ನು ಬಳಸಿಕೊಂಡು ಗೆಲ್ಲುವುದು ಹೆಮ್ಮೆಯ ಸಂಗತಯೇನಲ್ಲ. ಬದಲಾಗಿ ಬಲಿಷ್ಠ ತಂಡವನ್ನೂ ಗೆಲ್ಲುವ ಛಾತಿ ಭಾರತಕ್ಕೆ ಇರಬೇಕಿದೆ.

ಆಸಿಸ್ ದಾಂಡಿಗರ ವಿಶ್ರಾಂತಿ.. ಟೆಸ್ಟ್ ಸರಣಿಗೆ ತಯಾರಿಯೇ? ಒಂದೆಡೆ, ಆಸ್ಟ್ರೇಲಿಯಾ ಉಪನಾಯಕ ಪಾಟ್ ಕಮಿನ್ಸ್ ಟೆಸ್ಟ್ ಸರಣಿಗಾಗಿ ವಿಶ್ರಾಂತಿಯಲ್ಲಿದ್ದು ಇಂದಿನ ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ. ಮತ್ತೊಂದೆಡೆ, ಫಿಂಚ್ ಮತ್ತು ವಾರ್ನರ್ ಕೂಡ ಗಾಯಗೊಂಡಿದ್ದು, ವಿಶ್ರಾಂತಿ ಪಡೆಯಲಿದ್ದಾರೆ.

ಆಸ್ಟ್ರೇಲಿಯಾ ಆಟಗಾರರ ವಿಶ್ರಾಂತಿ ವಿಚಾರ ಟೆಸ್ಟ್ ಸರಣಿಗೆ ತಂಡದ ತಯಾರಿಯೇ ಎಂಬ ಪ್ರಶ್ನೆ ಮೂಡಿಸಿದೆ. ಈಗಾಗಲೇ ಏಕದಿನ ಸರಣಿ ಗೆದ್ದಿರುವ ಆಸಿಸ್, ಟೆಸ್ಟ್ ಸರಣಿಯನ್ನೂ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.

ಈ ನಡುವೆ ಭಾರತದ ಅಟ್ಟಹಾಸ ಕೇವಲ ಟಿ20ಗೆ ಸೀಮಿತವೇ? ಅಥವಾ ಆಸಿಸ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಭಾರತ ಮೆರೆಯಲಿದೆಯೇ? ಕಾದುನೋಡಬೇಕಿದೆ.

ಇಂದು ಮಧ್ಯಾಹ್ನ 1.40ಕ್ಕೆ ಆರಂಭವಾಗಲಿರುವ, India vs Australia, 2ನೇ ಟಿ20 ಪಂದ್ಯದ ತಾಜಾವಿವರಗಳನ್ನು ಟಿವಿ9 ವೆಬ್​ಸೈಟ್ ಲೈವ್​ಬ್ಲಾಗ್​​ನಲ್ಲಿ ಪಡೆಯಬಹುದು.

ಇದನ್ನೂ ಓದಿ: India vs Australia 2020, 1st T20: ಮೊದಲ ಟಿ-20 ಪಂದ್ಯದಲ್ಲಿ ಭಾರತಕ್ಕೆ 11 ರನ್​ಗಳ ಗೆಲುವು!

Published On - 1:08 pm, Sun, 6 December 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ