ಸ್ಮಿತ್ ಅಮಾಯಕನೆಂದ ಆಸಿಸ್​ ಆಟಗಾರರಿಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗನಿಂದ ಮಾತಿನ ಛಡಿಏಟು..!

ಜಂಟಲ್​ಮೆನ್ ಗೇಮ್​ನಲ್ಲಿ ಮೋಸ.. ವಂಚನೆ.. ಸ್ಲೆಡ್ಜಿಂಗ್ ಇವೆಲ್ಲವನ್ನು ಕ್ರಿಕೆಟ್ ಜಗತ್ತಿಗೆ ಬಳುವಳಿಯಾಗಿ ನೀಡಿದ್ದು ಆಸ್ಟ್ರೇಲಿಯಾ ಕ್ರಿಕೆಟಿಗರೆ. ಆದ್ರೀಗ ಸ್ಟೀವ್ ಸ್ಮಿತ್ ವಿಚಾರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ ಅನ್ನುವಂತಾಗಿದೆ.

  • TV9 Web Team
  • Published On - 14:49 PM, 14 Jan 2021
ಸ್ಮಿತ್ ಅಮಾಯಕನೆಂದ ಆಸಿಸ್​ ಆಟಗಾರರಿಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗನಿಂದ ಮಾತಿನ ಛಡಿಏಟು..!
ಸ್ಟೀವ್ ಸ್ಮಿತ್

ಸಿಡ್ನಿ: ನೆಲಕ್ಕೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಸ್ವಭಾವ ಆಸ್ಟ್ರೇಲಿಯಾ ಕ್ರಿಕೆಟಿಗರದ್ದು. ಇದೇ ಕಾರಣಕ್ಕೆ ಸ್ಟೀವ್ ಸ್ಮಿತ್ ಮಾಡಿರೋ ಕುತಂತ್ರಕ್ಕೆ, ಆಸಿಸ್ ಕ್ರಿಕೆಟಿಗರು ಛೀಮಾರಿ ಹಾಕೋದು ಬಿಟ್ಟು, ಅಮಾಯಕ ಅಂತ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಈಗ ಆಸಿಸ್ ಕ್ರಿಕೆಟಿಗರ ಪಾಲಿಗೆ ಮುಳುವಾಗಿದೆ.

ಜಂಟಲ್​ಮೆನ್ ಗೇಮ್​ನಲ್ಲಿ ಮೋಸ.. ವಂಚನೆ.. ಸ್ಲೆಡ್ಜಿಂಗ್ ಇವೆಲ್ಲವನ್ನು ಕ್ರಿಕೆಟ್ ಜಗತ್ತಿಗೆ ಬಳುವಳಿಯಾಗಿ ನೀಡಿದ್ದು ಆಸ್ಟ್ರೇಲಿಯಾ ಕ್ರಿಕೆಟಿಗರೇ. ಆದ್ರೀಗ ಸ್ಟೀವ್ ಸ್ಮಿತ್ ವಿಚಾರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ ಅನ್ನುವಂತಾಗಿದೆ.

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಡ್ರಿಂಕ್ಸ್ ವಿರಾಮದ ವೇಳೆ ಸ್ಮಿತ್, ರಿಷಭ್ ಪಂತ್ ತಮ್ಮ ಬ್ಯಾಟಿಂಗ್ ಲಯವನ್ನು ಕಾಪಾಡಿಕೊಳ್ಳಲು ಹಾಕಿದ ಗಾರ್ಡ್ ಲೈನ್​ನ್ನ ಅಳಿಸಿ ಬೇರೆ ಲೈನ್ ಎಳೆಯುವ ಪ್ರಯತ್ನ ಮಾಡಿದ್ರು. ಸ್ಮಿತ್ ಹೀಗೆ ಮಾಡುತ್ತಿರೋ ವಿಡಿಯೊ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಕ್ರಿಕೆಟ್ ಪ್ರೇಮಿಗಳು ಛೀ ಥೂ ಎಂದು ಉಗಿದಿದ್ರು..
ಸ್ಮಿತ್ ಈ ಕುತಂತ್ರದ ಬುದ್ದಿಗೆ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ಛೀ ಥೂ ಎಂದು ಉಗಿದಿದ್ರು. ಆದ್ರೆ ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್, ಸ್ಪಿನ್ನರ್ ನಾಥನ್ ಲಿಯಾನ್ ಮತ್ತು ನಾಯಕ ಟಿಮ್ ಪೇನ್ ಸಮರ್ಥಿಸಿಕೊಂಡಿದ್ದಾರೆ. ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಅನ್ನೋ ಹಾಗೇ, ಸ್ಮಿತ್​ರನ್ನ ಸಮರ್ಥಿಸಿಕೊಂಡ ಆಸ್ಟ್ರೇಲಿಯಾ ಕ್ರಿಕೆಟಿಗರು ಈಗ ದಿಗ್ಗಜ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸ್ಮಿತ್​ಗೂ ಕಾನೂನು ಒಂದೇ..
‘‘ನೀವು ಒಬ್ಬ ಜ್ಯೂನಿಯರ್ ಆಟಗಾರರನ್ನ ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಿದ್ದೀರಾ? ನಾನು ಸ್ಪಷ್ಟವಾಗಿ ಹೇಳುತ್ತೇನೆ ಇದೊಂದು ಸಿಲ್ಲಿ ವಿಷಯ. ಕಾನೂನು ಎಲ್ಲರಿಗೂ ಒಂದೆ. ಬ್ರಿಸ್ಬೇನ್ ಟೆಸ್ಟ್​ನಲ್ಲೂ ಸ್ಮಿತ್ ಇದನ್ನೆ ಮುಂದುವರಿಸ್ತಾರಾ ಅನ್ನೋದನ್ನ ನೋಡೋಣ.’’
-ಮೈಕಲ್ ವಾನ್, ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಹೀಗೆ ಹೇಳುತ್ತಿದ್ದಂತೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ನಖಶಿಕಾಂತ ಉರಿದು ಬಿದ್ದಿದ್ದಾರೆ. ಆಸಿಸ್ ತಂಡದ ಮಾಜಿ ಕ್ರಿಕೆಟಿಗ ಮಾರ್ಕ್ ವ್ಹಾ, ವಾನ್​ಗೆ, ನೀವು ಆಧುನಿಕ ಕ್ರಿಕೆಟ್​ನಲ್ಲಿ ಟೈಮ್ ವೇಸ್ಟ್ ಮಾಡುವುದರ ಬಗ್ಗೆ ನಾನು ಹೆಚ್ಚು ಚಿಂತನೆ ಮಾಡುತ್ತೇನೆ ಎಂದಿದ್ದಾರೆ.

ಒಟ್ನಲ್ಲಿ ಸ್ಮಿತ್ ಕಳ್ಳಾಟ ಕ್ಯಾಮರಾ ಕಣ್ಣಲ್ಲೇ ಸೆರೆಯಾಗಿದೆ. ಹಾಗಿದ್ರೂ ಆಸಿಸ್ ಕ್ರಿಕೆಟಿಗರು, ಸ್ಮಿತ್ ಅಮಾಯಕ ಎಂದು ಸಬೂಬು ಕೊಡ್ತಾರೆ. ಅದೇನೇ ಇರಲಿ.. ಸ್ಮಿತ್ ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ಶಿಕ್ಷೆ ಅನುಭವಿಸಿದ ಕ್ರಿಕೆಟಿಗ. ಸ್ಮಿತ್ ಪ್ರಚಂಡ ಬ್ಯಾಟ್ಸ್​ಮನ್ ಆಗಿದ್ರೂ, ವ್ಯಕ್ತಿತವಾಗಿ ಬದಲಾಗಿಲ್ಲ ಅನ್ನೋದು ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಪ್ರೂವ್ ಆಗಿದೆ. ಆಸಿಸ್ ಕ್ರಿಕೆಟಿಗರು ಎಷ್ಟೇ ಸಮರ್ಥನೆ ಮಾಡಿಕೊಂಡ್ರೂ, ಸ್ಮಿತ್ ಗುಣ ಏನು ಅನ್ನೋದು ಇಡೀ ಕ್ರಿಕೆಟ್ ಜಗತ್ತಿಗೆ ಗೊತ್ತಾಗಿದೆ.

India vs Australia Test Series | ಟ್ರೋಲ್​ಗೊಳಗಾಗಿರುವ ಸ್ಮಿತ್ ರಕ್ಷಣೆಗೆ ಧಾವಿಸಿದ ಟಿಮ್ ಪೈನ್