India vs England Test Series: ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ತೆಂಡೂಲ್ಕರ್-ಕುಕ್ ಟ್ರೋಫಿ ಅಂತ ಕರೆಯಬೇಕು: ಪನೆಸಾರ್
ಬಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುವ ಟೆಸ್ಟ್ ಸರಣಿ ಉಭಯ ದೇಶಗಳ ಲೆಜೆಂಡರಿ ಬ್ಯಾಟ್ಸ್ಮನ್ಗಳಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ಅಲಸ್ಟೇರ್ ಕುಕ್ ಅವರ ಹೆಸರಿನಲ್ಲಿ ಆಡಿಸಬೇಕು ಅಂತ ಮಾಂಟಿ ಪನೆಸಾರ್ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.

ಇಂಗ್ಲೆಂಡ್ 2012ರಲ್ಲಿ ಭಾರತ ಪ್ರವಾಸ ಬಂದಾಗ ಆಂಗ್ಲರು ಸರಣಿಯನ್ನು 2-1 ಅಂತರದಿಂದ ಗೆಲ್ಲುವಲ್ಲಿ ಸರಣಿಯಲ್ಲಿ 17 ವಿಕೆಟ್ ಪಡೆದ ಪನೆಸಾರ್ ನಿರ್ಣಾಯಕ ಪಾತ್ರ ವಹಿಸಿದ್ದರು. ತೆಂಡೂಲ್ಕರ್ ಅವರನ್ನು ವಿಶ್ವದ ಅತಿದೊಡ್ಡ ಲೆಜೆಂಡರಿ ಆಟಗಾರ ಅಂತ ಹೇಳುವ ಪನೆಸಾರ್, ಸಚಿನ್ ಮತ್ತು ಕುಕ್ ತಮ್ಮ ದೇಶಗಳ ಪರ ಅತಿ ಹೆಚ್ಚು ರನ್ಗಳನ್ನು ಗಳಿಸಿದ್ದಾರಲ್ಲದೆ ಪರಸ್ಪರ ಎದುರಾಳಿಗಳಾಗಿ ಆಡಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ, ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು ತೆಂಡೂಲ್ಕರ್-ಕುಕ್ ಟ್ರೋಫಿ ಅಂತ ಕರೆಯಬೇಕು ಅಂದಿದ್ದಾರೆ.
‘ಇಂಗ್ಲೆಂಡ್ ಮತ್ತು ಇಂಡಿಯಾ ನಡುವೆ ಆಡಲಾಗುವ ಸರಣಿಯನ್ನು ತೆಂಡೂಲ್ಕರ್-ಕುಕ್ ಟ್ರೋಫಿ ಎಂದು ಕರೆಯಬೇಕು, ಯಾಕೆಂದರೆ ಅವರಿಬ್ಬರು ತಮ್ಮ ತಮ್ಮ ದೇಶಗಳ ಪರ ಅತಿಹೆಚ್ಚು ರನ್ ಗಳಿಸಿದ್ದಾರೆ. ಅವರು ಪರಸ್ಪರ ಎದುರಾಳಿಗಳಾಗಿ ಆಡಿದ್ದಾರೆ ಮತ್ತು ನಮಗೆಲ್ಲ ಗೊತ್ತಿರುವಂತೆ, ತೆಂಡೂಲ್ಕರ್ ಕ್ರೀಡೆಯ ಅತಿದೊಡ್ಡ ಲೆಜೆಂಡ್ ಆಗಿದ್ದರೂ ಅವರ ಹೆಸರಿನಲ್ಲಿ ಯಾವುದೇ ಸರಣಿ ನಡೆಯುತ್ತಿಲ್ಲ, ಎಂದು ಪನೆಸಾರ್ ಟ್ವೀಟ್ ಮಾಡಿದ್ದಾರೆ.
Eng v India test series should be called "Tendulkar Cook trophy " because both have highest test runs for their countries,they played a lot against eachother and we know Tendulkar is the biggest legend and we dont have a series named after him. @englandcricket @BCCI #INDvENG
— Monty Panesar (@MontyPanesar) February 10, 2021

ಮಾಂಟಿ ಪನೆಸಾರ್
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 200 ಪಂದ್ಯಗಳನ್ನು ಆಡಿರುವ ಏಕಮಾತ್ರ ಅಟಗಾರನಾಗಿರುವ ಸಚಿನ್ ತೆಂಡೂಲ್ಕರ್ 51 ಶತಕಗಳ ಸಹಿತ 15,921 ರನ್ ಗಳಿಸಿ ವಿದಾಯ ಹೇಳಿದರು. ಈ ಫಾರ್ಮಾಟ್ನಲ್ಲಿ ಅತಿಹೆಚ್ಚು ರನ್ ಗಳಿಸಿರುವ ಕೀರ್ತಿ ಸಹ ಭಾರತದ ಲಿಟ್ಲ್ ಮಾಸ್ಟರ್ ಅವರದ್ದು. ಹಾಗೆಯೇ, ಇಂಗ್ಲೆಂಡ್ ಪರ 161 ಟೆಸ್ಟ್ಗಳನ್ನಾಡಿದ ಕುಕ್ 33 ಶತಕಗಳೊಂದಿಗೆ 12,472 ರನ್ ಗಳಿಸಿದ್ದಾರೆ.
ಪನೆಸಾರ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಒಬ್ಬ ಕ್ರಿಕೆಟ್ ಪ್ರೇಮಿ, ‘ಅದ್ಸರಿ ಸರಣಿಗೆ ಭಜ್ಜಿ-ಪನೆಸಾರ್ ಟ್ರೋಫಿ ಅಂತ ಯಾಕೆ ಕರೆಯಬಾರದು,’ ಅಂತ ಛೇಡಿಸಿದ್ದಾರೆ.
ಅವರಿಗೆ ಉತ್ತರಿಸಿರುವ ಪನೆಸಾರ್, ‘ನಾನು ಟೆಸ್ಟ್ ಕ್ರಿಕೆಟ್ನಲ್ಲಿ 300 ವಿಕೆಟ್ಗಳನ್ನು ಪಡೆದಿದ್ದರೆ ಹರ್ಭಜನ್-ಪನೆಸಾರ್ ಟ್ರೋಫಿ ಎಂದು ಕರೆಯಬಹುದಿತ್ತು,’ ಅಂತ ಟ್ವೀಟ್ ಮಾಡಿದ್ದಾರೆ.
"Harbhajan Panesar trophy " would have worked if I had 300 plus test wickets #INDvENG #Cricket
— Monty Panesar (@MontyPanesar) February 10, 2021
Published On - 6:25 pm, Thu, 11 February 21




