ಇವಾಗ ಮಾವಿನ (Mango) ಹಣ್ಣಿನ ಸೀಸನ್. ಮಾರುಕಟ್ಟೆಯಲ್ಲಿ ರಾಶಿ- ರಾಶಿ ಮಾವಿನ ಹಣ್ಣಿನದ್ದೇ ಕಾರುಬಾರು. ಹಣ್ಣಿನ ರಾಜ ಮಾವಿನ ಹಣ್ಣು ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ನಾವು ನಿಮಗೆ ಇವತ್ತು ಮಾವಿನ ಹಣ್ಣಿನಿಂದ ಸಿದ್ಧವಾಗುವ ಸುಲಭ ರೆಸಿಪಿ (Recipe) ತಿಳಿಸುತ್ತೇವೆ. ಈ ರಿಸಿಪಿ ಮಾವಿನ ಹಣ್ಣು ಇಷ್ಟಾವಾದಷ್ಟೆ ನಾಲಿಗೆಗೆ ರುಚಿ ಕೊಡುತ್ತದೆ. ಕೇವಲ ಹತ್ತು ನಿಮಿಷದಲ್ಲಿ ಈ ರೆಸಿಪಿಯನ್ನು ರೆಡಿ ಮಾಡಬಹುದು. ಅನ್ನಕ್ಕೆ ತುಂಬಾ ಒಳ್ಳೆಯ ಕಾಂಬಿನೇಷನ್.
ಮಾವಿನ ಹಣ್ಣಿನ ಸಿಂಪಲ್ ಗೊಜ್ಜು ಮಾಡುವುದಕ್ಕೆ ಬೇಕಾದ ಸಾಮಾಗ್ರಿಗಳು:
ಮಾವಿನ ಹಣ್ಣು: ಮೂರರಿಂದ ನಾಲ್ಕು ಹಣ್ಣು
ಹಸಿಮೆಣಸಿನಕಾಯಿ: 4ರಿಂ 5,
ತೆಂಗಿನ ಕಾಯಿ: ¼ ಕಪ್,
ಒಣಮೆಣಸು: 2,
ಸಾಸಿವೆ: ಅರ್ಧ ಚಮಚ,
ಕರಿಬೇವು: 5ರಿಂದ 6 ಎಲೆಗಳು,
ಉಪ್ಪು: ರಚಿಗೆ ತಕ್ಕಷ್ಟು.
ವಿಧಾನ:
ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿ. ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಹಸಿಮೆಣಸಿನಕಾಯಿ ಹಾಕಿ ಗ್ರೈಂಡ್ ಮಾಡಿ. ಗ್ರೈಂಡ್ ಮಾಡಿದ ಖಾರವನ್ನು ಮಾವಿನ ಹಣ್ಣಿನ ರಸಕ್ಕೆ ಹಾಕಿ. ಇದಕ್ಕೆ ರಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಬಳಿಕ ಒಂದು ಸಣ್ಣ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ, ಕರಿಬೇವು, ಒಣಮೆಣಸು ಹಾಕಿ. ಈ ಒಗ್ಗರಣೆಯನ್ನು ಗೊಜ್ಜಿಗೆ ಹಾಕಿ. ಗೊಜ್ಜು ರೆಡಿ. ಅನ್ನದೊಂದಿಗೆ ಸವಿಯಿರಿ.
ಇದನ್ನೂ ಓದಿ: ರಸ್ತೆ ಬದಿ ಹೋಟೆಲ್ನಲ್ಲಿ ಊಟ ಮಾಡಿದ ಈ ಸ್ಟಾರ್ ನಟನನ್ನು ಗುರುತಿಸುತ್ತೀರಾ? ಇಲ್ಲಿದೆ ವೈರಲ್ ವಿಡಿಯೋ