ಸುರೇಶ್ ಅಂಗಡಿ ಕಿರಿಯ ಪುತ್ರಿ ಶ್ರದ್ಧಾ ಶೆಟ್ಟರ್‌ಗೆ ಸಿಗುತ್ತಾ ಬಿಜೆಪಿ ಟಿಕೆಟ್?
ಅಮಿತ್ ಶಾ ಬೆಳಗಾವಿ ಭೇಟಿ ಬೆನ್ನಲ್ಲೇ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಪಡೆಯಲು ಶ್ರದ್ಧಾ ಶೆಟ್ಟರ್ ಸಕ್ರಿಯರಾಗಿದ್ದಾರೆ. ಮೊನ್ನೆಯಷ್ಟೇ ಅಮಿತ್ ಶಾ ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಈಗ ಇದರ ಬೆನ್ನಲ್ಲೇ ಶ್ರದ್ಧಾ ಆಕ್ಟೀವ್ ಆಗಿದ್ದಾರೆ.
ಬೆಳಗಾವಿ: ತಂದೆ ಸುರೇಶ್ ಅಂಗಡಿ ನಿಧನದ ಬಳಿಕ ಇದೇ ಮೊದಲ ಬಾರಿಗೆ ಅವರ ಕಿರಿಯ ಪುತ್ರಿ, ಸಚಿವ ಜಗದೀಶ್ ಶೆಟ್ಟರ್ ಸೊಸೆಯೂ ಆಗಿರುವ ಶ್ರದ್ಧಾ ಶೆಟ್ಟರ್ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದು ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೇ ವೇಳೆ, ದಿವಂಗತ ಸುರೇಶ್ ಅಂಗಡಿ ಕಿರಿಯ ಪುತ್ರಿ ಶ್ರದ್ಧಾ ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ಸಿಗುತ್ತಾ ಎಂಬುದು ಕುತೂಹಲ ಮೂಡಿಸಿದೆ.
ಅಮಿತ್ ಶಾ ಬೆಳಗಾವಿ ಭೇಟಿ ಬೆನ್ನಲ್ಲೇ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಪಡೆಯಲು ಶ್ರದ್ಧಾ ಶೆಟ್ಟರ್ ಸಕ್ರಿಯರಾಗಿದ್ದಾರೆ. ಮೊನ್ನೆಯಷ್ಟೇ ಅಮಿತ್ ಶಾ ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಈಗ ಇದರ ಬೆನ್ನಲ್ಲೇ ಶ್ರದ್ಧಾ ಆಕ್ಟೀವ್ ಆಗಿದ್ದಾರೆ. ನಿನ್ನೆ ಬೆಳಗಾವಿ ತಾಲೂಕಿನ ರಾಜಹಂಸಗಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಐತಿಹಾಸಿಕ ರಾಜಹಂಸಗಡ ಕೋಟೆಗೂ ಭೇಟಿ ನೀಡಿ ಕೋಟೆಯ ಆವರಣದಲ್ಲಿರುವ ಸಿದ್ದೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದು ಫೇಸ್‌ಬುಕ್‌ನಲ್ಲಿ ಫೋಟೋ ಪೋಸ್ಟ್ ಮಾಡಿಕೊಂಡಿದ್ದಾರೆ.
ತಂದೆ ನಿಧನದ ನಂತರ ಡಿಸೆಂಬರ್ 25ರಂದು ಮೊದಲ ಬಾರಿ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೆಳಗಾವಿಯಲ್ಲಿ ನಡೆದ ಕಿಸಾನ್ ಸಮ್ಮಾನ್ ಸಭೆಯಲ್ಲಿ ಭಾಗಿಯಾಗಿ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಶ್ರದ್ಧಾ ಶೆಟ್ಟರ್ ಸಂಚಾರ ಹಿನ್ನೆಲೆಯಲ್ಲಿ ಟಿಕೆಟ್ ನೀಡಲು ಹೈಕಮಾಂಡ್ ಹಸಿರು ನಿಶಾನೆ ನೀಡಿತಾ ಎಂಬ ಬಗ್ಗೆ ಚರ್ಚೆಗಳು ಗರಿಗೆದರಿವೆ.
ಸುರೇಶ್ ಅಂಗಡಿ ಬದುಕಿದ್ರೆ 2-3 ತಿಂಗಳಲ್ಲಿ ದೊಡ್ಡ, ವಿಚಿತ್ರ ಹುದ್ದೆ ಸಿಗ್ತಿತ್ತು -ಸಚಿವ ರಮೇಶ್ ಬಾಂಬ್