ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಹಿಂಸಾಚಾರ: ಎದ್ದುಕಾಣುತ್ತಿದೆ ರಾಜಕೀಯ ಸೇಡು?
ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನಡೆದಿರುವ ಗಲಭೆಗೆ ಫೇಸ್‌ಬುಕ್ ಪೋಸ್ಟ್ ಕೇವಲ ನೆಪ ಮಾತ್ರವಾ? ಏಕೆಂದ್ರೆ ಗಲಾಟೆಯ ಹಿಂದೆ ಹಲವು ಕಾರಣಗಳಿರುವ ಶಂಕೆ ವ್ಯಕ್ತವಾಗಿದೆ. ಗಲಭೆಗೆ ಸೋಲು-ಗೇಲುವಿನ ಸೇಡಿನ ಅಂಶವಿರುವುದು ಎದ್ದುಕಾಣುತ್ತಿದೆ. ನಿನ್ನೆ ನಡೆದ ಗಲಭೆಯಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚು ಜನ ಭಾಗಿಯಾಗಿದ್ದರು ಎನ್ನಲಾಗಿದೆ. ಹಿಂದೆ ಸಗಾಯಿಪುರ ವಾರ್ಡ್‌ಗೆ ಬಿಬಿಎಂಪಿ ಉಪಚುನಾವಣೆ ನಡೆದಿತ್ತು. ಈ ವೇಳೆ ಕಾಂಗ್ರೆಸ್‌ನಿಂದ ಪಳನಿಯಮ್ಮಗೆ ಟಿಕೆಟ್ ನೀಡಿದ್ದರು. ಎಸ್‌ಡಿಪಿಐನಿಂದ ಸ್ಪರ್ಧಿಸಿದ್ದ ಹಾಲಿ ಪ್ರಕರಣದ A1 […]

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನಡೆದಿರುವ ಗಲಭೆಗೆ ಫೇಸ್‌ಬುಕ್ ಪೋಸ್ಟ್ ಕೇವಲ ನೆಪ ಮಾತ್ರವಾ? ಏಕೆಂದ್ರೆ ಗಲಾಟೆಯ ಹಿಂದೆ ಹಲವು ಕಾರಣಗಳಿರುವ ಶಂಕೆ ವ್ಯಕ್ತವಾಗಿದೆ. ಗಲಭೆಗೆ ಸೋಲು-ಗೇಲುವಿನ ಸೇಡಿನ ಅಂಶವಿರುವುದು ಎದ್ದುಕಾಣುತ್ತಿದೆ.
ನಿನ್ನೆ ನಡೆದ ಗಲಭೆಯಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚು ಜನ ಭಾಗಿಯಾಗಿದ್ದರು ಎನ್ನಲಾಗಿದೆ. ಹಿಂದೆ ಸಗಾಯಿಪುರ ವಾರ್ಡ್‌ಗೆ ಬಿಬಿಎಂಪಿ ಉಪಚುನಾವಣೆ ನಡೆದಿತ್ತು. ಈ ವೇಳೆ ಕಾಂಗ್ರೆಸ್‌ನಿಂದ ಪಳನಿಯಮ್ಮಗೆ ಟಿಕೆಟ್ ನೀಡಿದ್ದರು. ಎಸ್‌ಡಿಪಿಐನಿಂದ ಸ್ಪರ್ಧಿಸಿದ್ದ ಹಾಲಿ ಪ್ರಕರಣದ A1 ಆರೋಪಿ ಮುಜಾಮಿಲ್ ಪಾಷ ಬೈಎಲೆಕ್ಷನ್‌ನಲ್ಲಿ ಸೋತಿದ್ದ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹಾಯದಿಂದ ಕಾಂಗ್ರೆಸ್ ಅಭ್ಯರ್ಥಿ ಪಳನಿಯಮ್ಮ ಗೆಲುವು ಸಾಧಿಸಿದ್ದರು. ಹೀಗಾಗಿ ಅಂದಿನಿಂದ ಶಾಸಕರ ಮೇಲೆ ಸೇಡಿಗೆ ಕಾಯುತ್ತಿದ್ದವರು ಫೇಸ್‌ಬುಕ್ ಪೋಸ್ಟ್ ನೆಪ ಮಾಡಿಕೊಂಡು ಗಲಭೆ ಮಾಡಿರುವ ಅನುಮಾನ ಉಂಟಾಗಿದೆ. ಶಾಸಕರ ಸಂಬಂಧಿಯ ಪೋಸ್ಟ್ ಎಲ್ಲರಿಗೂ ವಾಟ್ಸಾಪ್ ಮೂಲಕ ಸ್ಟೇಟಸ್ ರವಾನೆ ಮಾಡಿ, ಗಲಾಟೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.




