IT Raids: ಕರ್ನಾಟಕದಲ್ಲಿ ಮುಂದುವರೆದ ಐಟಿ ದಾಳಿ, ಈ ಬಾರಿ ಬಿಲ್ಡರ್ಸ್ಗೆ ಶಾಕ್
IT Raids In Bengaluru: ಕರ್ನಾಟಕದಲ್ಲಿ ಐಟಿ ದಾಳಿ ಮುಂದುವರೆದಿದೆ. ಕೆಲ ದಿನಗಳಿಂದ ಜ್ಯುವೆಲ್ಲರಿ ಅಂಗಡಿಗಳ ಮೇಲೆ ದಾಳಿ ಮಾಡಿದ್ದ ಐಟ ಅಧಿಕಾರಿಗಳು ಈಗ ಬಿಲ್ಡರ್ಸ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ಬೆಂಗಳೂರು, (ನವೆಂಬರ್ 03): ಕರ್ನಾಟಕದಲ್ಲಿ ಐಟಿ ಅಧಿಕಾರಿಗಳ ಬೇಟೆ(IT official raid) ಮುಂದುವರೆದಿದೆ. ಇಂದು(ನವೆಂಬರ್ 03) ಬೆಳ್ಳಂಬೆಳಗ್ಗೆ ಬೆಂಗಳೂರಿನ (Bengaluru) ಹಲವೆಡೆ ಬಿಲ್ಡರ್ಸ್ ಮನೆಗಳ ಮೇಲೆ ಐಟಿ ದಾಳಿಯಾಗಿದೆ. ಕಳೆದ ಹಲವು ದಿನಗಳಿಂದ ರಾಜ್ಯದ ಹಲವೆಡೆ ಜ್ಯುವೆಲರ್ ಅಂಗಡಿಗಳ ಮೇಲೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು, ಈ ಬಾರಿ ಬಿಲ್ಡರ್ಸ್ಗೆ ಶಾಕ್ ಕೊಟ್ಟಿದ್ದಾರೆ.
ಕಳೆದ ಹಲವು ದಿನಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಐಟಿ ದಾಳಿಯಾಗುತ್ತಲೇ ಇದೆ. ಮೊನ್ನೇ ಅಷ್ಟೇ ಉಡುಪಿ ಹಾಗೂ ಮಂಗಳೂರು ಭಾಗದಲ್ಲಿ ಚಿನ್ನಾಭರಣ ಅಂಗಡಿಗಳ ಮೇಲೆ ಐಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಲ್ಲದೇ ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿಂದ ಜ್ಯುವೆಲ್ಲರಿ ಹಾಗೂ ಅಂಗಡಿ ಮಾಲೀಕರ ಮನೆಗಳ ಮೇಲೆ ದಾಳಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
Published On - 9:01 am, Fri, 3 November 23