AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಾವರಿ ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ: ಮುಸುಕಿನ ಗುದ್ದಾಟದಿಂದ ಹೊರಬಂತೆ ಹುಳುಕು

ಕರ್ನಾಟಕದ ವಿವಿಧೆಡೆ ನಿರಾವರಿ ಇಲಾಖೆ ಗುತ್ತಿಗೆದಾರರು ಮತ್ತು ಮನೆಗಳ ಮೇಲೆ ನಡೆದ ಐಟಿ ದಾಳಿಗೆ ಗುತ್ತಿಗೆದಾರರ ಒಳಜಗಳವೇ ಪ್ರಮುಖ ಕಾರಣ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ವರ್ಕ್ ಆರ್ಡರ್ ಪಡೆಯುವ ವಿಚಾರದಲ್ಲಿ ಮೂರು ವರ್ಷಗಳಿಂದ ವಿವಿಧ ಗುತ್ತಿಗೆದಾರರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು

ನೀರಾವರಿ ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ: ಮುಸುಕಿನ ಗುದ್ದಾಟದಿಂದ ಹೊರಬಂತೆ ಹುಳುಕು
ಸಾಂದರ್ಭಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Oct 07, 2021 | 3:39 PM

Share

ಬೆಂಗಳೂರು: ಕರ್ನಾಟಕದ ವಿವಿಧೆಡೆ ನಿರಾವರಿ ಇಲಾಖೆ ಗುತ್ತಿಗೆದಾರರು ಮತ್ತು ಮನೆಗಳ ಮೇಲೆ ನಡೆದ ಐಟಿ ದಾಳಿಗೆ ಗುತ್ತಿಗೆದಾರರ ಒಳಜಗಳವೇ ಪ್ರಮುಖ ಕಾರಣ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ವರ್ಕ್ ಆರ್ಡರ್ ಪಡೆಯುವ ವಿಚಾರದಲ್ಲಿ ಮೂರು ವರ್ಷಗಳಿಂದ ವಿವಿಧ ಗುತ್ತಿಗೆದಾರರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ವರ್ಕ್​ ಆರ್ಡರ್ ಪಡೆದು ಗುತ್ತಿಗೆದಾರರು ಕೆಲಸ ಮಾಡಿದ್ದಾರಾದರೂ ಮಾಡಿರುವ ಕೆಲಸದಲ್ಲಿಯೂ ಸಾಕಷ್ಟು ಲೋಪಗಳು ಪತ್ತೆಯಾಗಿವೆ. ಬೇರೆಬೇರೆ ಕಂಟ್ರಾಕ್ಟರ್​ಗಳಿಗೆ ಟೆಂಡರ್ ಕೊಟ್ಟಿದ್ದ ವಿಚಾರಕ್ಕೆ ಪರಸ್ಪರ ಜಗಳಗಳು ಆಗಿದ್ದವು ಎಂಬ ಮಾತುಗಳು ಕೇಳಿಬಂದಿವೆ.

ಈ ಬಗ್ಗೆ ಗುತ್ತಿಗೆದಾರರೊಬ್ಬರು ದಾಖಲೆಗಳ ಸಹಿತ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಸಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಮೂರು ವರ್ಷಗಳ ಹಿಂದೆ ಗುತ್ತಿಗೆ ಸಂಬಂಧ ಗುತ್ತಿಗೆದಾರರ ನಡುವೆ ಮಾತುಕತೆ ನಡೆದಿತ್ತು. ಮಾತುಕತೆ ಬಳಿಕ ವರ್ಕ್ ಅರ್ಡರ್ ಅಗಿರಲಿಲ್ಲ. ಬಳಿಕ ಯಡಿಯೂರಪ್ಪ ಆಪ್ತ ಉಮೇಶ್ ಹಾಗು ನೀರಾವರಿಯಲ್ಲಿ ಇಲಾಖೆಯ ಪ್ರಭಾವಿಗಳು ಮತ್ತೆ ಬೇರೆ ಗುತ್ತಿಗೆದಾರರಿಗೆ ಟೆಂಡರ್ ಹಾಗೂ ವರ್ಕ್ ಆರ್ಡರ್ ಕೊಡಿಸಿದ್ದರು. ಗುತ್ತಿಗೆ ಕೈತಪ್ಪಿದವರು ಇದೇ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು.

ಲಭ್ಯ ಮಾಹಿತಿಗಳ ಪ್ರಕಾರ ಗುತ್ತಿಗೆ ಹಂಚಿಕೆ ವೇಳೆ ಕೆಲವರಿಗೆ ಕಮಿಷನ್ ಸಂದಾಯವಾಗಿತ್ತು. ಈಗ ಐಟಿ ಇಲಾಖೆಗೆ ಸಲ್ಲಿಸಿರುವ ದೂರಿನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ದೂರಿನ ಅನ್ವಯ ಐಟಿ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದಾಗ ಬಾಗಲಕೋಟೆ-ವಿಜಯಪುರ ಮೂಲದ ಗುತ್ತಿಗೆದಾರ ಡಿ.ವೈ.ಉಪ್ಪಾರ ಸೇರಿ ಹಲವಾರ ವಿರುದ್ದ ಸಾಕ್ಷ್ಯಗಳು ಲಭ್ಯವಾಗಿವೆ. ಅಗತ್ಯ ದಾಖಲೆಗಳನ್ನು ಸಜ್ಜುಗೊಳಿಸಿಕೊಂಡೇ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 30 ಗುತ್ತಿಗೆದಾರರು ಮತ್ತು ಅವರಿಗೆ ಕಚ್ಚಾವಸ್ತುಗಳನ್ನು ಪೂರೈಸುವ ವೆಂಡರ್​ಗಳು ಹಾಗೂ ಈ ವಿಚಾರದಲ್ಲಿ ಸಹಾಯ ಮಾಡಿದ್ದ ಚಾರ್ಟೆಡ್ ಅಕೌಂಟೆಂಟ್​ಗಳ ಮೇಲೆ ದಾಳಿ ಮಾಡಲಾಗಿದೆ.

ಬಾಡಿಗೆ ಮನೆಯಲ್ಲಿಯು ಶೋಧ ಬಾಗಲಕೋಟೆಯ ನವನಗರದಲ್ಲಿರುವ ಮೊದಲ ದರ್ಜೆ (ಕೆಟಗರಿ ಒನ್) ಗುತ್ತಿಗೆದಾರ ಡಿ.ವೈ.ಉಪ್ಪಾರ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿಯೂ ಐಟಿಯಿಂದ ಶೋಧ ಕಾರ್ಯಾಚರಣೆ ನಡೆಯಿತು. ಒಂದೂವರೆ ತಿಂಗಳ ಹಿಂದಷ್ಟೇ ಉಪ್ಪಾರ ಈ ಬಾಡಿಗೆ ಮನೆಗೆ ಬಂದಿದ್ದರು. ಆದರೆ ವಿಜಯಪುರ ಜಿಲ್ಲೆಯಲ್ಲಿರುವ ಮನೆಗಳ ಮೇಲೆ ದಾಳಿಯಾಗಿಲ್ಲ. ವಿಜಯಪುರದ ಗ್ಯಾಂಗ್ ಬಾವಡಿ, ಕೆಸಿಪಿ ಕಾಲೇಜು, ಬಿಎಲ್‌ಡಿ ರಸ್ತೆಯಲ್ಲಿ ಇವರ ಮನೆ ಇದೆ ಎಂದು ಹೇಳಲಾಗಿದೆ.

ಜಿಲ್ಲಾ ಖಜಾನೆ ಕಚೇರಿ ಮೇಲೆ ಎಸಿಬಿ ದಾಳಿ ಬಾಗಲಕೋಟೆಯ ಜಿಲ್ಲಾ ಖಜಾನೆ ಕಚೇರಿಯ ಗುಮಾಸ್ತ ರಮೇಶ್ ಕೊತ್ನಳ್ಳಿ ಅವರು ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau – ACB) ಅಧಿಕಾರಿಗಳು ಬಂಧಿಸಿದ್ದಾರೆ. ಗಳಿಕೆ ರಜೆಯ ವೇತನ ಕೊಡಲು ಇವರು ಸೇಲ್ಸ್​ ಟ್ಯಾಕ್ಸ್​ ಕಚೇರಿಯ ನಿವೃತ್ತ ಸಿಬ್ಬಂದಿ ಯಲ್ಲಪ್ಪ ಗುಲಬಾಳ ಅವರಿಂದ ₹ 2 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಯಲ್ಲಪ್ಪ ಅವರಿಂದ ಲಂಚ ಪಡೆದ ಹಣವನ್ನು ಖಜಾನೆ ಕಚೇರಿಯ ಇನ್ನೊಬ್ಬ ಸಿಬ್ಬಂದಿ ಮೂಲಕ ಜಿಲ್ಲಾಡಳಿತ ಭವನದ ನಂದಿನಿ ಮಿಲ್ಕ್ ಪಾರ್ಲರ್ ಬಳಿ ವ್ಯಕ್ತಿಯೊಬ್ಬರಿಗೆ ತಲುಪಿಸಿದ್ದ ಎಂದು ದೂರಲಾಗಿದೆ.

ಲಂಚ ಪಡೆದ ಎಸ್​ಡಿಎ ರಮೇಶ್, ಲಂಚದ ಹಣ ಬೇರೆ ಕಡೆಗೆ ಇಡಲು ಹೊರಟಿದ್ದ ಸಿಬ್ಬಂದಿ ಮತ್ತು ನಂದಿ ಮಿಲ್ಕ್ ಪಾರ್ಲರ್​ ಕೆಲಸಗಾರನನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು. ಎಸಿಬಿ ಡಿವೈಎಸ್ಪಿ ಸುರೇಶ್ ರಡ್ಡಿ ನೇತೃತ್ವದಲ್ಲಿ ದಾಳಿ ನಡೆಯಿತು.

ಚಾರ್ಟೆಡ್ ಅಕೌಂಟೆಂಟ್ ಅಮಲಾ ಮನೆ ಮೇಲೆ ಐಟಿ ದಾಳಿ ಬೆಂಗಳೂರಿನ ಹೆಗ್ಗಡೆ ನಗರದಲ್ಲಿರುವ ಚಾರ್ಟೆಡ್ ಅಕೌಂಟೆಂಟ್ ಅಮಲಾ ಅವರ ಮನೆಯ ಮೇಲೆ ಐಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಚಿನ್ನಾಭರಣ, ಬೆಳ್ಳಿ, ವಜ್ರಾಭರಣಗಳ ಮೌಲ್ಯಮಾಪನ ನಡೆಸಲಾಯಿತು.

(IT Raid on Irrigation Contractors Infighting is the main reason)

ಇದನ್ನೂ ಓದಿ: IT raid: ಬಿ.ಎಸ್. ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ; ಬಿಎಂಟಿಸಿ ಕಂಡಕ್ಟರ್ ಆಗಿದ್ದ ಆಪ್ತ ಉಮೇಶ್ ಹಿನ್ನೆಲೆ ಏನು? ಇದನ್ನೂ ಓದಿ: IT raid in Bangalore: ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಕಡೆ ಐಟಿ ದಾಳಿ; ಚಾರ್ಟೆಡ್ ಅಕೌಂಟೆಂಟ್ ಅಮಲಾ ಮನೆ ಮೇಲೆ IT ರೇಡ್

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ