ಹಾಸನಕ್ಕೆ ರೈಲಿನಲ್ಲಿ ಬಂದ HDD: ತಾವೇ ಅನುಮೋದಿಸಿದ ಮಾರ್ಗದಲ್ಲಿ ಮೊದಲ ಸಂಚಾರ!
ಹಾಸನ: ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಸನಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ರೈಲಿನಲ್ಲಿ ಆಗಮಿಸಿದ ದೇವೇಗೌಡರಿಗೆ ಹೂಗುಚ್ಛ ನೀಡಿ ಜೆಡಿಎಸ್ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು. ತಾವು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಾಸನ-ಬೆಂಗಳೂರು ಮಾರ್ಗಕ್ಕೆ ರೈಲ್ವೆ ಯೋಜನೆಯನ್ನು ಹೆಚ್.ಡಿ.ದೇವೇಗೌಡರು ಮಂಜೂರು ಮಾಡಿದ್ದರು. ಹಾಸನ ಜಿಲ್ಲೆ ಭಾಗದ ದಶಕಗಳ ಕನಸನ್ನು ದೇವೇಗೌಡರು ನನಸು ಮಾಡಿದ್ದರು. ಇಂದು ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹಾಸನಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಹಾಸನ ರೈಲು ನಿಲ್ದಾಣದಲ್ಲಿ ದೇವೇಗೌಡರಿಗೆ ಜೆಡಿಎಸ್ […]
ಹಾಸನ: ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಸನಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ರೈಲಿನಲ್ಲಿ ಆಗಮಿಸಿದ ದೇವೇಗೌಡರಿಗೆ ಹೂಗುಚ್ಛ ನೀಡಿ ಜೆಡಿಎಸ್ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು.
ತಾವು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಾಸನ-ಬೆಂಗಳೂರು ಮಾರ್ಗಕ್ಕೆ ರೈಲ್ವೆ ಯೋಜನೆಯನ್ನು ಹೆಚ್.ಡಿ.ದೇವೇಗೌಡರು ಮಂಜೂರು ಮಾಡಿದ್ದರು. ಹಾಸನ ಜಿಲ್ಲೆ ಭಾಗದ ದಶಕಗಳ ಕನಸನ್ನು ದೇವೇಗೌಡರು ನನಸು ಮಾಡಿದ್ದರು. ಇಂದು ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹಾಸನಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಹಾಸನ ರೈಲು ನಿಲ್ದಾಣದಲ್ಲಿ ದೇವೇಗೌಡರಿಗೆ ಜೆಡಿಎಸ್ ಕಾರ್ಯಕರ್ತರು ಜೈಕಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.