ರೋಡ್ ಶೋ ತಡೆದು ಇಮ್ರಾನ್ ಪಾಷಾಗೆ ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸರು
ಬೆಂಗಳೂರು: ಕೋವಿಡ್ ಆಸ್ಪತ್ರೆಯಿಂದ ಕಾರ್ಪೊರೇಟರ್ ಇಮ್ರಾನ್ ಪಾಷಾ ಡಿಸ್ಚಾರ್ಜ್ ಆಗಿ ಪಾದರಾಯನಪುರಕ್ಕೆ ರೋಡ್ ಶೋ ಮೂಲಕ ಆಗಮಿಸಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ಜೊತೆ ಜೊತೆಯಲ್ಲಿಯೇ ಇಮ್ರಾನ್ ಪಾಷಾ ಬೆಂಬಲಿಗರು ತೆರಳಿದ್ದಾರೆ. ತಕ್ಷಣ ರೋಡ್ ಶೋ ನಿಲ್ಲಿಸುವಂತೆ ಎಚ್ಚರಿಕೆ: ದಾರಿಯುದ್ದಕ್ಕೂ ಇಮ್ರಾನ್ ಪಾಷಾ ಬೆಂಬಲಿಗರ ಅತಿರೇಕ ವರ್ತನೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಇದೇ ವೇಳೆ ರೋಡ್ ಶೋ ಮಾಡುವಂತಿಲ್ಲ. ಹೀಗೆ ಮಾಡಿದರೆ ಕೇಸ್ ದಾಖಲಿಸುವುದಾಗಿ ಪೊಲೀಸರು ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಎಚ್ಚರಿಕೆ ನೀಡಿದ್ದಾರೆ. ರೋಡ್ ಶೋಗೆ ಅನುಮತಿ ಕೊಟ್ಟಿದ್ದು ಯಾರು? […]
ಬೆಂಗಳೂರು: ಕೋವಿಡ್ ಆಸ್ಪತ್ರೆಯಿಂದ ಕಾರ್ಪೊರೇಟರ್ ಇಮ್ರಾನ್ ಪಾಷಾ ಡಿಸ್ಚಾರ್ಜ್ ಆಗಿ ಪಾದರಾಯನಪುರಕ್ಕೆ ರೋಡ್ ಶೋ ಮೂಲಕ ಆಗಮಿಸಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ಜೊತೆ ಜೊತೆಯಲ್ಲಿಯೇ ಇಮ್ರಾನ್ ಪಾಷಾ ಬೆಂಬಲಿಗರು ತೆರಳಿದ್ದಾರೆ.
ತಕ್ಷಣ ರೋಡ್ ಶೋ ನಿಲ್ಲಿಸುವಂತೆ ಎಚ್ಚರಿಕೆ: ದಾರಿಯುದ್ದಕ್ಕೂ ಇಮ್ರಾನ್ ಪಾಷಾ ಬೆಂಬಲಿಗರ ಅತಿರೇಕ ವರ್ತನೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಇದೇ ವೇಳೆ ರೋಡ್ ಶೋ ಮಾಡುವಂತಿಲ್ಲ. ಹೀಗೆ ಮಾಡಿದರೆ ಕೇಸ್ ದಾಖಲಿಸುವುದಾಗಿ ಪೊಲೀಸರು ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಎಚ್ಚರಿಕೆ ನೀಡಿದ್ದಾರೆ.
ರೋಡ್ ಶೋಗೆ ಅನುಮತಿ ಕೊಟ್ಟಿದ್ದು ಯಾರು? ತಕ್ಷಣವೇ ರೋಡ್ ಶೋ ನಿಲ್ಲಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ರೋಡ್ ಶೋ ಮಾಡಿದರೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಪಾಷಾಗೆ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಎಸ್‌ಐ ಖಡಕ್ ವಾರ್ನಿಂಗ್: ಜೆ.ಜೆ.ನಗರ ಠಾಣೆಯ ಬಳಿ ಇಮ್ರಾನ್ ಪಾಷಾ ಬೆಂಬಲಿಗರ ದ್ವಿಚಕ್ರವಾಹನಗಳನ್ನು ತಡೆಯಲಾಗಿದೆ. ಒಂದು ಹೆಜ್ಜೆ ಮುಂದೆ ಹೋದರೂ ಸರಿಯಾಗಿ ಇರುವುದಿಲ್ಲ. ನಾನು ಇದೇ ಏರಿಯಾದವನೆಂದು ಸಬ್ ಇನ್ಸ್‌ಪೆಕ್ಟರ್ ಸತೀಶ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ನಿಮ್ಮ ಕಾರ್ಪೊರೇಟರ್‌ಗಾಗಿ ಬೇಕಿದ್ರೆ ಪ್ರಾರ್ಥನೆ ಮಾಡಿ, ಆದರೆ ಹೀಗೆ ರೋಡ್ ಶೋ ಮಾಡುವುದು ಒಳ್ಳೆಯದಲ್ಲ ಎಂದು ಎಸ್‌ಐ ಸತೀಶ್ ಹೇಳಿದರು. ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಜತೆ ಪಾಷಾ ಬೆಂಬಲಿಗರು ವಾಗ್ವಾದಕ್ಕಿಳಿದು, ಹಾರ್ನ್ ಮಾಡಿ ಗದ್ದಲವೆಬ್ಬಿಸಿದರು. ಆಗ 150ಕ್ಕೂ ಹೆಚ್ಚು ಬೈಕ್ ತಡೆದು ಬೆಂಬಲಿಗರಿಗೆ ಎಸ್‌ಐ ಸತೀಶ್ ಬೆವರಿಳಿಸಿದರು.
ಬೆಂಬಲಿಗರಿಗೆ ಹಣ ನೀಡಿದ ಕಾರ್ಪೊರೇಟರ್: ಕಾರ್ಪೊರೇಟರ್ ತೆರಳುತ್ತಿದ್ದ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು. ಅಲ್ಲದೆ, ಪಾಷಾ ಬೆಂಬಲಿಗರು ಸಾಮಾಜಿಕ ಅಂತರವನ್ನು ನಿರ್ಲಕ್ಷಿಸಿದ್ದಾರೆ. ಇದೇ ವೇಳೆ ಬೆಂಬಲಿಗರಿಗೆ ಇಮ್ರಾನ್ ಪಾಷಾ ಹಣ ನೀಡಿದರು.
ಇಮ್ರಾನ್ ಪಾಷಾ ನೇರವಾಗಿ ಮನೆಗೆ ಹೋಗದೆ ಮಾರ್ಗಮಧ್ಯೆ ಡಾ.ರಾಜ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ. ಕಾರಿನಲ್ಲಿ ಕುಳಿತು ನೀರು ಕುಡಿದಿದ್ದ ಇಮ್ರಾನ್ ಪಾಷಾ, ಅದೇ ಬಾಟಲ್‌ನಲ್ಲಿರುವ ನೀರನ್ನು ಬೆಂಬಲಿಗರಿಗೆ ಕೊಟ್ಟರು.
ಇಮ್ರಾನ್ ಪಾಷಾರನ್ನ ವಶಕ್ಕೆ ಪಡೆದ ಪೊಲೀಸರು: ರೋಡ್ ಶೋ ಮಾಡಿದ್ದ ಹಿನ್ನೆಲೆಯಲ್ಲಿ ಇಮ್ರಾನ್ ಪಾಷಾರನ್ನ ಪೊಲೀಸರು ವಶಕ್ಕೆ ಪಡೆದು ಜೆ.ಜೆ.ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಜೆ.ಜೆ.ನಗರ ಪೊಲೀಸ್ ಠಾಣೆಗೆ ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ.
Published On - 3:43 pm, Sun, 7 June 20