ಪ್ರೇಮಕವಿ ದಾಂಪತ್ಯದಲ್ಲಿ ಬಿರುಕು: ಪತಿ-ಪತ್ನಿ ಹೇಳೋದೇನು?
ಬೆಳಗಾವಿ: ಚಿತ್ರಸಾಹಿತಿ K ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ವಿಚಾರವಾಗಿ ಖುದ್ದು ದಂಪತಿಯೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟಿವಿ 9 ಜೊತೆ ಮಾತನಾಡಿದ ಚಿತ್ರಸಾಹಿತಿ, ಪ್ರೇಮಕವಿ K ಕಲ್ಯಾಣ್ ನಮ್ಮ ದಾಂಪತ್ಯದಲ್ಲಿ ಬಿರುಕು ಬಂದಿದ್ದು ಅಚ್ಚರಿಯಾಗಿದೆ. ಆದರೆ, ಈ ಗೊಂದಲ ಶೀಘ್ರದಲ್ಲಿಯೇ ಬಗೆಹರಿಯುತ್ತದೆ. ನನ್ನ ಪತ್ನಿ ಅಶ್ವಿನಿ ಕೆಲವೊಂದು ಆರೋಪ ಮಾಡಿದ್ದಾರೆ. ಅದರ ಬಗ್ಗೆಯೂ ನಾನು ಸ್ಪಷ್ಟೀಕರಣ ನೀಡುತ್ತೇನೆ. ವಾಸ್ತವಾಂಶ, ಸತ್ಯ, ಧರ್ಮ ಯಾವತ್ತಿದ್ದರೂ ಉಳಿಯುತ್ತೆ ಎಂದು ಹೇಳಿದ್ದಾರೆ. ನನ್ನ ಕುಟುಂಬದಲ್ಲಿ ಹಲವು ಸಣ್ಣಪುಟ್ಟ ಸಮಸ್ಯೆ ಬಂದಿವೆ. ಎಲ್ಲವನ್ನೂ […]
ಬೆಳಗಾವಿ: ಚಿತ್ರಸಾಹಿತಿ K ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ವಿಚಾರವಾಗಿ ಖುದ್ದು ದಂಪತಿಯೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಟಿವಿ 9 ಜೊತೆ ಮಾತನಾಡಿದ ಚಿತ್ರಸಾಹಿತಿ, ಪ್ರೇಮಕವಿ K ಕಲ್ಯಾಣ್ ನಮ್ಮ ದಾಂಪತ್ಯದಲ್ಲಿ ಬಿರುಕು ಬಂದಿದ್ದು ಅಚ್ಚರಿಯಾಗಿದೆ. ಆದರೆ, ಈ ಗೊಂದಲ ಶೀಘ್ರದಲ್ಲಿಯೇ ಬಗೆಹರಿಯುತ್ತದೆ. ನನ್ನ ಪತ್ನಿ ಅಶ್ವಿನಿ ಕೆಲವೊಂದು ಆರೋಪ ಮಾಡಿದ್ದಾರೆ. ಅದರ ಬಗ್ಗೆಯೂ ನಾನು ಸ್ಪಷ್ಟೀಕರಣ ನೀಡುತ್ತೇನೆ. ವಾಸ್ತವಾಂಶ, ಸತ್ಯ, ಧರ್ಮ ಯಾವತ್ತಿದ್ದರೂ ಉಳಿಯುತ್ತೆ ಎಂದು ಹೇಳಿದ್ದಾರೆ. ನನ್ನ ಕುಟುಂಬದಲ್ಲಿ ಹಲವು ಸಣ್ಣಪುಟ್ಟ ಸಮಸ್ಯೆ ಬಂದಿವೆ. ಎಲ್ಲವನ್ನೂ ಬಗೆಹರಿಸಿಕೊಂಡು ಜೀವನ ಮಾಡುತ್ತಿದ್ದೆವು. ಈಗ ಬಂದಿರುವ ಗೊಂದಲವನ್ನು ಕೂತು ಬಗೆಹರಿಸಿಕೊಳ್ಳುತ್ತೇವೆ. ನನ್ನ ಪತ್ನಿಗೆ ಕೌನ್ಸಲಿಂಗ್ ಮಾಡಿಸಿದರೆ ಎಲ್ಲ ಸರಿಯಾಗುತ್ತೆ. ನಾನು ಇಂದಿಗೂ ನನ್ನ ಪತ್ನಿ ಜೊತೆ ಮಾತನಾಡುತ್ತಿದ್ದೇನೆ. ನಾನು, ನನ್ನ ಪತ್ನಿ ಇಬ್ಬರೂ ಈಗಲು ಚೆನ್ನಾಗಿದ್ದೇವೆ. ಆದರೆ ನನ್ನ ಪತ್ನಿ ಕೆಲವೊಂದು ಆರೋಪ ಮಾಡಿದ್ದಾರೆ. ಆ ಆರೋಪಗಳ ಬಗ್ಗೆ ಕುಳಿತು ಚರ್ಚಿಸಿದರೆ ಸರಿಯಾಗುತ್ತೆ ಎಂದು ಕಲ್ಯಾಣ್ ಹೇಳಿದ್ದಾರೆ.
ನನ್ನ ಪತ್ನಿ ಕೆಟ್ಟವರಂತೂ ಅಲ್ಲವೇ ಅಲ್ಲ. ಸ್ವಲ್ಪ ಸಮಸ್ಯೆಯಾಗಿದೆ. ಆದರೆ ಎಲ್ಲೋ ಒಂದು ಸಮಸ್ಯೆಯಾಗಿದೆ. ಅದು ಗೊತ್ತಾಗುತ್ತಿಲ್ಲ. ನಾವಿಬ್ಬರೂ ಕುಳಿತು ಚರ್ಚೆ ಮಾಡಿದರೆ ಸರಿಯಾಗುತ್ತದೆ ಎಂದು ಚಿತ್ರಸಾಹಿತಿ, ಪ್ರೇಮಕವಿ K ಕಲ್ಯಾಣ್ ಹೇಳಿದ್ದಾರೆ. ‘ನಮ್ಮ ದಾಂಪತ್ಯ ಜೀವನ ಮತ್ತೆ ಮುಂದುವರೆಯುತ್ತೆ ಅನ್ನೋದನ್ನ ಹೇಳೋದಕ್ಕಾಗಲ್ಲ’ ಇತ್ತ ಚಿತ್ರಸಾಹಿತಿಯ ಪತ್ನಿ ಅಶ್ವಿನಿ ಟಿವಿ 9ಗೆ ಪ್ರತಿಕ್ರಿಯಿಸಿದ್ದಾರೆ. ನಾವಿಬ್ಬರೂ ದೂರವಾಗಿಲ್ಲ. ನಾನು ಕಿಡ್ನ್ಯಾಪ್ ಆಗಿಲ್ಲ ಅನ್ನೋದನ್ನ ಮಾತ್ರ ಹೇಳುತ್ತೇನೆ. ಆದರೆ, ಕೌನ್ಸಲಿಂಗ್ ಆದ ಬಳಿಕ ಎಲ್ಲವನ್ನೂ ಹೇಳ್ತೇನೆ ಎಂದು ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ.
ನಾವು ದೂರವಾಗಿಲ್ಲ, ಕೌನ್ಸಲಿಂಗ್ ಆದ ಮೇಲೆ ಕ್ಲಿಯರ್ ಆಗಿ ಹೇಳುತ್ತೇನೆ. ನಮ್ಮ ದಾಂಪತ್ಯ ಜೀವನ ಮತ್ತೆ ಮುಂದುವರೆಯುತ್ತೆ ಅನ್ನೋದನ್ನ ಹೇಳೋದಕ್ಕಾಗಲ್ಲ. ನಮ್ಮ ಹೇಳಿಕೆಗೆ ಯಾರೂ ಕೂಡ ಕಾರಣವಲ್ಲ. ನನ್ನ ಇಷ್ಟದ ಪ್ರಕಾರವಾಗಿ ಕೌನ್ಸಲಿಂಗ್ಗೆ ಒಳಗಾಗುತ್ತಿದ್ದೇನೆ. ಕೌನ್ಸಲಿಂಗ್ ಆದ ನಂತರ ನಾನು ಎಲ್ಲವನ್ನೂ ಮಾತನಾಡುತ್ತೀನಿ. ಇರೋ ನಿಜ ಕೌನ್ಸಲಿಂಗ್ ಆದ ನಂತರ ಗೊತ್ತಾಗುತ್ತೆ. ಯಾವಾಗ ಕೌನ್ಸಲಿಂಗ್ ನಡೆಯುತ್ತೆ ಅಂತಾ ಗೊತ್ತಿಲ್ಲಾ. ಹಾಗಾಗಿ, ಏನೇ ಹೇಳಿದ್ರೂ ಅದು ಕೌನ್ಸಲಿಂಗ್ ಆದ ನಂತರವೇ ಸರಿಯಾಗಿ ಹೇಳಲು ಸಾಧ್ಯ ಎಂದು ಕಲ್ಯಾಣ್ ಪತ್ನಿ ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ.
Published On - 10:38 am, Sun, 4 October 20