ಕಂಟೈನ್ಮೆಂಟ್ ಏರಿಯಾದಲ್ಲಿ ಕರ್ತವ್ಯದಲ್ಲಿದ್ದ ಕಲಾಸಿಪಾಳ್ಯ ಮಹಿಳಾ ಪೇದೆ​ಗೆ ಬಂತು ಕೊರೊನಾ

ಬೆಂಗಳೂರು: ನಗರದ ಪೊಲೀಸ್​ ಸಿಬ್ಬಂದಿಯನ್ನು ಬಿಟ್ಟೂಬಿಡದೆ ಕಾಡ್ತಿದೆ ಕೊರೊನಾ. ಇದೀಗ ನಗರದ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಕಾನ್​ಸ್ಟೇಬಲ್​ಗೆ  ಸೋಂಕು ತಗಲಿರುವುದು ದೃಢವಾಗಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಮಹಿಳಾ ಕಾನ್​ಸ್ಟೇಬಲ್  ಅಮೀರ್ ಖಾನ್ ಗಾರ್ಡನ್, ದೊಡ್ಡಮಾವಳ್ಳಿಯ ಕಂಟೈನ್ ಮೆಂಟ್ ಏರಿಯಾದಲ್ಲಿ ಕರ್ತವ್ಯ  ಮಾಡಿದ್ದರು. ಕಳೆದ ಶನಿವಾರ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು: ಚಾಮರಾಜಪೇಟೆಯ ದೊಡ್ಡ ಮಾವಳ್ಳಿಯ ನಿವಾಸಿಯಾಗಿದ್ದ ಮಹಿಳಾ ಕಾನ್​ಸ್ಟೇಬಲ್  ಅಲ್ಲಿನ ಪಿ.ಜಿ ಒಂದರಲ್ಲಿ ವಾಸವಾಗಿದ್ದರು. ಇದೀಗ ಅವರ ಪ್ರೈಮರಿ ಕಾಂಟ್ಯಾಕ್ಟ್​ಗಳನ್ನು ಪತ್ತೆ […]

ಕಂಟೈನ್ಮೆಂಟ್ ಏರಿಯಾದಲ್ಲಿ ಕರ್ತವ್ಯದಲ್ಲಿದ್ದ ಕಲಾಸಿಪಾಳ್ಯ ಮಹಿಳಾ ಪೇದೆ​ಗೆ ಬಂತು ಕೊರೊನಾ
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 17, 2020 | 1:28 PM

ಬೆಂಗಳೂರು: ನಗರದ ಪೊಲೀಸ್​ ಸಿಬ್ಬಂದಿಯನ್ನು ಬಿಟ್ಟೂಬಿಡದೆ ಕಾಡ್ತಿದೆ ಕೊರೊನಾ. ಇದೀಗ ನಗರದ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಕಾನ್​ಸ್ಟೇಬಲ್​ಗೆ  ಸೋಂಕು ತಗಲಿರುವುದು ದೃಢವಾಗಿದೆ.

ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಮಹಿಳಾ ಕಾನ್​ಸ್ಟೇಬಲ್  ಅಮೀರ್ ಖಾನ್ ಗಾರ್ಡನ್, ದೊಡ್ಡಮಾವಳ್ಳಿಯ ಕಂಟೈನ್ ಮೆಂಟ್ ಏರಿಯಾದಲ್ಲಿ ಕರ್ತವ್ಯ  ಮಾಡಿದ್ದರು.

ಕಳೆದ ಶನಿವಾರ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು:
ಚಾಮರಾಜಪೇಟೆಯ ದೊಡ್ಡ ಮಾವಳ್ಳಿಯ ನಿವಾಸಿಯಾಗಿದ್ದ ಮಹಿಳಾ ಕಾನ್​ಸ್ಟೇಬಲ್  ಅಲ್ಲಿನ ಪಿ.ಜಿ ಒಂದರಲ್ಲಿ ವಾಸವಾಗಿದ್ದರು. ಇದೀಗ ಅವರ ಪ್ರೈಮರಿ ಕಾಂಟ್ಯಾಕ್ಟ್​ಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಜೊತೆಗೆ ಇಡೀ ಪಿ.ಜಿ ಬಿಲ್ಡಿಂಗ್ ಸೀಲ್ ಡೌನ್ ಮಾಡಲಾಗಿದೆ.

Published On - 6:13 pm, Mon, 15 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us