Bigg Boss Day 2: ಬಿಗ್​ ಬಾಸ್​ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ – ದಿವ್ಯಾ ಸುರೇಶ್​!

Bigg Boss Kannada; Day 2: ಪ್ರತಿ ಸೀಸನ್​ನಲ್ಲೂ ಒಂದೊಂದು ಲವ್​ ಸ್ಟೋರಿ ಹುಟ್ಟಿಕೊಳ್ಳುತ್ತದೆ. ಕೆಲವು ಅರ್ಧಕ್ಕೆ ನಿಂತರೆ ಇನ್ನೂ ಕೆಲವು ಮದುವೆಯಲ್ಲಿ ಪೂರ್ಣಗೊಂಡಿವೆ. ವಿಚಿತ್ರ ಎಂದರೆ ಈ ಬಾರಿಯ ಬಿಗ್​ ಬಾಸ್​ ಮನೆಯಲ್ಲಿ ಮದುವೆಯೇ ನಡೆದು ಹೋಗಿದೆ!

Bigg Boss Day 2: ಬಿಗ್​ ಬಾಸ್​ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ - ದಿವ್ಯಾ ಸುರೇಶ್​!
ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಬಿಗ್ ಬಾಸ್ ಮನೆಯಲ್ಲಿ
Updated By: Digi Tech Desk

Updated on: Mar 03, 2021 | 9:16 AM

ಬಿಗ್​ ಬಾಸ್ ಮನೆಯಲ್ಲಿ ಪ್ರೇಮ ಕಥೆಗಳಿಗೇನೂ ಬರಗಾಲ ಇರುವುದಿಲ್ಲ. ಪ್ರತಿ ಸೀಸನ್​ನಲ್ಲೂ ಒಂದೊಂದು ಲವ್​ ಸ್ಟೋರಿ ಹುಟ್ಟಿಕೊಳ್ಳುತ್ತದೆ. ಕೆಲವು ಅರ್ಧಕ್ಕೆ ನಿಂತರೆ ಇನ್ನೂ ಕೆಲವು ಮದುವೆಯಲ್ಲಿ ಪೂರ್ಣಗೊಂಡಿವೆ. ವಿಚಿತ್ರ ಎಂದರೆ ಈ ಬಾರಿಯ ಬಿಗ್​ ಬಾಸ್​ ಮನೆಯಲ್ಲಿ ಮದುವೆಯೇ ನಡೆದು ಹೋಗಿದೆ! ಅದು ಮಂಜು ಪಾವಗಡ-ದಿವ್ಯಾ ಸುರೇಶ್​ ಅವರದ್ದು!. ಬಿಗ್ ಬಾಸ್ ಮನೆ ಪ್ರವೇಶಿಸಿದ ಸ್ಪರ್ಧಿಗಳು ಮೊದಲ ದಿನ ತಮ್ಮ ಲಗೇಜ್ ಜೋಡಿಸಿಕೊಳ್ಳುತ್ತಿದ್ದರು. ಈ ವೇಳೆ, ದಿವ್ಯಾ ಸುರೇಶ್ ಬಳಿ ಬಂದ ಮಂಜು ಪಾವಗಡ, ‘ನಿಮಗೆ ಏನು ಬೇಕು ಕೇಳಿ, ನಿಮಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ’ ಎಂದು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ದಿವ್ಯಾ ಸುರೇಶ್ ‘ನಿಮ್ಮ ಕೈಯಲ್ಲಿ ಕೆಲಸ ಮಾಡಿಸಲ್ಲ. ನಿಮ್ಮ ಕೈಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತೆ’ ಎಂದಿದ್ದರು. ಈ ಘಟನೆಯಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ವದಂತಿಗೆ ಕಾರಣವಾಗಿತ್ತು.

ಇದಾದ ಬೆನ್ನಲ್ಲೇ ಬಿಗ್​ ಬಾಸ್ ಮನೆಯಲ್ಲಿ ಮದುವೆ ನಾಟಕ ನಡೆದಿದೆ. ಮಂಜು ಮದುವೆ ಆಗೋ ಹುಡುಗ. ಮದುವೆ ಆಗುವ ಹುಡುಗಿ ದಿವ್ಯಾ. ಅವರಿಬ್ಬ ನಡುವೆ ನಡೆದ ಸಂವಾದ ಇಲ್ಲಿದೆ.

ದಿವ್ಯಾ: ನೀನು ಅಂದ್ರೆ ನಂಗೆ ಇಷ್ಟ ಇಲ್ಲ
ಮಂಜು: ಏಕೆ ಇಷ್ಟ ಇಲ್ಲ. ನನಗೇನು ಕಮ್ಮಿ ಆಗಿದೆ?
ದಿವ್ಯಾ: ನೀನು ನನಗಿಂತ ಕುಳ್ಳಗೆ ಇದ್ದೀಯಾ.
ಮಂಜು: ಕುಳ್ಳಗೆ ಇರೋದು  ಎಲ್ಲಿ ಸಮಸ್ಯೆ ಆಗುತ್ತೆ ಹೇಳು?
ದಿವ್ಯಾ: ನನಗೆ ಎತ್ತರ ಇದ್ದವರನ್ನೇ ಮದುವೆ ಆಗಬೇಕು ಎನ್ನುವ ಆಸೆ ಇತ್ತು.
ಮಂಜು: ನನಗೂ ನನಗಿಂತ ಎತ್ತರ ಇದ್ದವರನ್ನು ಮದುವೆ ಆಗಬೇಕು ಎನ್ನುವ ಆಸೆ ಇತ್ತು.
ದಿವ್ಯಾ: ನಾನು ಮದುವೆ ಆಗಲ್ಲ.
ಮಂಜು: ಕಣ್ಣಲ್ಲಿ ಕಣ್ಣಿಟ್ಟು ಹೇಳು ನನ್ನ ಕಂಡರೆ ಇಷ್ಟವಿಲ್ಲ ಎಂದು.

ಹೀಗೆ ಸಂವಾದ ನಡೆಯುವಾಗಲೇ ಕತ್ತಿನಲ್ಲಿದ್ದ ಮೈಕ್​ ಬ್ಯಾಗ್​ ಅನ್ನು ಮಂಜು ದಿವ್ಯಾ ಕತ್ತಿಗೆ ಹಾಕಿದ್ದಾರೆ. ದಿವ್ಯಾ ಅದನ್ನು ತೆಗೆದು ಮತ್ತೆ ಮಂಜುನ ಕತ್ತಿಗೆ ಹಾಕಿದ್ದಾರೆ. ಈ ಮೂಲಕ ಮನೆಯವರೆಲ್ಲರೂ ಇವರ ಮದುವೆಯೇ ಆಗಿದೆ ಎನ್ನುವ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಚೂಡಿದಾರ್​ ಹಾಕ್ಕೊಂದು ಅಡುಗೆನೂ ಮಾಡ್ತೀನಿ.. ಚಡ್ಡಿ ಹಾಕ್ಕೊಂಡು ನಿಮ್ಮಪ್ಪನ ಗಾಡೀನೂ ಓಡಸ್ತೀನಿ ಅಂದಿದ್ದೆ

Published On - 11:02 pm, Tue, 2 March 21