ಮಹಿಷಿ ವರದಿ ಜಾರಿಗೆ: ಕನ್ನಡ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

  • TV9 Web Team
  • Published On - 9:14 AM, 13 Feb 2020
ಮಹಿಷಿ ವರದಿ ಜಾರಿಗೆ: ಕನ್ನಡ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ಕೆಲಸಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಬಂದ್ ಹೋರಾಟ ನಡೆಯುತ್ತಿದೆ.

ಈ ಹಿನ್ನೆಲೆ ಕನ್ನಡರ ಪರ ಸಂಘಟನೆ ಕಾರ್ಯಕರ್ತರು ಬೊಮ್ಮಸಂದ್ರದಲ್ಲಿ ವಾಹನಗಳನ್ನ ತಡೆದು ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಅತ್ತಿಬೆಲೆ ಬಳಿಯ ನೆರಳೂರು, ಹೊಸೂರು ರಸ್ತೆಗಳಲ್ಲೂ ಇದೇ ರೀತಿಯ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪ್ರತಿಭಟನೆ ತಡೆಯುತ್ತಿದ್ದಾರೆ.