AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ DCC ಬ್ಯಾಂಕ್ ಚುನಾವಣೆ: 2 ಮತಗಳ ಅಂತರದಿಂದ ಅರವಿಂದ್ ಪಾಟೀಲ್​ಗೆ ಭರ್ಜರಿ ಗೆಲುವು

ಬೆಳಗಾವಿ: ಜಿಲ್ಲೆಯ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಅರವಿಂದ್ ಪಾಟೀಲ್​ ಭರ್ಜರಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಮಾಜಿ ಶಾಸಕ ಅರವಿಂದ್ ಪಾಟೀಲ್‌ಗೆ 27 ಮತಗಳು ಸಿಕ್ಕಿದ್ದು ಅವರ ಪ್ರತಿಸ್ಪರ್ಧಿಯಾದ ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ 25 ಮತಗಳು ಲಭ್ಯವಾಗಿದೆ. ಅರವಿಂದ್ ಪಾಟೀಲ್ ಬಿಜೆಪಿ ಬೆಂಬಲಿತ ಅಭ್ಯರ್ಥಿ. ಚುನಾವಣೆಗೂ ಮುನ್ನ ಅಭ್ಯರ್ಥಿಗಳು ಮತದಾರರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಿದ್ದರು. ಇದೀಗ, ಜಿದ್ದಾಜಿದ್ದಿನ ಕಣದಲ್ಲಿ ಅರವಿಂದ್ ಪಾಟೀಲ್‌ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಬಂದ ನಂತರ ಮಾಡೆಲ್ ಸ್ಕೂಲ್ […]

ಬೆಳಗಾವಿ DCC ಬ್ಯಾಂಕ್ ಚುನಾವಣೆ: 2 ಮತಗಳ ಅಂತರದಿಂದ ಅರವಿಂದ್ ಪಾಟೀಲ್​ಗೆ ಭರ್ಜರಿ ಗೆಲುವು
KUSHAL V
|

Updated on: Nov 06, 2020 | 5:30 PM

Share

ಬೆಳಗಾವಿ: ಜಿಲ್ಲೆಯ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಅರವಿಂದ್ ಪಾಟೀಲ್​ ಭರ್ಜರಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಮಾಜಿ ಶಾಸಕ ಅರವಿಂದ್ ಪಾಟೀಲ್‌ಗೆ 27 ಮತಗಳು ಸಿಕ್ಕಿದ್ದು ಅವರ ಪ್ರತಿಸ್ಪರ್ಧಿಯಾದ ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ 25 ಮತಗಳು ಲಭ್ಯವಾಗಿದೆ. ಅರವಿಂದ್ ಪಾಟೀಲ್ ಬಿಜೆಪಿ ಬೆಂಬಲಿತ ಅಭ್ಯರ್ಥಿ. ಚುನಾವಣೆಗೂ ಮುನ್ನ ಅಭ್ಯರ್ಥಿಗಳು ಮತದಾರರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಿದ್ದರು. ಇದೀಗ, ಜಿದ್ದಾಜಿದ್ದಿನ ಕಣದಲ್ಲಿ ಅರವಿಂದ್ ಪಾಟೀಲ್‌ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಬಂದ ನಂತರ ಮಾಡೆಲ್ ಸ್ಕೂಲ್ ಮುಂಭಾಗದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಬಣ್ಣ ಎರಚಿ ಅರವಿಂದ್ ಪಾಟೀಲ್ ಪರ ಘೋಷಣೆ ಕೂಗಿ ಕಾರ್ಯಕರ್ತರು ಸಂಭ್ರಮಾಚರಿಸಿದರು.

ಮತಗಟ್ಟೆ ಕೇಂದ್ರದಿಂದ ಹೊರ ಹೋಗುತ್ತಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್ ಕಾರು ಸುತ್ತುವರೆದ ಅರವಿಂದ್ ಪಾಟೀಲ್ ಬೆಂಬಲಿಗರು ರಸ್ತೆ ಮಧ್ಯದಲ್ಲಿ ಜೈಕಾರ ಕೂಗುತ್ತಾ ಶಾಸಕಿ ಕಾರನ್ನು ಅಡ್ಡಗಟ್ಟಿದರು. ಆದರೆ, ಕೂಡಲೇ ಕಾರ್ಯಕರ್ತರು ಮತ್ತು ಬೆಂಬಲಿಗರನ್ನ ತಳ್ಳಿ ನಿಂಬಾಳ್ಕರ್ ವಾಹನವನ್ನು ಪೊಲೀಸರು ಕಳುಹಿಸಿದರು. ಈ ನಡುವೆ ಕಾರಿನಿಂದ ಕೆಳಗಿಳಿದು ಕಾರು ಅಡ್ಡಗಟ್ಟಿದ ಅರವಿಂದ್​ ಪಾಟೀಲ್​ ಬೆಂಬಲಿಗರಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಅಭಿನಂದನೆ ಸಲ್ಲಿಸಿದರು

ಡಿಸಿಸಿ ಬ್ಯಾಂಕ್ ನ ಮೂರು ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎರಡು ಬಿಜೆಪಿ ಪಾಲಾಗಿದ್ದು ಒಂದು ಕಾಂಗ್ರೆಸ್ ಪಾಲಾಗಿದೆ. ಸದ್ಯ, ಹದಿನಾರು ನಿರ್ದೇಶಕ ಸ್ಥಾನಗಳ ಪೈಕಿ 15 ಬಿಜೆಪಿಯವರು ಮತ್ತು 1 ಕಾಂಗ್ರೆಸ್​ನವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ