ಬೆಳಗಾವಿ: ದಿನಸಿ ಕಿಟ್ ವಿತರಣೆ ಮಾಡುತ್ತಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಕಚೇರಿ ಮುಂದೆ ಸಾಮಾಜಿಕ ಅಂತರ ಮರೆತು ಜನಜಂಗುಳಿ ಸೇರಿದ್ದಾರೆ. ಚೆನ್ನಮ್ಮ ವೃತ್ತದ ಬಳಿ ಇರುವ ಕಚೇರಿ ಮುಂದೆ ಸಾವಿರಕ್ಕೂ ಅಧಿಕ ಜನರು. ಕ್ಯೂ ನಿಂತಿದ್ದಾರೆ.
ಬೆಳಗಾವಿಯ ಶಹಾಪುರ, ವಡಗಾಂವಿ ಸೇರಿದಂತೆ ವಿವಿಧ ಕಡೆಗಳಿಂದ ಜನರು ಆಗಮಿಸಿದ್ದಾರೆ. ಸಾಮಾಜಿಕ ಅಂತರ ಮರೆತು ಮಹಿಳೆಯರು ಮತ್ತು ಪುರುಷರ ಕ್ಯೂನಲ್ಲಿದ್ದಾರೆ. ಸುರೇಶ್ ಅಂಗಡಿ ಆಗಮಿಸುತ್ತಿದ್ದಂತೆ ಗುಂಪುಗೂಡಿದರು. ನಾನು ಯಾವುದೇ ಕಿಟ್ ವಿತರಣೆ ಮಾಡುತ್ತಿಲ್ಲ. ವಾಪಸ್ ಹೋಗಿ ಎಂದು ಸುರೇಶ್ ಅಂಗಡಿ ಮನವಿ ಮಾಡಿದರು.
ನಾವು ಯಾರ ಕಡೆಯೂ ಕೈಚಾಚಿಲ್ಲ. ಈಗ ಸುರೇಶ್ ಅಂಗಡಿ ವಾಪಸ್ ಕಳುಹಿಸುತ್ತಿದ್ದಾರೆ. ಕೆಲಸವಿಲ್ಲದೆ ಊಟಕ್ಕೂ ಪರದಾಡುತ್ತಿದ್ದೇವೆ. ನಮಗೆ ಸಹಾಯ ಮಾಡಿ, ಕಿಟ್ ವಿತರಣೆ ಮಾಡಿ ಎಂದು ಮಹಿಳೆಯರು ಕಣ್ಣೀರಿಡುತ್ತಿದ್ದಾರೆ.
Published On - 12:25 pm, Tue, 26 May 20