ಬೆಂಗಳೂರಿನಲ್ಲಿ ಪೊಲೀಸ್ ಶ್ವಾನಗಳ ಆರೋಗ್ಯಕ್ಕಾಗಿ ಬೃಹತ್ ಪಾರ್ಕ್​ ಉದ್ಘಾಟನೆ

ಬೆಂಗಳೂರು: ಒತ್ತಡಗಳ ಮಹಾನಗರವಾಗಿ ಮಾರ್ಪಟ್ಟು ಯಾವುದೋ ಕಾಲವಾಯ್ತು. ಇಲ್ಲಿನ ಜನರಂತೂ ಒತ್ತಡಗಳ ಮಧ್ಯೆಯೇ ಧಾವಂತದ ಜೀವನ ನಡೆಸುತ್ತಿದ್ದಾರೆ. ಇನ್ನು, ಪೊಲೀಸರು ಅಷ್ಟೆ. ಭಾರೀ ಒತ್ತಡದ ನಡುವೆಯೇ ಸೇವಾನಿರತರಾಗಿದ್ದಾರೆ. ಇವರಿಗೆ ಸಾಥ್​ ನೀಡುವ ಶ್ವಾನಗಳೂ ಇತ್ತೀಚೆಗೆ ಒತ್ತಡಕ್ಕೆ ಸಿಲುಕಿವೆ ಎಂಬ ದೂರು ಆಗಾಗ ಕೇಳಿಬರುತ್ತಲೇ ಇತ್ತು. ಆದ್ರೆ ಇತ್ತೀಚೆಗೆ ಶ್ವಾನ ಮನೋ ವೈದ್ಯ ತಜ್ಞ, ಡಾಗ್‌ ಗುರು ಅಮೃತ್‌ ಪೊಲೀಸ್ ಡಿಪಾರ್ಟ್​ಮೆಂಟ್​ಗೆ ಉಚಿತ ಸಲಹೆಯೊಂದನ್ನು ನೀಡಿದ್ದು, ಬೆಂಗಳೂರಲ್ಲಿ ಶ್ವಾನಗಳು ಚಟುವಟಿಕೆಯಿಂದ ಇರಬೇಕು ಅಂದ್ರೆ ಮೊದಲು ಅವುಗಳಿಗಾಗಿಯೇ ಒಂದು ಪ್ರತ್ಯೇಕ […]

ಬೆಂಗಳೂರಿನಲ್ಲಿ ಪೊಲೀಸ್ ಶ್ವಾನಗಳ ಆರೋಗ್ಯಕ್ಕಾಗಿ ಬೃಹತ್ ಪಾರ್ಕ್​ ಉದ್ಘಾಟನೆ
Follow us
ಸಾಧು ಶ್ರೀನಾಥ್​
|

Updated on:May 26, 2020 | 2:56 PM

ಬೆಂಗಳೂರು: ಒತ್ತಡಗಳ ಮಹಾನಗರವಾಗಿ ಮಾರ್ಪಟ್ಟು ಯಾವುದೋ ಕಾಲವಾಯ್ತು. ಇಲ್ಲಿನ ಜನರಂತೂ ಒತ್ತಡಗಳ ಮಧ್ಯೆಯೇ ಧಾವಂತದ ಜೀವನ ನಡೆಸುತ್ತಿದ್ದಾರೆ. ಇನ್ನು, ಪೊಲೀಸರು ಅಷ್ಟೆ. ಭಾರೀ ಒತ್ತಡದ ನಡುವೆಯೇ ಸೇವಾನಿರತರಾಗಿದ್ದಾರೆ. ಇವರಿಗೆ ಸಾಥ್​ ನೀಡುವ ಶ್ವಾನಗಳೂ ಇತ್ತೀಚೆಗೆ ಒತ್ತಡಕ್ಕೆ ಸಿಲುಕಿವೆ ಎಂಬ ದೂರು ಆಗಾಗ ಕೇಳಿಬರುತ್ತಲೇ ಇತ್ತು.

ಆದ್ರೆ ಇತ್ತೀಚೆಗೆ ಶ್ವಾನ ಮನೋ ವೈದ್ಯ ತಜ್ಞ, ಡಾಗ್‌ ಗುರು ಅಮೃತ್‌ ಪೊಲೀಸ್ ಡಿಪಾರ್ಟ್​ಮೆಂಟ್​ಗೆ ಉಚಿತ ಸಲಹೆಯೊಂದನ್ನು ನೀಡಿದ್ದು, ಬೆಂಗಳೂರಲ್ಲಿ ಶ್ವಾನಗಳು ಚಟುವಟಿಕೆಯಿಂದ ಇರಬೇಕು ಅಂದ್ರೆ ಮೊದಲು ಅವುಗಳಿಗಾಗಿಯೇ ಒಂದು ಪ್ರತ್ಯೇಕ ಉದ್ಯಾನವನ ನಿರ್ಮಿಸುವ ಅನಿವಾರ್ಯತೆಯಿದೆ ಎಂದಿದ್ದರು. ಅದರಂತೆ “ಶ್ವಾನ ಚಟುವಟಿಕೆ ಉದ್ಯಾನವನ” ನಿರ್ಮಾಣವಾಗಿದ್ದು, ಇಂದು ಉದ್ಘಾಟನೆ ಭಾಗ್ಯವನ್ನೂ ಕಂಡಿದೆ.

ಭಯೋತ್ಪಾದಕ ಕೃತ್ಯ ವಿಫಲಗೊಳಿಸುವ, ಮಟ್ಟಹಾಕುವ ಬಗ್ಗೆ ತರಬೇತಿ ನೀಡುವ ಮತ್ತು ಸ್ವಯಂ ಅವುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶ್ವಾನ ಚಟುವಟಿಕೆ ಉದ್ಯಾನವನ ನಿರ್ಮಾಣವಾಗಿದ್ದು, ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಇಂದು ಉದ್ಘಾಟನೆ ಮಾಡಿದ್ದಾರೆ.

₹2.5 ಕೋಟಿ ಅನುದಾನದಲ್ಲಿ ಉದ್ಯಾನವನ ನಿರ್ಮಾಣ: ಒಟ್ಟು 2.5 ಕೋಟಿ ಅನುದಾನದಲ್ಲಿ ಶ್ವಾನ ಚಟುವಟಿಕೆ ಉದ್ಯಾನವನ ನಿರ್ಮಾಣವಾಗಿದ್ದು, ಜರ್ಮನ್ ಶಫರ್ಡ್, ಬೆಲ್ಜಿಯಂ ಶೆಫರ್ಡ್, ಗೋಲ್ಡನ್ ರಿಟ್ರಿವರ್ ಹಾಗೂ ಡಾಬರ್ ಮೆನ್ ತಳಿಯ 50 ಶ್ವಾನಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ, ಪ್ರಪ್ರಥಮ ಬಾರಿಗೆ ಪೊಲೀಸ್‌ ಶ್ವಾನ ತಂಡದಿಂದ ಭಯೋತ್ಪಾದನಾ ಕೃತ್ಯ ಪತ್ತೆ ಹಚ್ಚುವಿಕೆ ಕುರಿತು ಪ್ರದರ್ಶನ ಏರ್ಪಡಿಸಲಾಗಿತ್ತು.

ಇದೊಂದು ವಿನೂತನ ತರಬೇತಿ ಹೊಂದಿರುವ ಶ್ವಾನದಳವಾಗಿದೆ. ನಗರದಲ್ಲಿ ಯಾವುದೆ ಘಟನೆಗೆ ಈ ಶ್ವಾನಗಳು ಸಿದ್ಧವಾಗಿದೆ. ಮಾದಕ ವಸ್ತುಗಳ ಪತ್ತೆ, ಆರೋಪಿಗಳ ಪತ್ತೆಗೆ ಸಹಕಾರ ಸೇರಿದಂತೆ ಇನ್ನಿತರ ಬಗ್ಗೆಯೂ ತರಬೇತಿ ಪಡೆದ ಶ್ವಾನಗಳನ್ನ ಪ್ರದರ್ಶನ ಮಾಡಲಾಯ್ತು. ದ್ರೋಣ ಪೂಜಾ ಮಿಂಚು ಸೇರಿ ಒಟ್ಟು 10 ಕ್ಕೂ ಹೆಚ್ಚು ಶ್ವಾನಗಳ ಪ್ರದರ್ಶನ ಮಾಡಲಾಯ್ತು.

Published On - 2:07 pm, Tue, 26 May 20

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ