ಕಟಿಂಗ್ ಶಾಪ್ ತೆರೆಯದಿದ್ದಕ್ಕೆ ಈ ಯುವಕರು ಮಾಡಿದ್ದೇನು ಗೊತ್ತಾ?
ವಿಜಯಪುರ: ಕೊರೊನಾ.. ಕೊರೊನಾ.. ಕೊರೊನಾ.. ಎಲ್ಲಿ ಕೇಳಿದರಲ್ಲಿ ಕೊರೊನಾದ್ದೇ ಮಾತು. ಎಲ್ಲ ಕ್ಷೇತ್ರಗಳೂ ಕೊರೊನಾದಿಂದ ಕಡುಗಷ್ಟವನ್ನೇ ಅನುಭವಿಸಿವೆ. ಇದಕ್ಕೆ ಕಟಿಂಗಹ್ ಶಾಪ್, ಸಲೂನ್ಗಳು ಸಹ ಹೊರತಾಗಿರಲಿಲ್ಲಾ. ಲಾಕ್ಡೌನ್ ಸಮಯದಲ್ಲಿ ಕಟಿಂಗ್ ಶಾಪ್ ಹಾಗೂ ಸಲೂನ್ಗಳು ಸಂಪೂರ್ಣ ಬಂದ್ ಆಗಿದ್ದವು. ನಂತರ ಲಾಕ್ ಡೌನ್ ಸಮಯದಲ್ಲಿ ಕಟಿಂಗ್ ಶಾಪ್, ಸಲೂನ್, ಸ್ಪಾ ಸೆಂಟರ್, ಬ್ಯೂಟಿ ಪಾರ್ಲರ್ಗಳಿಗೆ ಹಲವಾರು ನಿಮಯ ಜಾರಿ ಮಾಡಿ ಸೇವೆ ನೀಡಲು ಅವಕಾಶ ನೀಡಲಾಗಿದೆ. ಈ ಸಡಲಿಕೆ ಸೀಲ್ಡೌನ್ ಏರಿಯಾಗಳಿಗೆ ಅನ್ವಯವಾಗಲ್ಲಾ. ಕೊರೊನಾ ಸೋಂಕು ತಡೆಗಟ್ಟುವ […]
ವಿಜಯಪುರ: ಕೊರೊನಾ.. ಕೊರೊನಾ.. ಕೊರೊನಾ.. ಎಲ್ಲಿ ಕೇಳಿದರಲ್ಲಿ ಕೊರೊನಾದ್ದೇ ಮಾತು. ಎಲ್ಲ ಕ್ಷೇತ್ರಗಳೂ ಕೊರೊನಾದಿಂದ ಕಡುಗಷ್ಟವನ್ನೇ ಅನುಭವಿಸಿವೆ. ಇದಕ್ಕೆ ಕಟಿಂಗಹ್ ಶಾಪ್, ಸಲೂನ್ಗಳು ಸಹ ಹೊರತಾಗಿರಲಿಲ್ಲಾ. ಲಾಕ್ಡೌನ್ ಸಮಯದಲ್ಲಿ ಕಟಿಂಗ್ ಶಾಪ್ ಹಾಗೂ ಸಲೂನ್ಗಳು ಸಂಪೂರ್ಣ ಬಂದ್ ಆಗಿದ್ದವು. ನಂತರ ಲಾಕ್ ಡೌನ್ ಸಮಯದಲ್ಲಿ ಕಟಿಂಗ್ ಶಾಪ್, ಸಲೂನ್, ಸ್ಪಾ ಸೆಂಟರ್, ಬ್ಯೂಟಿ ಪಾರ್ಲರ್ಗಳಿಗೆ ಹಲವಾರು ನಿಮಯ ಜಾರಿ ಮಾಡಿ ಸೇವೆ ನೀಡಲು ಅವಕಾಶ ನೀಡಲಾಗಿದೆ. ಈ ಸಡಲಿಕೆ ಸೀಲ್ಡೌನ್ ಏರಿಯಾಗಳಿಗೆ ಅನ್ವಯವಾಗಲ್ಲಾ.
ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಈ ಕ್ರಮಕ್ಕೆ ಸೀಲ್ಡೌನ್ ಏರಿಯಾದ ಜನ ಸ್ಪಂದಿಸುತ್ತಿದ್ದಾರೆ. ಆದರೆ, ಬಿರು ಬೇಸಿಗೆ ಯುವಕರನ್ನು ಕಂಗಾಲಾಗಿಸಿದೆ. ಅದಕ್ಕೆ ಕಾರಣ ಯುವಕರ ಗಡ್ಡ ಮೀಸೆ ತಲೆಗೂದಲು. ಅರೇ ಸೀಲ್ಡೌನ್ಗೂ ಇವರ ಗಡ್ಡ ಮೀಸೆ ತಲೆಗೂದಲಿಗೂ ಏನು ಸಂಬಂಧ ಅಂತಾ ನೀವೆಲ್ಲಾ ಕೇಳಬಹುದು. ಅದಕ್ಕೆ ಉತ್ತರ. ಕಳೆದ ಒಂದೂವರೆ ತಿಂಗಳಿನಿಂದ ವಿಜಯಪುರ ನಗರದ ಸೀಲ್ಡೌನ್ ಪ್ರದೇಶಗಳಲ್ಲಿತುವ ಜನರನ್ನು ಹೊರಗೆ ಬಿಡುತ್ತಿಲ್ಲಾ. ಇಲ್ಲಿಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರೋಬ್ಬರೂ ಹೊರ ಬಂದಿಲ್ಲಾ. ಈ ನಡುವೆ ಸಖತ್ತಾಗಿ ಟ್ರಿಮ್ ಮಾಡಿಸಿಕೊಂಡು, ಡಿಸೈನ್ ಡಿಸೈನ್ ಆಗಿ ತಲೆಗೂದಲನ್ನು ಕತ್ತರಿಸಿಕೊಂಡು ಫ್ಯಾಷನ್ ಆಗಿ ಓಡಾಡುತ್ತಿದ್ದ ಯುವ ಪಡ್ಡೆಗಳಿಗೆ ಕಟ್ಟಿ ಹಾಕಿದಂತಾಗಿತ್ತು.
ಟ್ರೆಂಡ್ ಆಯ್ತು ಟಕಳೂ ಸ್ಟೈಲ್: ಸೀಲ್ಡೌನ್ ಏರಿಯಾದಲ್ಲಿ ಸಿಲುಕಿ ತಲೆಗೂದಲು ಕತ್ತರಿಸಲಾಗದೇ ಪರದಾಡುತ್ತಿದ್ದ ಯುವಕರು ಇದೀಗಾ ಹೊಸ ಐಡಿಯಾ ಮಾಡಿದ್ದಾರೆ. ಸೀಲ್ಡೌನ್ ಏರಿಯಾಗಳಾದ ಶಾಂತಿನಗರ, ಚಪ್ಪರಬಂದ್, ವಡ್ಡರ್ ಓಣಿ, ಬೆಂಡಿಗೇರಿ ಓಣಿ, ಗೋಳಗುಮ್ಮಟ ಏರಿಯಾದ ಯುವಕರು ತಮ್ಮ ತಮ್ಮ ಗೆಳೆಯರಿಂದಲೇ ಪರಸ್ಪರ ಕಟಿಂಗ್, ಶೇವಿಂಗ್ ಮಾಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಗಡ್ಡ ಮೀಸೆ ತಲೆಗೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಳ್ಳುತ್ತಿದ್ದಾರೆ. ಒಂದೂ ರೀತಿಯಲ್ಲಿ ಈ ಯವಕರ ಸ್ಟೈಲ್ ಇದೀಗಾ ನಗರದಲ್ಲಿ ಟ್ರೆಂಡ್ ಆಗಿದೆ. ಬೋಲ್ಡು ಸ್ಟೈಲ್ ಅಥವಾ ಟಕಳೂ ಸ್ಟೈಲ್ ಎಂದೇ ಕರೆಯಲಾಗುತ್ತಿದೆ.
ಹೀಗೆ ಸೀಲ್ಡೌನ್ ಆದ ಏರಿಯಾದಲ್ಲಿನ ಯುವಕರು ತಲೆ ಬೋಳಿಸಿಕೊಂಡಿದ್ದು ಬಿರು ಬಿಸಿಲಿನಿಂದ ರಕ್ಷಣೆಯನ್ನೂ ಪಡೆದಂತಾಗಿದೆ. ಬಿಸಿಲಿನ ಝಳದಿಂದ ವಿಪರೀತ ಬೆವರು ಸುರಿದು ತಲೆಗೂದಲು ಒದ್ದೆಯಾಗುತ್ತಿದ್ದವು. ಆ ತಾಪತ್ರಯದಿಂದ ಇವರೆಲ್ಲಾ ಪಾರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನವೂ ಏರಿಕೆಯಾಗುತ್ತಿದೆ. ನಿತ್ಯ 40 ಡಿಗ್ರಿ ಸೆಲ್ಸಿಯಸ್ಗೂ ಆಧಿಕ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ತಲೆ ಬೋಳಿಸಿದ್ದು ಬಿಸಿಲಿನ ಝಳಕ್ಕೆ ತಕ್ಕ ಮಟ್ಟಿಗೆ ನೆಮ್ಮದಿಯನ್ನೂ ನೀಡುತ್ತಿದೆ. ಜೊತೆಗೆ ಕಟಿಂಗ್ ಶೇವಿಂಗ್ ಎಂದು ಪ್ರತಿಯೊಬ್ಬರು 150 ರಿಂದ 200 ರೂಪಾಯಿ ಖರ್ಚು ಮಾಡುವುದೂ ತಪ್ಪಿದೆ. ಆ ಹಣವನ್ನು ನಾವು ಉಳಿಸಿದ್ದೇವೆ ಎಂದು ತಮ್ಮ ಬೋಲ್ಡು ತಲೆ ತೋರಿಸಿ ಯವಕರು ಬಿಲ್ಡಪ್ ನೀಡುತ್ತಿದ್ದಾರೆ. ಒಂದು ರೀತಿಯಲ್ಲಿ ಕೊರೊನಾ ಯುವಕರಿಗೆ ಕಲಿಸಿದ ಪಾಠವೂ ಇದಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ.
Published On - 2:22 pm, Tue, 26 May 20