ಸೇತುವೆ ಬಳಿ ಲಾರಿ ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ದಂಪತಿ ದುರ್ಮರಣ

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ದಂಪತಿ ದುರಂತ ಸಾವಿಗೀಡಾಗಿದ್ದಾರೆ. ಹಣಗವಾಡಿ ಬಳಿಯ ತುಂಗಭದ್ರಾ ಸೇತುವೆ ಸಮೀಪ ಅಪಘಾತ ಸಂಭವಿಸಿದ್ದು,  ಒಡೆಯರರಾಯನಹಳ್ಳಿಯ ಸಿದ್ದಮ್ಮ(45) ಮತ್ತು ಹಾಲೇಶಪ್ಪ(52) ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮೇಲಿದ್ದ ಸಿದ್ದಮ್ಮ ಸೇತುವೆ ಕೆಳಗೆ ಬಿದ್ದು ಸಾವಿಗೀಡಾಗಿದ್ದರೆ ತೀವ್ರ ಗಾಯಗೊಂಡ ಪತಿ ಹಾಲೇಶಪ್ಪ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಮೃತರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಒಡೆಯರರಾಯನಹಳ್ಳಿ ಗ್ರಾಮದ ನಿವಾಸಿಗಳು. ಹರಿಹರ ಗ್ರಾಮಾಂತರ ಪೊಲೀಸ್ […]

ಸೇತುವೆ ಬಳಿ ಲಾರಿ ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ದಂಪತಿ ದುರ್ಮರಣ
Follow us
ಸಾಧು ಶ್ರೀನಾಥ್​
|

Updated on:Jan 01, 2021 | 3:37 PM

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ದಂಪತಿ ದುರಂತ ಸಾವಿಗೀಡಾಗಿದ್ದಾರೆ. ಹಣಗವಾಡಿ ಬಳಿಯ ತುಂಗಭದ್ರಾ ಸೇತುವೆ ಸಮೀಪ ಅಪಘಾತ ಸಂಭವಿಸಿದ್ದು,  ಒಡೆಯರರಾಯನಹಳ್ಳಿಯ ಸಿದ್ದಮ್ಮ(45) ಮತ್ತು ಹಾಲೇಶಪ್ಪ(52) ಮೃತಪಟ್ಟಿದ್ದಾರೆ.

ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮೇಲಿದ್ದ ಸಿದ್ದಮ್ಮ ಸೇತುವೆ ಕೆಳಗೆ ಬಿದ್ದು ಸಾವಿಗೀಡಾಗಿದ್ದರೆ ತೀವ್ರ ಗಾಯಗೊಂಡ ಪತಿ ಹಾಲೇಶಪ್ಪ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಮೃತರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಒಡೆಯರರಾಯನಹಳ್ಳಿ ಗ್ರಾಮದ ನಿವಾಸಿಗಳು. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Published On - 3:36 pm, Fri, 1 January 21