LPG Gas Latest Price: ಮತ್ತೆ ಏರಿಕೆಯಾಯ್ತು ಸಿಲಿಂಡರ್ ದರ.. 25 ರೂಪಾಯಿ ಹೆಚ್ಚಳ!

LPG Gas Cylinder Price: ಗ್ಯಾಸ್ ಸಿಲಿಂಡರ್ ದರ ಮತ್ತೆ 25 ರೂಪಾಯಿ ಏರಿಕೆ. 797 ರೂಪಾಯಿ ಇದ್ದ ಸಿಲಿಂಡರ್ ದರ ಇದೀಗ 822 ರೂಪಾಯಿಗೆ ಏಋಇಕೆಯಾಗಿದೆ. ಹಾಗೂ ಕಮರ್ಷಿಯಲ್ ಸಿಲಿಂಡರ್ ದರ 96 ರೂಪಾಯಿ ಏರಿಕೆಯಾಗಿದ್ದು ಇದೀಗ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 1,666 ರೂಪಾಯಿ.

LPG Gas Latest Price: ಮತ್ತೆ ಏರಿಕೆಯಾಯ್ತು ಸಿಲಿಂಡರ್ ದರ.. 25 ರೂಪಾಯಿ ಹೆಚ್ಚಳ!
ಸಾಂದರ್ಭಿಕ ಚಿತ್ರ
Follow us
sandhya thejappa
| Updated By: Digi Tech Desk

Updated on:Mar 01, 2021 | 9:37 AM

ಬೆಂಗಳೂರು: ಗ್ಯಾಸ್ ಸಿಲಿಂಡರ್ ದರ ಮತ್ತೆ 25 ರೂಪಾಯಿ ಏರಿಕೆ. 797 ರೂಪಾಯಿ ಇದ್ದ ಸಿಲಿಂಡರ್ ದರ ಇದೀಗ 822 ರೂಪಾಯಿಗೆ ಏರಿಕೆಯಾಗಿದೆ. ಹಾಗೂ ಕಮರ್ಷಿಯಲ್ ಸಿಲಿಂಡರ್ ದರ 96 ರೂಪಾಯಿ ಏರಿಕೆಯಾಗಿದ್ದು ಇದೀಗ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 1,666 ರೂಪಾಯಿ. ಇದರಿಂದ ಈಗ ಹೊಟೇಲ್ ಉದ್ಯಮಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಮರ್ಷಿಯಲ್ ಸಿಲಿಂಡರ್ ದರ ಏಕಾಏಕಿ 96 ರೂಪಾಯಿ ಹೆಚ್ಚಳವಾಗಿದೆ. ಅಡಿಗೆ ಅನಿಲ ದರ ಮತ್ತು ಕಮರ್ಷಿಯಲ್ ಸಿಲಿಂಡರ್ ದರ ಎರಡೂ ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಒಟ್ಟು 125 ರೂಪಾಯಿ ಏರಿಕೆ ಕಂಡಿದೆ. 1,570 ಇದ್ದ ಕಮರ್ಷಿಯಲ್ ಸಿಲಿಂಡರ್ ದರ 1,666 ಆಗಿದೆ.

ಮಾರ್ಚ್ ತಿಂಗಳ ಮೊದಲ ದಿನ, LPG ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದೆ. ಫೆಬ್ರವರಿ ತಿಂಗಳಲ್ಲಿ ಗ್ಯಾಸ್ ಸಿಲಿಂಡರ್​ ಬೆಲೆಯಲ್ಲಿ 100 ರೂಪಾಯಿ ಏರಿಕೆ ಕಂಡುಬಂದಿತ್ತು. ಹಾಗೂ ಫೆಬ್ರವರಿ 4 ರಂದು 25 ರೂಪಾಯಿ, ಫೆಬ್ರವರಿ 14 ರಂದು 50 ರೂಪಾಯಿ ಹೆಚ್ಚಳವಾಗಿತ್ತು. ಅದೇ ಸಮಯದಲ್ಲಿ, ಫೆಬ್ರವರಿ 25 ರಂದು ಅದು 25 ರೂಪಾಯಿ ಹೆಚ್ಚಾಗಿತ್ತು. ಒಟ್ಟು ಫೆಬ್ರವರಿಯಲ್ಲಿ ಎಲ್​ಪಿಜಿ ಬೆಲೆ 100 ರೂಪಾಯಿ ಆಗಿತ್ತು.

ಮತ್ತೊಮ್ಮೆ, 14.2 ಕೆಜಿ ಸಬ್ಸಿಡಿ ರಹಿತ ಎಲ್​ಪಿಜಿ ಗ್ಯಾಸ್ ಸಿಲಿಂಡರ್ 25 ರೂ. ಬೆಲೆ ಏರಿಕೆಯೊಂದಿಗೆ, ಇದೀಗ ದೆಹಲಿಯಲ್ಲಿ ದೇಶೀಯ ಅನಿಲದ ದರವು 794 ರಿಂದ 819 ರೂಪಾಯಿಗೆ ಏರಿದೆ. ಹಾಗೂ ಮುಂಬಯಿಯಲ್ಲಿ 819 ರೂ. ಕೊಲ್ಕತ್ತಾದಲ್ಲಿ 845.50 ರೂಪಾಯಿ ಮತ್ತು ಚೆನ್ನೈನಲ್ಲಿ 835 ರೂಪಾಯಿಗೆ ಹೆಚ್ಚಿಸಲಾಗಿದೆ.

ಜನವರಿ ತಿಂಗಳಲ್ಲಿ, ತೈಲ ಮಾರುಕಟ್ಟೆ ಕಂಪನಿಗಳು LPG  ಅನಿಲ ಬೆಲೆ ಹೆಚ್ಚಳದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಅದಕ್ಕೂ ಮೊದಲು ಡಿಸೆಂಬರ್ ತಿಂಗಳಲ್ಲಿ ಎರಡು ಬಾರಿ 50-50 ರೂಪಾಯಿಗಳ ಏರಿಕೆ ಕಂಡಿತ್ತು. ನಂತರ ಫೆಬ್ರವರಿ ತಿಂಗಳಲ್ಲಿ ಮೂರು ಬಾರಿ ಏರಿಕೆ ಕಂಡು ಬಂದಿತ್ತು. ಇದೀಗ ಮಾರ್ಚ್ 1ನೇ ತಾರೀಕಿನಂದೂ ಬೆಲೆ ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ: LPG Cylinder Price: ಅಡುಗೆ ಅನಿಲದ​ ಬೆಲೆ ಮತ್ತೆ ಏರಿಕೆ: ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಸಿಲಿಂಡರ್ ದರ ಇಷ್ಟಾಗಿದೆ

ಇದನ್ನೂ ಓದಿ: LPG Cylinder Price Hike: ಇಂದು ಮಧ್ಯರಾತ್ರಿಯಿಂದಲೇ ಅಡುಗೆ ಅನಿಲ ಸಿಲಿಂಡರ್ ತುಟ್ಟಿ

Published On - 9:32 am, Mon, 1 March 21

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?