8 ಕೋಟಿ ಕೊಟ್ಟು ಹೊಸ ವಾಹನ ಖರೀದಿಸಿದ ಮಹೇಶ್​ ಬಾಬು; ಏನಿದರ ವಿಶೇಷತೆ?

|

Updated on: Mar 18, 2021 | 6:16 PM

ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಶಾರುಖ್​ ಖಾನ್​ ದುಬಾರಿ ವ್ಯಾನಿಟಿ ವ್ಯಾನ್​ ಇದೆ. ಮಹೇಶ್​ ಬಾಬು ಹೊಂದಿರುವ ಕ್ಯಾರಾವಾನ್​ ಬೆಲೆ ಇದಕ್ಕೂ ದುಬಾರಿ ಇದೆ ಎನ್ನಲಾಗಿದೆ.

8 ಕೋಟಿ ಕೊಟ್ಟು ಹೊಸ ವಾಹನ ಖರೀದಿಸಿದ ಮಹೇಶ್​ ಬಾಬು; ಏನಿದರ ವಿಶೇಷತೆ?
ಮಹೇಶ್​ ಬಾಬು ಕಾರವಾನ್
Follow us on

ಸೆಲೆಬ್ರಿಟಿಗಳು ವಾಹನ ಖರೀದಿ ಮಾಡಿದರೆ ಅದು ಸುದ್ದಿಯಾಗೋದು ಸಾಮಾನ್ಯ. ಅವರು ಖರೀದಿಸಿದ ವಾಹನ ಯಾವ ಕಂಪನಿಯದ್ದು, ಯಾವ ಮಾಡೆಲ್​, ಅದಕ್ಕೆ ಎಷ್ಟು ಬೆಲೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತದೆ. ಇದಕ್ಕೆ ಈಗ ಹೊಸ ಸೇರ್ಪಡೆ ಟಾಲಿವುಡ್​ ನಟ ಮಹೇಶ್​ ಬಾಬು. ಅವರು ಹೊಸದಾಗಿ ವಾಹನವೊಂದನ್ನು ಖರೀದಿ ಮಾಡಿದ್ದು, ಇದರ ಬೆಲೆ ಒಂದಲ್ಲ, ಎರಡಲ್ಲ ಬರೋಬ್ಬರಿ 8 ಕೋಟಿ ರೂಪಾಯಿ. ಅಷ್ಟಕ್ಕೂ ಮಹೇಶ್​ ಬಾಬು ಖರೀದಿ ಮಾಡಿದ ವಾಹನ ಯಾವುದು? ಅದರ ವಿಶೇಷತೆ ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಎರಡು ಸಿನಿಮಾಗಳಲ್ಲಿ ಬ್ಯುಸಿ ಇರುವ ಮಹೇಶ್​ ಬಾಬು ಕಾರವಾನ್​ ಒಂದನ್ನು ಖರೀದಿ ಮಾಡಿದ್ದಾರೆ. ದುಬಾರಿ ಬೆಲೆಯ ಈ ವಾಹನಕ್ಕೆ ಮಹೇಶ್​ ಬಾಬು 8 ಕೋಟಿ ರೂಪಾಯಿ ನೀಡಿದ್ದಾರೆ. ಈ ಕಾರವಾನ್​ ಒಳಭಾಗವನ್ನು ನೋಡಿದ ಅನೇಕರು ಅಚ್ಚರಿ ಹೊರ ಹಾಕಿದ್ದಾರೆ. ಮಹೇಶ್​ ಬಾಬು ಇತ್ತೀಚೆಗೆ ಸಿನಿಮಾ ಸೆಟ್​ಗೆ ಇದನ್ನು ಕೊಂಡೊಯ್ದಿದ್ದರು. ಸಿನಿಮಾ ಶೂಟಿಂಗ್​ ಮಧ್ಯೆ ಇದೇ ಕಾರಾವಾನ್​ಗೆ ತೆರಳಿ ರೆಸ್ಟ್​ ಮಾಡಿದ್ದರು. ಹೀಗಾಗಿ, ಇದು ಎಲ್ಲರ ಗಮನ ಸೆಳೆದಿದೆ.

ಭಾರತದಲ್ಲಿ ಅನೇಕ ಸ್ಟಾರ್​ಗಳು ಕಾರಾವಾನ್​ ಹೊಂದಿದ್ದಾರೆ. ಆದರೆ, ಇಷ್ಟು ದೊಡ್ಡ ಮೊತ್ತದಲ್ಲಿ ಯಾರೊಬ್ಬರೂ ಕಾರವಾನ್​ ಹೊಂದಿಲ್ಲ ಎನ್ನಲಾಗಿದೆ. ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಶಾರುಖ್​ ಖಾನ್​ ದುಬಾರಿ ವ್ಯಾನಿಟಿ ವ್ಯಾನ್​ ಇದೆ. ಮಹೇಶ್​ ಬಾಬು ಹೊಂದಿರುವ ಕ್ಯಾರಾವಾನ್​ ಬೆಲೆ ಇದಕ್ಕೂ ದುಬಾರಿ ಇದೆ ಎನ್ನಲಾಗಿದೆ.
ಈ ಕಾರವಾನ್​ ಸಾಕಷ್ಟು ಫೀಚರ್​ಗಳನ್ನು ಹೊಂದಿದೆ. ಈ ಕ್ಯಾರಾವಾನ್​ನಲ್ಲಿ ಟಿವಿ ಇದೆ. ಸಣ್ಣ ಕಿಚನ್​, ವಾಶ್​​ರೂಂ ಇದೆ. ವಿಶೇಷ ಎಂದರೆ, ಇಲ್ಲಿ ಬಿಸಿ ಹಾಗೂ ತಂಪು ನೀರು ಎರಡೂ ಸಿಗಲಿದೆ. ಮೀಟಿಂಗ್​ ರೂಂ ಮತ್ತು ಬೆಡ್​ ರೂಂ ಕೂಡ ಇದೆ.

ಈ ಕಾರವಾನ್​ ಮೂಲ ಬೆಲೆ 6.25 ಕೋಟಿ ರೂಪಾಯಿ ಅಂತೆ. ಇಂಟೀರಿಯರ್​ ಡಿಸೈನ್​ಗಾಗಿ ಮಹೇಶ್​ ಬಾಬು ಹೆಚ್ಚುವರಿಯಾಗಿ 2 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರಂತೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ರಾಬರ್ಟ್ ಸಿನಿಮಾದ ಸಕ್ಸಸ್ ಮೀಟ್: ಹಿಂದೆ ಮುಂದೆ ನೋಡ್ದೆ ಒಪ್ಕೊಂಡಿದ್ದಕ್ಕೆ ಫಲ ಸಿಕ್ತು ಎಂದ ಶಿವರಾಜ್​ ಕೆ ಆರ್​ ಪೇಟೆ

Published On - 6:14 pm, Thu, 18 March 21