
ಚಾಮರಾಜನಗರ: ಕೊವಿಡ್-19 ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಜಿಲ್ಲೆಯ ಹನೂರು ತಾಲೂಕಿನ ಸುಪ್ರಸಿದ್ಧ ಮಲೆ ಮಹದೇಶ್ವರ ಸ್ವಾಮಿ ದೇವಾಲಯವು ಇಂದು ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಕೊರೊನಾದಿಂದ ಮಲೆ ಮಹದೇಶ್ಚರ ಬೆಟ್ಟದಲ್ಲಿ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ದೇವಾಲಯದ ಎಲ್ಲ ಸೇವೆಗಳನ್ನು ಪುನರ್ ಆರಂಭಿಸಲಾಗಿದ್ದು ಈ ಕುರಿತು ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಸಹ ಹೊರಡಿಸಿದ್ದಾರೆ. ದೇವಸ್ಥಾನದಲ್ಲಿ ಅನ್ನ ದಾಸೋಹ ಮತ್ತು ಜಾತ್ರೆಗಳು ಆರಂಭವಾಗಲಿದೆ. ಜೊತೆಗೆ, ಇಂದಿನಿಂದಲೇ ಬೆಳಗ್ಗೆ 4ಗಂಟೆಯ ಅಭಿಷೇಕ, ಸಂಜೆ 7ಗಂಟೆಯ ಅಭಿಷೇಕ ಹಾಗೂ ಎಲ್ಲಾ ಪೂಜಾ ಕೈಂಕರ್ಯಗಳು ಮತ್ತು ಇತರೆ ಸೇವೆಗಳು ಭಕ್ತರಿಗೆ ಲಭ್ಯವಾಗಲಿದೆ.