ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದವರ ಮೇಲೆ ಲಾಠಿ ಚಾರ್ಜ್

  • TV9 Web Team
  • Published On - 16:56 PM, 1 Nov 2020
ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದವರ ಮೇಲೆ ಲಾಠಿ ಚಾರ್ಜ್

ಬೆಳಗಾವಿ: ಕನ್ನಡ ರಾಜ್ಯೋತ್ಸವ ಆಚರಣೆಗೆ ಬಂದ ಯುವಕರ ಮೇಲೆ‌ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಚೆನ್ನಮ್ಮ ವೃತ್ತಕ್ಕೆ ಬಂದು ಸಂಭ್ರಮಾಚರಣೆ ಮಾಡುತ್ತಿದ್ದ ಯುವಕರು ಗುಂಪು ಗುಂಪಾಗಿ ಸೇರಿದ್ದಕ್ಕೆ ಅವರನ್ನ ಓಡಿಸಲು ಪೊಲೀಸರು ಲಾಠಿ ಬೀಸಿದರು. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಯುವಕರು ಎದ್ನೋಬಿದ್ನೊ ಅಂತಾ ದಿಕ್ಕಾಪಾಲಾಗಿ ಓಡಿದರು. ಪೊಲೀಸರ ಕ್ರಮಕ್ಕೆ ಕನ್ನಡಪರ ಹೋರಾಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಯುವಕರನ್ನು ಚದುರಿಸುವ ಮುನ್ನ ಯುವಕರು ಪಟಾಕಿ ಸಿಡಿಸಿ ಕನ್ನಡಪರ ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು. ನಗರದಲ್ಲಿ ಅದ್ಧೂರಿ ಮೆರವಣಿಗೆಗೆ ಬ್ರೇಕ್ ಹಾಕಿದರೂ ಕನ್ನಡಿಗರ ಉತ್ಸಾಹಕ್ಕಿಲ್ಲ ಬ್ರೇಕ್ ಬೀಳಲಿಲ್ಲ. ಕೆನ್ನೆಯ ಮೇಲೆ ಕನ್ನಡ ಧ್ಚಜದ ಕೆಂಪು ಹಳದಿ ಬಣ್ಣದ ಅಚ್ಚು ಹಾಕಿಸಿಕೊಂಡು ಸಂತಸಪಟ್ಟರು. ಜೊತೆಗೆ, ಚೆನ್ನಮ್ಮ ವೃತ್ತದ ಎದುರು ಬೈಕ್‌ಗಳಿಗೆ ಕನ್ನಡ ಬಾವುಟ ಅಳವಡಿಸಿ ಬೈಕ್ ಸ್ಟಂಟ್ ಸಹ ಮಾಡುತ್ತಾ ಜೀಪ್‌ಗಳ ಮೇಲೆ ನಿಂತು ಘೋಷಣೆ ಕೂಗುತ್ತಾ ಸಂಭ್ರಮಿಸಿದರು.