AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs GT: ಮೊದಲ ಎಸೆತದಲ್ಲೇ ಜೀವದಾನ; ಅಬ್ಬರದ 81 ರನ್ ಬಾರಿಸಿದ ಕೊಹ್ಲಿ

Virat Kohli's 66th IPL Fifty: ಕ್ರಿಕೆಟ್​ನಲ್ಲಿ 'ಕ್ಯಾಚಸ್ ವಿನ್ ಮ್ಯಾಚಸ್' ಮಾತು ನಿಜವಾಯಿತು. ಐಪಿಎಲ್ 2026 ರ RCB vs ಗುಜರಾತ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೊನ್ನೆ ರನ್​ಗೆ ನೀಡಿದ ಸುಲಭ ಕ್ಯಾಚ್ ಅನ್ನು ವಾಷಿಂಗ್ಟನ್ ಸುಂದರ್ ಕೈಚೆಲ್ಲಿದರು. ಈ ಜೀವದಾನದ ಲಾಭ ಪಡೆದ ಕೊಹ್ಲಿ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 44 ಎಸೆತಗಳಲ್ಲಿ 81 ರನ್ ಬಾರಿಸಿ, RCB ಇನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕಿದರು.

RCB vs GT: ಮೊದಲ ಎಸೆತದಲ್ಲೇ ಜೀವದಾನ; ಅಬ್ಬರದ 81 ರನ್ ಬಾರಿಸಿದ ಕೊಹ್ಲಿ
Virat Kohli
ಪೃಥ್ವಿಶಂಕರ
|

Updated on:Apr 24, 2026 | 11:02 PM

Share

ಕ್ರಿಕೆಟ್​ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಫಿಲ್ಡರ್ ಮಾಡುವ ಅದೊಂದೆ ಒಂದು ತಪ್ಪು ತಂಡವನ್ನು ಸೋಲಿನ ದವಡೆಗೆ ಹೇಗೆ ತಳ್ಳುತ್ತದೆ ಎಂಬುದು ಇಂದಿನ ಆರ್​ಸಿಬಿ ಹಾಗೂ ಗುಜರಾತ್ (RCB vs GT) ನಡುವಿನ ಪಂದ್ಯದಲ್ಲಿ ಸಾಭೀತಾಯಿತು. ಐಪಿಎಲ್ 2026 (IPL 2026) 34ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ 206 ರನ್ ಕಲೆಹಾಕಿತ. ಈ ಗುರಿ ಬೆನ್ನಟ್ಟಿದ ಆರ್​​ಸಿಬಿ ಪರ ವಿರಾಟ್ ಕೊಹ್ಲಿ (Virat Kohli) ಹಾಗೂ ಜೆಕೋಬ್ ಬೆಥೆಲ್ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಗುಜರಾತ್ ಪರ ಮೊಹಮ್ಮದ್ ಸಿರಾಜ್ ಬೌಲಿಂಗ್ ಆರಂಭಿಸಿದರು. ಸಿರಾಜ್ ಬೌಲ್ ಮಾಡಿದ ಈ ಓವರ್​ನಲ್ಲಿ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ್ದರು. ಆದರೆ ಆ ಕ್ಯಾಚ್ ಹಿಡಿಯುವಲ್ಲಿ ವಾಷಿಂಗ್ಟನ್ ಸುಂದರ್ ವಿಫಲರಾದರು.

ಮೊದಲ ಎಸೆತದಲ್ಲೇ ಜೀವದಾನ

ಸಿರಾಜ್ ಎಸೆತವನ್ನು ಕೊಹ್ಲಿ ಮಿಡ್ ವಿಕೆಟ್​ ಕಡೆಗೆ ಆಡಿದರು. ಅಲ್ಲಿಯೇ ನಿಂತಿದ್ದ ಸುಂದರ್​ಗೆ ಇದು ಸುಲಭ ಕ್ಯಾಚ್ ಆಗಿತ್ತು. ಆದರೆ ಆ ಕ್ಯಾಚ್ ತೆಗೆದುಕೊಳ್ಳುವಲ್ಲಿ ಸುಂದರ್ ತಪ್ಪು ಮಾಡಿದರು. ಹೀಗಾಗಿ ಕೊಹ್ಲಿಗೆ ತಾವು ಎದುರಿಸಿದ ಮೊದಲ ಎಸೆತದಲ್ಲೇ ಜೀವದಾನ ಸಿಕ್ಕಿತು. ಅಂದರೆ ಆಗ ಕೊಗ್ಲಿ ಖಾತೆಯನ್ನು ತೆರೆದಿರಲಿಲ್ಲ. ಇಲ್ಲಿಂದ ಜೀವದಾನದ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ವಿರಾಟ್ ಕೊಹ್ಲಿ ಗುಜರಾತ್​ನ ಪ್ರತಿಯೊಬ್ಬ ಬೌಲರ್​ ಅನ್ನು ತರಾಟೆಗೆ ತೆಗೆದುಕೊಂಡರು.

44 ಎಸೆತಗಳಲ್ಲಿ 81 ರನ್

ಇದರ ಫಲವಾಗಿ ಕೊಹ್ಲಿ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಅವರ 66 ನೇ ಐಪಿಎಲ್ ಅರ್ಧಶತಕ ಮತ್ತು ಈ ಆವೃತ್ತಿಯ ಮೂರನೇ ಅರ್ಧಶತಕವೂ ಆಗಿದೆ. ಕೊಹ್ಲಿ ಅರ್ಧಶತಕ ಬಾರಿಸುವುದರ ಜೊತೆಗೆ ದೇವದತ್ ಪಡಿಕ್ಕಲ್ ಅವರೊಂದಿಗೆ ಎರಡನೇ ವಿಕೆಟ್​ಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಅರ್ಧಶತಕದ ಬಳಿಕ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿದ ಕೊಹ್ಲಿ ಕೇವಲ 44 ಎಸೆತಗಳಲ್ಲಿ 81 ರನ್ ಬಾರಿಸಿದರು. ಅಂದರೆ ಕೊಹ್ಲಿ ಮುಂದಿನ 14 ಎಸೆತಗಳಲ್ಲಿ 31 ರನ್ ಚಚ್ಚಿದರು. ದುರಾದೃಷ್ಟವಶಾತ್ ಕೊಹ್ಲಿ ಜೇಸನ್ ಹೊಲ್ಡರ್ ಅವರ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿ ಶತಕ ವಂಚಿತದರು.

RCB vs GT IPL 2026 Live Score: ಗುಜರಾತ್ ವಿರುದ್ಧ ಆರ್​​ಸಿಬಿಗೆ ಸುಲಭ ಜಯ

800 ಬೌಂಡರಿ, 300 ಸಿಕ್ಸರ್

ಕೊಹ್ಲಿ ತಮ್ಮ ಈ ಇನ್ನಿಂಗ್ಸ್​ನಲ್ಲಿ 8 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್​ಗಳನ್ನು ಬಾರಿಸಿದರು. ಈ ಮೂಲಕ ಕೊಹ್ಲಿ ಐಪಿಎಲ್​ನಲ್ಲಿ 800 ಬೌಂಡರಿಗಳನ್ನು ಮತ್ತು 300 ಸಿಕ್ಸರ್​ಗಳನ್ನು ಬಾರಿಸಿದ ಮೈಲಿಗಲ್ಲು ದಾಟಿದರು. ಹಾಗೆಯೇ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 pm, Fri, 24 April 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!