ಚಿಂತಾಮಣಿ ಬಳಿ ಕಾರಿಗೆ ಬೆಂಕಿ, ಭಸ್ಮಗೊಂಡ ವ್ಯಕ್ತಿ ಬೆಂಗಳೂರಿನವ್ರು, ಪ್ರಕರಣದ ಅಸಲಿಯತ್ತೇನು?

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕೇತನಾಯಕನಹಳ್ಳಿ ಬಳಿಯ ನೀಲಗಿರಿ ತೋಪಿನಲ್ಲಿ ವ್ಯಕ್ತಿಯನ್ನು ಕೂಡಿಹಾಕಿ ಕಾರು ಸಮೇತ ಸುಟ್ಟುಹಾಕಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕಾರಿನಲ್ಲಿದ್ದ ಮಾಲೀಕರ ಗುರುತು ಪತ್ತೆ ಹಚ್ಚಿದ್ದಾರೆ. ಫೆ.8ರಂದು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಹಾಗೂ ಮೃತದೇಹ ಪತ್ತೆಯಾಗಿತ್ತು. ಕೆಎ 51, ಕೆಎಂ 969 ನಂಬರ್​ನ ಬ್ರೀಜಾ ಕಾರು ಸುಮಿತ್ರಮ್ಮ ಕಫೂರ್ ಎಂಬುವರ ಹೆಸರಿನಲ್ಲಿದೆ. ಬೆಂಗಳೂರಿನ ಕಾಡುಗೋಡಿ ನಿವಾಸಿ ಸುಮಿತ್ರಮ್ಮ ಮಗ ಧರ್ಮೇಂದ್ರ ಈ ಕಾರನ್ನು ಬಳಸುತ್ತಿದ್ದ. ಹಾಗಾಗಿ […]

ಚಿಂತಾಮಣಿ ಬಳಿ ಕಾರಿಗೆ ಬೆಂಕಿ, ಭಸ್ಮಗೊಂಡ ವ್ಯಕ್ತಿ ಬೆಂಗಳೂರಿನವ್ರು, ಪ್ರಕರಣದ ಅಸಲಿಯತ್ತೇನು?
ಸಾಧು ಶ್ರೀನಾಥ್​

Updated on: Feb 11, 2020 | 2:40 PM

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕೇತನಾಯಕನಹಳ್ಳಿ ಬಳಿಯ ನೀಲಗಿರಿ ತೋಪಿನಲ್ಲಿ ವ್ಯಕ್ತಿಯನ್ನು ಕೂಡಿಹಾಕಿ ಕಾರು ಸಮೇತ ಸುಟ್ಟುಹಾಕಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕಾರಿನಲ್ಲಿದ್ದ ಮಾಲೀಕರ ಗುರುತು ಪತ್ತೆ ಹಚ್ಚಿದ್ದಾರೆ.

ಫೆ.8ರಂದು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಹಾಗೂ ಮೃತದೇಹ ಪತ್ತೆಯಾಗಿತ್ತು. ಕೆಎ 51, ಕೆಎಂ 969 ನಂಬರ್​ನ ಬ್ರೀಜಾ ಕಾರು ಸುಮಿತ್ರಮ್ಮ ಕಫೂರ್ ಎಂಬುವರ ಹೆಸರಿನಲ್ಲಿದೆ.

ಬೆಂಗಳೂರಿನ ಕಾಡುಗೋಡಿ ನಿವಾಸಿ ಸುಮಿತ್ರಮ್ಮ ಮಗ ಧರ್ಮೇಂದ್ರ ಈ ಕಾರನ್ನು ಬಳಸುತ್ತಿದ್ದ. ಹಾಗಾಗಿ ಕಾರಿನಲ್ಲಿ ಪತ್ತೆಯಾದ ಕಳೆಬರಹ ಧರ್ಮೇಂದ್ರನದ್ದೇ ಎಂದು ಪ್ರಾಥಮಿಕವಾಗಿ ಪೊಲೀಸರಿಗೆ ತಿಳಿದು ಬಂದಿದೆ. ಧರ್ಮೇಂದ್ರಗೆ ಇಬ್ಬರು ಪತ್ನಿಯರು ಇದ್ದಾರೆ ಎನ್ನಲಾಗಿದೆ. ಪ್ರಕರಣವನ್ನ ಬೆನ್ನಟ್ಟಿರುವ ಪೊಲೀಸರಿಗೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸುಪಾರಿ ಕೊಲೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕೋಲಾರ ಎಸ್​ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.

Published On - 2:35 pm, Tue, 11 February 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us