ಕೊಲೆ ಅಂದುಕೊಂಡಿದ್ರು ಪೊಲೀಸರು: ಆದ್ರೆ ಸಾವಿನ ರಹಸ್ಯ ಬಿಚ್ಚಿಡ್ತು ಸಿಸಿ ಕ್ಯಾಮರಾ!
ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ನ ಸರಸ್ವತಿಪುರಂನಲ್ಲಿ ಕಳೆದ ಶುಕ್ರವಾರ ಕೊಳ್ಳೇಗಾಲ ಮೂಲದ ಮನೋಜ್ ಕುಮಾರ್(27) ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮೇಲ್ನೋಟಕ್ಕೆ ಕೊಲೆ ಎಂದು ಭಾವಿಸಿದ್ದರು. ಪ್ರಕರಣವನ್ನು ಬೆನ್ನಟ್ಟಿ ಹೋದ ಪೊಲೀಸರಿಗೆ ಸಿಸಿ ಕ್ಯಾಮರಾಗಳು ಸಾವಿನ ಸತ್ಯವನ್ನು ಬಿಚ್ಚಿಟ್ಟಿವೆ. ಫೆ.7ರಂದು ಹಾಡಹಗಲೇ ಮನೋಜ್ ಕುಮಾರ್ ಕಂಠಪೂರ್ತಿ ಕುಡಿದು ಮಲಗಿದ್ದ. ಅಂದು ರಿವರ್ಸ್ ತೆಗೆಯುವಾಗ ಮನೋಜ್ ತಲೆ ಮೇಲೆ ಟೆಂಪೋ ಟ್ರಾವೆಲರ್ ವಾಹನದ ಟೈರ್ ಹತ್ತಿದೆ. ಆಗ ಸ್ಥಳದಲ್ಲೇ ಮನೋಜ್ ಮೃತಪಟ್ಟಿದ್ದಾನೆ. ಇದನ್ನು ಗಮನಿಸಿದ ಟೆಂಪೋ ಟ್ರಾವೆಲರ್ […]
ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ನ ಸರಸ್ವತಿಪುರಂನಲ್ಲಿ ಕಳೆದ ಶುಕ್ರವಾರ ಕೊಳ್ಳೇಗಾಲ ಮೂಲದ ಮನೋಜ್ ಕುಮಾರ್(27) ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮೇಲ್ನೋಟಕ್ಕೆ ಕೊಲೆ ಎಂದು ಭಾವಿಸಿದ್ದರು. ಪ್ರಕರಣವನ್ನು ಬೆನ್ನಟ್ಟಿ ಹೋದ ಪೊಲೀಸರಿಗೆ ಸಿಸಿ ಕ್ಯಾಮರಾಗಳು ಸಾವಿನ ಸತ್ಯವನ್ನು ಬಿಚ್ಚಿಟ್ಟಿವೆ.
ಫೆ.7ರಂದು ಹಾಡಹಗಲೇ ಮನೋಜ್ ಕುಮಾರ್ ಕಂಠಪೂರ್ತಿ ಕುಡಿದು ಮಲಗಿದ್ದ. ಅಂದು ರಿವರ್ಸ್ ತೆಗೆಯುವಾಗ ಮನೋಜ್ ತಲೆ ಮೇಲೆ ಟೆಂಪೋ ಟ್ರಾವೆಲರ್ ವಾಹನದ ಟೈರ್ ಹತ್ತಿದೆ. ಆಗ ಸ್ಥಳದಲ್ಲೇ ಮನೋಜ್ ಮೃತಪಟ್ಟಿದ್ದಾನೆ. ಇದನ್ನು ಗಮನಿಸಿದ ಟೆಂಪೋ ಟ್ರಾವೆಲರ್ ಚಾಲಕ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು ಆತನದ್ದು ಕೊಲೆಯಲ್ಲ ಅಪಘಾತ ಎಂದು ಪತ್ತೆಹಚ್ಚಿದ್ದಾರೆ. ಟಿಟಿ ವಾಹನದ ಚಾಲಕನನ್ನು ರಾಜಾಜಿನಗರ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.