ಪತ್ನಿ ವಿಯೋಗ.. ಜೀವನದಲ್ಲಿ ಜಿಗುಪ್ಸೆ: 3 ಮಕ್ಕಳಿಗೆ ನೇಣು ಬಿಗಿದು ತಂದೆಯೂ ಆತ್ಮಹತ್ಯೆಗೆ ಶರಣು

ಬೆಂಗಳೂರು: ಮೂವರು ಮಕ್ಕಳಿಗೆ ನೇಣು ಬಿಗಿದು, ತಂದೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮೈಕೋ ಲೇಔಟ್​ನಲ್ಲಿ ನಡೆದಿದೆ. ಮೈಕೋ ಲೇಔಟ್​ನ ರಮಣಶ್ರೀ ಎನ್​ಕ್ಲೇವ್​ ಬಳಿ ಘಟನೆ ನಡೆದಿದೆ. ಇಬ್ಬರು ಹೆಣ್ಣು ಮಕ್ಕಳಾದ ಸರಸ್ವತಿ(14), ಹೇಮತಿ(9) ಮತ್ತು ಗಂಡು ಮಗು ರಾಜಕುಮಾರ್‌ಗೆ (3) ನೇಣು ಬಿಗಿದ ಬಳಿಕ ತಂದೆ ಜನಕರಾಜ್ ಬಿಸ್ತಾ (32) ತಾನೂ ನೇಣಿಗೆ ಶರಣಾಗಿದ್ದಾನೆ. ಜನಕರಾಜ್​ ರಮಣಶ್ರೀ ಎನ್​ಕ್ಲೇವ್​ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಸದ್ಯ, ನಾಲ್ವರ ಮೃತದೇಹಗಳನ್ನು ವಿಕ್ಟೋರಿಯಾ ಅಸ್ಪತ್ರೆಗೆ ರವಾನಿಸಲಾಗಿದೆ. ಮೈಕೋ […]

ಪತ್ನಿ ವಿಯೋಗ.. ಜೀವನದಲ್ಲಿ ಜಿಗುಪ್ಸೆ: 3 ಮಕ್ಕಳಿಗೆ ನೇಣು ಬಿಗಿದು ತಂದೆಯೂ ಆತ್ಮಹತ್ಯೆಗೆ ಶರಣು
Edited By:

Updated on: Nov 13, 2020 | 2:51 PM

ಬೆಂಗಳೂರು: ಮೂವರು ಮಕ್ಕಳಿಗೆ ನೇಣು ಬಿಗಿದು, ತಂದೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮೈಕೋ ಲೇಔಟ್​ನಲ್ಲಿ ನಡೆದಿದೆ. ಮೈಕೋ ಲೇಔಟ್​ನ ರಮಣಶ್ರೀ ಎನ್​ಕ್ಲೇವ್​ ಬಳಿ ಘಟನೆ ನಡೆದಿದೆ.
ಇಬ್ಬರು ಹೆಣ್ಣು ಮಕ್ಕಳಾದ ಸರಸ್ವತಿ(14), ಹೇಮತಿ(9) ಮತ್ತು ಗಂಡು ಮಗು ರಾಜಕುಮಾರ್‌ಗೆ (3) ನೇಣು ಬಿಗಿದ ಬಳಿಕ ತಂದೆ ಜನಕರಾಜ್ ಬಿಸ್ತಾ (32) ತಾನೂ ನೇಣಿಗೆ ಶರಣಾಗಿದ್ದಾನೆ. ಜನಕರಾಜ್​ ರಮಣಶ್ರೀ ಎನ್​ಕ್ಲೇವ್​ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ.

ಸದ್ಯ, ನಾಲ್ವರ ಮೃತದೇಹಗಳನ್ನು ವಿಕ್ಟೋರಿಯಾ ಅಸ್ಪತ್ರೆಗೆ ರವಾನಿಸಲಾಗಿದೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನಕರಾಜ್ ಆತ್ಮಹತ್ಯೆಗೆ ಶರಣಾಗಲು ಕಾರಣವೇನು?
ಜೀವನದಲ್ಲಿ ಜಿಗುಪ್ಸೆಯಾದ ಹಿನ್ನೆಲೆಯಲ್ಲಿ ಜನಕರಾಜ್ ಸಾವಿನ ನಿರ್ಧಾರ ತೆಗೆದುಕೊಂಡಿದ್ದನು ಎಂದು ಹೇಳಲಾಗಿದೆ. ಎರಡು ತಿಂಗಳ ಹಿಂದೆ ಜನಕರಾಜ್ ಪತ್ನಿ ನಂದಾದೇವಿ ಸಹ ಆತ್ಮಹತ್ಯೆಗೆ ಶರಣಾಗಿದ್ದಳು.

ಹಾಗಾಗಿ, ಮಕ್ಕಳನ್ನು ನೋಡಿಕೊಳ್ಳಲಾರದೆ ಜೀವನದಲ್ಲಿ ಜುಗುಪ್ಸೆ ಹೊಂದಿದ್ದ ಜನಕರಾಜ್ ಮಕ್ಕಳನ್ನು ನೇಣಿಗೆ ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Published On - 2:48 pm, Fri, 13 November 20