ಬೆಂಗಳೂರು: ಪತ್ನಿಯ ಜತೆ ಜಗಳವಾಡಿಕೊಂಡು ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರದ ಮಂಜುನಾಥ ನಗರದಲ್ಲಿ ನಡೆದಿದೆ. 28 ವರ್ಷದ ಅನಿಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮುಂಬೈನಲ್ಲಿದ್ದ ಪತ್ನಿ ಜತೆ ಜಗಳವಾಡಿಕೊಂಡಿದ್ದ ಅನಿಲ್ ಮದ್ಯದ ಅಮಲಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಈ ವೇಳೆ ಅನುಮಾನ ಬಂದು ಅನಿಲ್ ಮನೆ ಬಳಿ ಧಾವಿಸಿದ ಅಕ್ಕ ಪಕ್ಕದ ಮನೆಯವರು ಕಿಟಕಿ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಅನಿಲ್ನನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ.
ಆದ್ರೆ ನೆರೆಮನೆಯವರು ಎಷ್ಟೇ ಕಿರುಚಿಕೊಂಡರು, ಬೇಡವೆಂದರೂ ಯಾರ ಮಾತು ಕೇಳದೆ ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದೃಶ್ಯಗಳನ್ನು ನೆರೆಮನೆಯವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನೆರೆಮನೆಯವರು ಬಾಗಿಲು ಮುರಿದು ಒಳಬರುವಷ್ಟರಲ್ಲಿ ಅನಿಲ್ನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.