ಇಸ್ಪೀಟ್ ಆಟ: 800 ರೂಪಾಯಿಗಾಗಿ ಗೆಳೆಯನನ್ನ ಕೊಂದಿದ್ದ ಆರೋಪಿಯ ಬಂಧನ

ಇಸ್ಪೀಟ್ ಆಟವಾಡಿ ನಾಗರಾಜ್ 800 ರೂ ಗೆದ್ದಿದ್ದ. ಹೊರಡುವಾಗ ಹಣ ಗೆದ್ದು ಹೋಗಬೇಡ ಎಂದು ಮೂರ್ತಿ ಅಡ್ಡಿಪಡಿಸಿದ್ದ.

ಇಸ್ಪೀಟ್ ಆಟ: 800 ರೂಪಾಯಿಗಾಗಿ ಗೆಳೆಯನನ್ನ ಕೊಂದಿದ್ದ ಆರೋಪಿಯ ಬಂಧನ
ಬಂಧಿತ ಆರೋಪಿ ನಾಗರಾಜ್​
Edited By:

Updated on: Jan 21, 2021 | 8:43 PM

ಹಾಸನ: ಕೇವಲ 800 ರೂಪಾಯಿಗಾಗಿ ಗೆಳೆಯನನ್ನ ಕೊಂದಿದ್ದ ಹಂತಕನನ್ನು ಹೊಳೆನರಸೀಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ನಾಗರಾಜ್ (62) ಬಂಧಿತ ಆರೋಪಿ. ಜನವರಿ 17 ರಂದು ದೊಣ್ಣೆಯಿಂದ ಬಡಿದು ಗೆಳೆಯನನ್ನ ಹತ್ಯೆ ಮಾಡಿದ್ದ. ಸ್ನೇಹಿತ ಮೂರ್ತಿ(48) ಜೊತೆ ಇಸ್ಪೀಟ್ ಆಟವಾಡಿ ನಾಗರಾಜ್ 800 ರೂ ಗೆದ್ದಿದ್ದ. ಗೆದ್ದು ಹೊರಡುವಾಗ ಹಣ ಗೆದ್ದು ಹೋಗಬೇಡ ಎಂದು ಮೂರ್ತಿ ಅಡ್ಡಿಪಡಿಸಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಸ್ನೇಹಿತ ಮೂರ್ತಿ ಮೇಲೆ ನಾಗರಾಜ್​ ಮಾರಾಣಾತಿಂಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದ.

ಗೆಳೆಯನನ್ನ ಕೊಂದ ನಾಗರಾಜ್​ ಸಾಕ್ಷಿ ನಾಶಕ್ಕಾಗಿ ಶವವನ್ನು ನೀರಿನಲ್ಲಿ ಮುಳುಗಿಸಿದ್ದ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಾರಗೌಡನಹಳ್ಲಿಯಲ್ಲಿ ಈ ಘಟನೆ ನಡೆದಿತ್ತು. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಹತ್ಯೆಯ ಬಳಿಕ ನಾಗರಾಜ್​ ಗ್ರಾಮದಿಂದ ನಾಪತ್ತೆಯಾಗಿದ್ದ. ಹೀಗಾಗಿ ಕೊಲೆ ಮಾಡಿ ಊರು ಬಿಟ್ಟಿದ್ದವನನ್ನು, ಘಟನೆ ನಡೆದ ಮೂರನೇ ದಿನಕ್ಕೆ ಪೊಲೀಸರು ಬೆನ್ನಟ್ಟಿ ಬಂದಿಸಿದ್ದಾರೆ.

ನಂಬಿದ ಸ್ನೇಹಿತನಿಂದಲೇ ನಡೆಯಿತಾ ಮೋಸ? ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್​ನೋಟ್​ನಲ್ಲಿತ್ತು ನೊಂದವನ ಕರುಣಾಜನಕ ಕತೆ