AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತ್ರು ದೇಶದ ವಾಯುನೆಲೆಗಳನ್ನೇ ನಿರುಪಯುಕ್ತಗೊಳಿಸಬಲ್ಲ ಸ್ಮಾರ್ಟ್​ ಆಯುಧದ ಯಶಸ್ವಿ ಪರೀಕ್ಷೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸಂಶೋಧನಾ ಕೇಂದ್ರ ಇಮರತ್ (ಆರ್‌ಸಿಐ) ಅಭಿವೃದ್ಧಿಪಡಿಸಿದ ದೂರಗಾಮಿ ದೇಶೀಯ ಕ್ಷಿಪಣಿಯನ್ನು ಹಾಕ್-ಎಂಕೆ 132 ವಿಮಾನದಿಂದ ಉಡಾಯಿಸಲಾಯಿತು.

ಶತ್ರು ದೇಶದ ವಾಯುನೆಲೆಗಳನ್ನೇ ನಿರುಪಯುಕ್ತಗೊಳಿಸಬಲ್ಲ ಸ್ಮಾರ್ಟ್​ ಆಯುಧದ ಯಶಸ್ವಿ ಪರೀಕ್ಷೆ
Hawk i ವಿಮಾನ
ರಾಜೇಶ್ ದುಗ್ಗುಮನೆ
| Edited By: |

Updated on:Jan 21, 2021 | 9:26 PM

Share

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗುರುವಾರ Hawk-i ವಿಮಾನದ ಮೂಲಕ ಶತ್ರು ವಾಯುನೆಲೆಯ ರನ್​ವೇ ಧ್ವಂಸ ಮಾಡುವ ಸ್ಮಾರ್ಟ್​ ಆ್ಯಂಟಿ ಏರ್​ಫೀಲ್ಡ್​ ವೆಪನ್ ​ (SAAW ) ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.

ಎಚ್‌ಎಎಲ್ ಪರೀಕ್ಷಾ ಪೈಲಟ್‌ಗಳಾದ ನಿವೃತ್ತ ವಿಂಗ್ ಕಮಾಂಡರ್​ ಪಿ.ಅವಸ್ಥಿ ಮತ್ತು ಎಂ.ಪಟೇಲ್ ಅವರು ಹಾರಾಟ ನಡೆಸಿದ ವಿಮಾನವು ಶಸ್ತ್ರಾಸ್ತ್ರವನ್ನು ಉಡಾವಣೆ ಮಾಡಿತು. ಈ ಧ್ಯೇಯೋದ್ದೇಶದ ಎಲ್ಲ ಗುರಿಗಳನ್ನೂ ಈ ಪರೀಕ್ಷೆ ಈಡೇರಿಸಿದೆ ಎಂದು ಎಚ್​ಎಎಲ್ ತಿಳಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸಂಶೋಧನಾ ಕೇಂದ್ರ ಇಮರತ್ (ಆರ್‌ಸಿಐ) ಅಭಿವೃದ್ಧಿಪಡಿಸಿದ ದೂರಗಾಮಿ ದೇಶೀಯ ಕ್ಷಿಪಣಿಯನ್ನು ಹಾಕ್-ಎಂಕೆ 132 ವಿಮಾನದಿಂದ ಉಡಾಯಿಸಲಾಯಿತು. ಹಾಕ್​ ವಿಮಾನದಿಂದ  ಹಾರಿಸಿದ ಮೊದಲ ಸ್ಮಾರ್ಟ್ ಆಯುಧ ಇದು ಎಂದು ಎಚ್‌ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಕ್-ಐ ವಿಮಾನದ ಯುದ್ಧ ಸಾಮರ್ಥ್ಯವನ್ನು ಎಚ್‌ಎಎಲ್ ಹೆಚ್ಚಿಸುತ್ತಿದೆ ಎಂದು ಎಚ್‌ಎಎಲ್ ಎಂಜಿನಿಯರಿಂಗ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಅರೂಪ್ ಚಟರ್ಜಿ ಹೇಳಿದ್ದಾರೆ.

SAAW ಯೋಜನೆಯನ್ನು ಭಾರತ ಸರ್ಕಾರವು 2013 ರಲ್ಲಿ ಅಂಗೀಕರಿಸಿತ್ತು. ಶಸ್ತ್ರಾಸ್ತ್ರದ ಮೊದಲ ಯಶಸ್ವಿ ಪರೀಕ್ಷೆಯನ್ನು ಮೇ 2016ರಲ್ಲಿ ನಡೆಸಲಾಗಿದೆ. ನಂತರ ಡಿಸೆಂಬರ್ 2017 ರಲ್ಲಿ ಮೂರು ಯಶಸ್ವಿ ಪರೀಕ್ಷೆಗಳ ಸರಣಿ ನಡೆದಿವೆ. 100 ಕಿಲೋಮೀಟರ್ ವ್ಯಾಪ್ತಿಯವರೆಗೆ ಹೆಚ್ಚಿನ ನಿಖರತೆಯೊಂದಿಗೆ ನೆಲದ ಗುರಿಗಳನ್ನು ಇದು ತಲುಪುವ ಸಾಮರ್ಥ್ಯ ಹೊಂದಿದೆ.

ಯಶಸ್ವಿ ಪರೀಕ್ಷೆಯ ಬಗ್ಗೆ ಎಚ್​ಎಎಲ್​ ಟ್ವೀಟ್ ಇಲ್ಲಿದೆ…

ಭಾರತದ ಗಡಿ ಒಳಗೆ ನುಗ್ಗಿ ಹಳ್ಳಿಯನ್ನೇ ನಿರ್ಮಾಣ ಮಾಡಿದ ಚೀನಾ! ಇಲ್ಲಿವೆ 101 ಮನೆಗಳು..

Published On - 9:15 pm, Thu, 21 January 21