AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರೀಕ್ಷೆ ಕೂರದೇ ಐಎಎಸ್​ ಪಾಸಾಗಿದ್ದಾರೆ ಎನ್ನುವ ಟೀಕೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ತಿರುಗೇಟು

ಅಂಜಲಿ ಬಿರ್ಲಾ ಮೂರು ಹಂತದ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸು ಮಾಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅಂಜಲಿ ಬಗ್ಗೆ ಸುಳ್ಳು ಸುದ್ದಿ ಹರಿದಾಡಿತ್ತು

ಪರೀಕ್ಷೆ ಕೂರದೇ ಐಎಎಸ್​ ಪಾಸಾಗಿದ್ದಾರೆ ಎನ್ನುವ ಟೀಕೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ತಿರುಗೇಟು
ಅಂಜಲಿ ಬಿರ್ಲಾ
ರಾಜೇಶ್ ದುಗ್ಗುಮನೆ
| Edited By: |

Updated on: Jan 21, 2021 | 9:14 PM

Share

ದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಅವರು ನಾಗರಿಕ ಸೇವಾ ಆಯೋಗ ಪರೀಕ್ಷೆಗೆ ಹಾಜರಾಗದೆ ಉತ್ತೀರ್ಣರಾಗಿದ್ದಾರೆ ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ವಿಚಾರಕ್ಕೆ ಅಂಜಲಿ ಬಿರ್ಲಾ ಸಿಟ್ಟಾಗಿದ್ದಾರೆ.

ಟ್ರೋಲ್​ ಮಾಡುವುದನ್ನು ತಡೆಯಲು ಒಂದು ಕಾನೂನು ತರಬೇಕು. ಸುಳ್ಳು ಸುದ್ದಿ ಹರಡುವವರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು. ಸುಳ್ಳುಸುದ್ದಿಗೆ ಇಂದು ನಾನು ಸಂತ್ರಸ್ಥೆ ಆಗಿದ್ದೇನೆ. ನಾಳೆ ಮತ್ತೊಬ್ಬರು ಸಂತ್ರಸ್ಥರಾಗಬಹುದು ಎಂದು ಹೇಳಿದ್ದಾರೆ.

ನಾನು ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ನನ್ನ ಬಗ್ಗೆ ಹರಿದಾಡಿದ ಟ್ರೋಲ್​ಗಳು ನನ್ನನ್ನು ಮತ್ತಷ್ಟು ಗಟ್ಟಿ ಮಾಡಿವೆ. ನಾನು ನನ್ನ ಜೀವನದಲ್ಲಿ ಪ್ರಾಮಾಣಿಕಳಾಗಿದ್ದೇನೆ. ಆಪ್ತರಿಗೆ ನನ್ನ ಪರಿಶ್ರಮದ ಅರಿವಿದೆ ಎಂದು ಅಂಜಲಿ ಹೇಳಿದ್ದಾರೆ.

ನಾಗರಿಕ ಸೇವಾ ಪರೀಕ್ಷೆಗಳನ್ನು ಕ್ರಮಬದ್ಧವಾಗಿ ಮಾಡಲಾಗುತ್ತದೆ. ಮೂರು ಪರೀಕ್ಷೆಗಳಲ್ಲಿ ಉತ್ತೀರ್ಣರಾದರಷ್ಟೇ ನೀವು ಅಧಿಕಾರಿ ಆಗಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಈ ಮೂಲಕ ತಾವು ಪರೀಕ್ಷೆ ಬರೆದೇ ಪಾಸ್​ ಆಗಿದ್ದೇನೆ ಎಂದು ಒತ್ತಿ ಹೇಳಿದ್ದಾರೆ.

ಅಂಜಲಿ ಬಿರ್ಲಾ ಮೂರು ಹಂತದ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸು ಮಾಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅಂಜಲಿ ಬಗ್ಗೆ ಸುಳ್ಳು ಸುದ್ದಿ ಹರಿದಾಡಿತ್ತು. ತಂದೆಯ ಪ್ರಭಾವ ಬಳಸಿ ಅಂಜಲಿ ಪರೀಕ್ಷೆ ಪಾಸಾಗಿದ್ದಾರೆ ಎನ್ನುವ ಪೋಸ್ಟ್​ಗಳು ಕಾಣಿಸಿಕೊಂಡಿದ್ದವು.

ಕೊರೊನಾ ಲಸಿಕೆಯ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ತಡೆಯಲು ಫೇಸ್​ಬುಕ್​ನಿಂದ ಹೊಸ ಅಸ್ತ್ರ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ