Viral Video | ಎಂಜಲು ಹಚ್ಚಿ ರೊಟ್ಟಿ ಮಾಡುತ್ತಿದ್ದ ಭೂಪ ಅರೆಸ್ಟ್​: ಕೊರೊನಾ ಹರಡೋಕೆ ಈ ತಂತ್ರವಾ?

ತಂದೂರಿ ರೊಟ್ಟಿ ಮಾಡುತ್ತಿದ್ದ ವ್ಯಕ್ತಿ ರೊಟ್ಟಿಯನ್ನು ಒರೆದು, ಅದಕ್ಕೆ ಎಂಜಲು ಉಗುಳಿ ಬೇಯಿಸುತ್ತಿದ್ದ. ಇದನ್ನು ನೋಡಿದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Viral Video | ಎಂಜಲು ಹಚ್ಚಿ ರೊಟ್ಟಿ ಮಾಡುತ್ತಿದ್ದ ಭೂಪ ಅರೆಸ್ಟ್​: ಕೊರೊನಾ ಹರಡೋಕೆ ಈ ತಂತ್ರವಾ?
ವೈರಲ್​ ಆದ ವಿಡಿಯೋದ ದೃಶ್ಯ
Edited By: ಸಾಧು ಶ್ರೀನಾಥ್​

Updated on: Feb 22, 2021 | 4:00 PM

ಕೊರೊನಾ ವೈರಸ್​ ಹರಡುವ ಸಂದರ್ಭದಲ್ಲಿ ತಬ್ಲಿಘಿಗಳು ನಡೆಸಿದ ಸಭೆ ತುಂಬಾನೇ ಚರ್ಚೆಗೆ ಕಾರಣವಾಗಿತ್ತು. ತಬ್ಲಿಘಿಗಳು ಕೊರೊನಾ ವೈರಸ್​ ಹರಡಬೇಕು ಎನ್ನುವ ಉದ್ದೇಶಕ್ಕೇ ಈ ರೀತಿ ಮಾಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಅಷ್ಟೇ ಅಲ್ಲ, ಕೊರೊನಾ ಹರಡಬೇಕು ಎನ್ನುವ ಉದ್ದೇಶಕ್ಕೆ ನೋಟುಗಳಿಗೆ ಎಂಜಲು ಹಚ್ಚಿ ನೀಡಲಾಗುತ್ತಿದೆ ಎನ್ನುವ ಮಾತುಗಳೂ ಕೇಳಿ ಬಂದಿದ್ದವು. ಆ ಬಗ್ಗೆ ಅನೇಕ ಫ್ಯಾಕ್ಟ್ ​ಚೆಕ್​ಗಳು ಕೂಡ ನಡೆದವು. ಈಗ ಇಂತಹುದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮದುವೆ ಸಮಾರಂಭದಲ್ಲಿ ಎಂಜಲು ಹಚ್ಚಿ ರೊಟ್ಟಿ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್​ ಆಗಿದ್ದಾನೆ.

ಉತ್ತರ ಪ್ರದೇಶದ ಮೀರತ್​ನಲ್ಲಿ ಅದ್ದೂರಿ ಮದುವೆ ಏರ್ಪಡಿಸಲಾಗಿತ್ತು. ಮದುವೆಗೆ ಸಾವಿರಾರು ಮಂದಿ ಕೂಡ ಸೇರಿದ್ದರು. ಅದ್ದೂರಿ ಕಾರ್ಯಕ್ರಮ ಆಗಿದ್ದರಿಂದ ನಾನಾ ರೀತಿಯ ಅಡುಗೆ ಕೂಡ ಸಿದ್ಧಪಡಿಸಲಾಗಿತ್ತು. ಬಂದ ಅತಿಥಿಗಳಿಗೆ ಬಿಸಿ ಬಿಸಿ ತಂದೂರಿ ರೊಟ್ಟಿ ನೀಡಲು ಕೌಂಟರ್​​ ಒಂದನ್ನು ತೆಗೆಯಲಾಗಿತ್ತು. ಆದರೆ, ಹೇಸಿಗೆಯ ವಿಚಾರ ಎಂದರೆ, ರೊಟ್ಟಿ ಮಾಡುವ ವ್ಯಕ್ತಿ ಎಂಜಲು ಉಗುಳಿ ಬೇಯಿಸುತ್ತಿದ್ದ!

ತಂದೂರಿ ರೊಟ್ಟಿ ಮಾಡುತ್ತಿದ್ದ ವ್ಯಕ್ತಿ ರೊಟ್ಟಿಯನ್ನು ಒರೆದು, ಅದಕ್ಕೆ ಎಂಜಲು ಉಗುಳಿ ಬೇಯಿಸುತ್ತಿದ್ದ. ಇದನ್ನು ನೋಡಿದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರವನ್ನು ಗಂಡು-ಹೆಣ್ಣಿನ ಕಡೆಯವರಿಗೂ ತಿಳಿಸಿದ್ದಾರೆ. ಪೊಲೀಸರು ಸದ್ಯ ಈತನನ್ನು ಅರೆಸ್ಟ್​ ಮಾಡಿದ್ದಾರೆ.

ಬಂಧಿತನ ಹೆಸರು ನೌಷಾದ್​. ಕೊರೊನಾ ವೈರಸ್​ ಹರಡಲು ನೌಷಾದ್​ ಎಂಜಲು ಹಚ್ಚುತ್ತಿದ್ದ ಎಂದು ಆರೋಪಿಸಲಾಗಿದೆ. ಇದೇ ಆರೋಪದ ಅಡಿಯಲ್ಲಿ ನೌಷಾದ್​​ನನ್ನು ಬಂಧಿಸಲಾಗಿದೆ. ಆತನಿಗೆ ಕೊರೊನಾ ವೈರಸ್​ ಇದೇಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ. ಕೊರೊನಾ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ತಂದೂರಿ ರೊಟ್ಟಿ ಸಾಮಾನ್ಯ ರೊಟ್ಟಿಗಿಂತ ಭಿನ್ನವಾಗಿರುತ್ತದೆ. ರೊಟ್ಟಿಯನ್ನು ಬೇಯಿಸೋದು ಕೂಡ ಭಿನ್ನವೇ. ರೊಟ್ಟಿಯನ್ನು ಬಂಡಿಯ ಮೇಲೆ ಬೇಯಿಸಿದರೆ, ತಂದೂರಿ ರೊಟ್ಟಿ ಸುಡಲು ಬೇರೆಯದೆ ರೀತಿಯ ಒಲೆ ಇರುತ್ತದೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us