ಮಣಿರತ್ನಂಗೆ ಜನ್ಮದಿನ; ಸುಹಾಸಿನಿ ಜೊತೆ ಮದುವೆ ನಡೆದಿದ್ದು ಹೇಗೆ?

| Updated By: ರಾಜೇಶ್ ದುಗ್ಗುಮನೆ

Updated on: Jun 02, 2024 | 6:30 AM

ಮಣಿರತ್ನಂ ಹಾಗೂ ಸುಹಾನಿಸಿ ಅವರದ್ದು ಲವ್​ ಮ್ಯಾರೇಜ್ ಎಂದು ಅನೇಕರು ನಂಬಿದ್ದಾರೆ. ಆದರೆ, ಅದು ಸುಳ್ಳು. ಸುಹಾಸಿನಿ ಅವರನ್ನು ಮೊದಲ ಭೇಟಿ ಮಾಡಿದಾಗ ಮಣಿರತ್ನಂ ಅವರಿಗೆ 33 ವರ್ಷ ವಯಸ್ಸು. ಚಿತ್ರರಂಗದಲ್ಲಿ ಅವರು ಆಗತಾನೇ ಹೆಸರು ಮಾಡುತ್ತಿದ್ದರು. ಸುಹಾಸಿನಿ ಆಗಲೇ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದರು.

ಮಣಿರತ್ನಂಗೆ ಜನ್ಮದಿನ; ಸುಹಾಸಿನಿ ಜೊತೆ ಮದುವೆ ನಡೆದಿದ್ದು ಹೇಗೆ?
ಮಣಿರತ್ನಂ
Follow us on

ಭಾರತ ಚಿತ್ರರಂಗದಲ್ಲಿ ನಿರ್ದೇಶಕ ಮಣಿರತ್ನಂ ಅವರಿಗೆ ದೊಡ್ಡ ಹೆಸರು ಇದೆ. ಕನ್ನಡದ ‘ಪಲ್ಲವಿ ಅನು ಪಲ್ಲವಿ’ ಸಿನಿಮಾ ಅವರ ನಿರ್ದೇಶನದ ಮೊದ ಚಿತ್ರ. ಅಲ್ಲಿಂದ ಅವರು ಸಿನಿಜರ್ನಿ ಆರಂಭಿಸಿದರು. ಚಿತ್ರಣಗಕ್ಕೆ ಬಂದು 40 ವರ್ಷ ಕಳೆದರೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್​, ‘ಪೊನ್ನಿಯಿನ್ ಸೆಲ್ವನ್ 2’ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿವೆ. ಮಣಿರತ್ನಂ (Maniratnam) ಸಿನಿಮಾಗಳಲ್ಲಿ ಕಲಾ ವೈಭವ ಜೋರೇ ಇರುತ್ತದೆ. ಅವರಿಗೆ ಇಂದು (ಜೂನ್ 2) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಮಣಿರತ್ನಂ ಅವರ ಪತ್ನಿ ಸುಹಾಸಿನಿ. ಇವರು 1988ರಲ್ಲಿ ವಿವಾಹ ಆದರು. ಇವರ ಮದುವೆ ನಡೆದಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಮಣಿರತ್ನಂ ಹಾಗೂ ಸುಹಾನಿಸಿ ಅವರದ್ದು ಲವ್​ ಮ್ಯಾರೇಜ್ ಎಂದು ಅನೇಕರು ನಂಬಿದ್ದಾರೆ. ಆದರೆ, ಅದು ಸುಳ್ಳು. ಸುಹಾಸಿನಿ ಅವರನ್ನು ಮೊದಲ ಭೇಟಿ ಮಾಡಿದಾಗ ಮಣಿರತ್ನಂ ಅವರಿಗೆ 33 ವರ್ಷ ವಯಸ್ಸು. ಚಿತ್ರರಂಗದಲ್ಲಿ ಅವರು ಆಗತಾನೇ ಹೆಸರು ಮಾಡುತ್ತಿದ್ದರು. ಸುಹಾಸಿನಿ ಆಗಲೇ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದರು.

ಮಣಿರತ್ನಂ ಅವರು ತುಂಬಾನೇ ರೊಮ್ಯಾಂಟಿಕ್. ಆದರೆ, ಸುಹಾಸಿನಿ ಆ ರೀತಿ ಅಲ್ಲವೇ ಅಲ್ಲ. ‘ಪಲ್ಲವಿ ಅನು ಪಲ್ಲವಿ’ ಸಿನಿಮಾದಲ್ಲಿ ನಟಿಸುವಂತೆ ಮಣಿರತ್ನಂ ಅವರು ಸುಹಾಸಿನಿ ಬಳಿ ಕೋರಿದ್ದರು. ಆದರೆ, ಇದಕ್ಕೆ ಸುಹಾಸಿನಿ ಒಪ್ಪಿಲ್ಲ. ನಂತರ ಇವರ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ಸುಹಾಸಿನಿ ಎದುರು ಪ್ರೀತಿಯ ಕೋರಿಕೆ ಇಟ್ಟರು. ಆದರೆ, ಇದನ್ನು ಸುಹಾಸಿನಿ ತಿರಸ್ಕರಿಸಿದರು. ‘ನನಗೆ ರಿಲೇಶನ್​ಶಿಪ್​ ಬಗ್ಗೆ ನಂಬಿಕೆ ಇಲ್ಲ. ನನಗೇನಿದ್ದರೂ ಮದುವೆ ಬಗ್ಗೆ ಮಾತ್ರ ಆಸಕ್ತಿ’ ಎಂದು ಹೇಳಿದರು. ಇಬ್ಬರೂ ಮನೆಯವರನ್ನು ಒಪ್ಪಿಸಿ 1988ರಲ್ಲಿ ಮದುವೆ ಆದರು.

ಮಣಿರತ್ನಂ ಹಾಗೂ ಸುಹಾಸಿನಿ ಮದುವೆ ತುಂಬಾನೇ ಖಾಸಗಿ ಆಗಿ ನಡೆದಿತ್ತು. ಕೆಲವೇ ಕೆಲವು ಮಂದಿ ಮಾತ್ರ ಈ ಮದುವೆಯಲ್ಲಿ ಭಾಗಿ ಆಗಿದ್ದರು. 1992ರಲ್ಲಿ ಮಣಿರತ್ನಂ ಹಾಗೂ ಸುಹಾಸಿನಿಗೆ ಗಂಡು ಮಗು ಜನಿಸಿತು. ಮಗುವಿಗೆ ನಂದನ್ ಎಂದು ಹೆಸರು ಇಡಲಾಗಿದೆ. ಇಬ್ಬರೂ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ: ‘ಸಿನಿಮಾ ಮಾಡುತ್ತೇನೆ ಆದರೆ..’; ಶಾರುಖ್​ ಖಾನ್​ಗೆ ದೊಡ್ಡ ಷರತ್ತು ಹಾಕಿದ ನಿರ್ದೇಶಕ ಮಣಿರತ್ನಂ

ಮಣಿರತ್ನಂ ಅವರಿಗೆ ಈ ವರ್ಷ ಬರ್ತ್​ಡೇ ತುಂಬಾನೇ ಸ್ಪೆಷಲ್ ಎನಿಸಿಕೊಂಡಿದೆ. ಕಳೆದ ವರ್ಷ ಅವರ ನಟನೆಯ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈಗ ಅವರು ‘ಥಗ್​ ಲೈಫ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.