ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸುವ ಬಗ್ಗೆ ಸಚಿವ ಅಶೋಕ್ ಯಾವುದನ್ನೂ ನಿಖರವಾಗಿ ಹೇಳಲಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 30, 2022 | 2:58 PM

ಉತ್ಸವ ಆಚರಣೆಯ ನಿರ್ಣಯವನ್ನು ಉಚ್ಚ ನ್ಯಾಯಾಲಯ ಸರ್ಕಾರದ ಸುಪರ್ದಿಗೆ ಬಿಟ್ಟಿದೆ ಮತ್ತು ಸದರಿ ವಿಷಯದ ಮೇಲೆ ಸರ್ವೋಚ್ಛ ನ್ಯಾಯಾಲಯದಲ್ಲೊಂದು ಮನವಿ ಸಲ್ಲಿಸಲಾಗಿದೆ, ಅಪೆಕ್ಸ್ ಕೋರ್ಟಿನ ತೀರ್ಪನ್ನು ಸಹ ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ಬೆಂಗಳೂರು:  ಕಂದಾಯ ಸಚಿವ ಆರ್ ಅಶೋಕ (R Ashoka) ಅವರು ಮಂಗಳವಾರ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಚಾಮರಾಜಪೇಟೆಯಲ್ಲಿ (Chamarajapet) ಗಣೇಶೋತ್ಸವ ನಡೆಸುವ ವಿಷಯದ ಬಗ್ಗೆ ಮಾತಾಡಿದರಾದರೂ ಯಾವುದನ್ನೂ ಸ್ಪಷ್ಟವಾಗಿ ಹೇಳಲಿಲ್ಲ. ಉತ್ಸವ ಆಚರಣೆಯ ನಿರ್ಣಯವನ್ನು ಉಚ್ಚ ನ್ಯಾಯಾಲಯ (high court) ಸರ್ಕಾರದ ಸುಪರ್ದಿಗೆ ಬಿಟ್ಟಿದೆ ಮತ್ತು ಸದರಿ ವಿಷಯದ ಮೇಲೆ ಸರ್ವೋಚ್ಛ ನ್ಯಾಯಾಲಯದಲ್ಲೊಂದು ಮನವಿ ಸಲ್ಲಿಸಲಾಗಿದೆ, ಅಪೆಕ್ಸ್ ಕೋರ್ಟಿನ ತೀರ್ಪನ್ನು ಸಹ ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.