ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸಲು ಮನವಿ ಮಾಡುವೆ -ಸಿಟಿ ರವಿ

|

Updated on: Dec 18, 2019 | 12:52 PM

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಒಂದು ಕ್ಯಾಂಟೀನ್​ಗೆ ಒಂದು ಕೋಟಿ ಖರ್ಚು ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಮೂಲಕ ಕಾಂಗ್ರೆಸ್​ನವರು ಕೊಳ್ಳೆ‌ಹೊಡೆದಿದ್ದಾರೆ ಎಂದು ಸಚಿವ ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ದುಡ್ಡಿನಲ್ಲಿ ಇಂದಿರಾ ಕ್ಯಾಂಟೀನ್ ನಡೆಸಿದರೆ ಯಾವ ಹೆಸರನ್ನಾದರೂ ಇಟ್ಟುಕೊಳ್ಳಲಿ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹೆಸರಿಡಲಿ. ಆದರೆ ಇಂದಿರಾ ಕ್ಯಾಂಟೀನ್​ಗೆ ಸರ್ಕಾರದ ಹಣ ಖರ್ಚಾಗ್ತಿದೆ. ಇಂದಿರಾ ಕ್ಯಾಂಟೀನ್ ಉಸ್ತುವಾರಿ ಯಾರ ಬೀಗರಿಗೆ ಕೊಟ್ಟಿದ್ದಾರೆ, ಆ ಬೀಗರು ಎಷ್ಟು ಹಣ ಲೂಟಿ […]

ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸಲು ಮನವಿ ಮಾಡುವೆ -ಸಿಟಿ ರವಿ
Follow us on

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಒಂದು ಕ್ಯಾಂಟೀನ್​ಗೆ ಒಂದು ಕೋಟಿ ಖರ್ಚು ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಮೂಲಕ ಕಾಂಗ್ರೆಸ್​ನವರು ಕೊಳ್ಳೆ‌ಹೊಡೆದಿದ್ದಾರೆ ಎಂದು ಸಚಿವ ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ದುಡ್ಡಿನಲ್ಲಿ ಇಂದಿರಾ ಕ್ಯಾಂಟೀನ್ ನಡೆಸಿದರೆ ಯಾವ ಹೆಸರನ್ನಾದರೂ ಇಟ್ಟುಕೊಳ್ಳಲಿ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹೆಸರಿಡಲಿ. ಆದರೆ ಇಂದಿರಾ ಕ್ಯಾಂಟೀನ್​ಗೆ ಸರ್ಕಾರದ ಹಣ ಖರ್ಚಾಗ್ತಿದೆ. ಇಂದಿರಾ ಕ್ಯಾಂಟೀನ್ ಉಸ್ತುವಾರಿ ಯಾರ ಬೀಗರಿಗೆ ಕೊಟ್ಟಿದ್ದಾರೆ, ಆ ಬೀಗರು ಎಷ್ಟು ಹಣ ಲೂಟಿ ಮಾಡಿದ್ದಾರೆ ಅಂತ ಗೊತ್ತಿದೆ ಎಂದು ಕಿಡಿಕಾರಿದರು.

ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಇಂದಿರಾ ಕ್ಯಾಂಟೀನ್​ಗೆ ಸರ್ಕಾರದ ಹಣ ಖರ್ಚಾಗ್ತಿದೆ. ಹಾಗಾಗಿ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಅಂತ ಹೆಸರಿಡಲಿ ಎಂದು ಮನವಿ ಮಾಡುತ್ತೇನೆ. ವಾಲ್ಮೀಕಿ ಕ್ಯಾಂಟೀನ್ ಹೆಸರಿಡಿ ಅಂತಲೂ ಕೆಲವರು ಮನವಿ‌ ಮಾಡಿದ್ದಾರೆ. ಆದ್ರೆ ಇನ್ನೂ ನಿರ್ಣಯ ಆಗಿಲ್ಲ ಎಂದರು.