ಬೆಳಗಾವಿ ಹಿಂದುತ್ವದ ಕೇಂದ್ರ, ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ: ಸಚಿವ ಕೆ.ಎಸ್. ಈಶ್ವರಪ್ಪ
ಬೆಳಗಾವಿ ಲೋಕಸಭಾ ಟಿಕೆಟ್ ಮುಸಲ್ಮಾನರಿಗಂತೂ ಕೊಡಲ್ಲ ಎಂದ ಕೆ.ಎಸ್.ಈಶ್ವರಪ್ಪ, ಬೆಳಗಾವಿ ಹಿಂದೂತ್ವದ ಕೇಂದ್ರ, ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಟಿಕೆಟ್ ಕೊಡೋ ಪ್ರಶ್ನೆ ಬರಲ್ಲ ಎಂದರು.

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಕುರುಬ ಸಮುದಾಯಕ್ಕೆ ನೀಡಬೇಕೆಂಬ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಬಿಜೆಪಿಯಲ್ಲಿ ಕುರುಬ ಸಮಾಜ, ಲಿಂಗಾಯತ ಸಮಾಜ, ಒಕ್ಕಲಿಗ ಸಮಾಜ, ಬ್ರಾಹ್ಮಣ ಸಮಾಜ ಅಂತಾ ಪ್ರಶ್ನೆ ಇಲ್ಲ. ಕಾಂಗ್ರೆಸ್ ಪಕ್ಷದವರು ಕುರುಬರಿಗೆ ಬಹಳ ಟಿಕೆಟ್ ಕೊಟ್ರಲ್ಲ ಎಷ್ಟು ಗೆದ್ರು? ಕಾಂಗ್ರೆಸ್‌ನವರು ಈಶ್ವರಪ್ಪ ಎಷ್ಟು ಕೊಟ್ರು ಅಂತಾ ಕೇಳಿದರಲ್ಲ ನಾನು ಕುರುಬರಿಗೆ ಮೂರು ಟಿಕೆಟ್ ಕೊಟ್ಟಿದೀನಿ. ಡಿಪಾಜಿಟ್ ಕಳೆದುಕೊಳ್ಳೋಕೆ ಟಿಕೆಟ್ ಕೊಡಬೇಕೇನು? ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಬೆಳಗಾವಿ ಲೋಕಸಭಾ ಟಿಕೆಟ್ ಮುಸಲ್ಮಾನರಿಗಂತೂ ಕೊಡಲ್ಲ.. ಬೆಳಗಾವಿ ಲೋಕಸಭಾ ಟಿಕೆಟ್ ಮುಸಲ್ಮಾನರಿಗಂತೂ ಕೊಡಲ್ಲ ಎಂದ ಕೆ.ಎಸ್.ಈಶ್ವರಪ್ಪ, ಬೆಳಗಾವಿ ಹಿಂದುತ್ವದ ಕೇಂದ್ರ. ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಟಿಕೆಟ್ ಕೊಡೋ ಪ್ರಶ್ನೆ ಬರಲ್ಲ ಎಂದರು. ಜೊತೆಗೆ ಬೆಳಗಾವಿ ಲೋಕಸಭಾ ಟಿಕೆಟ್ ಹಿಂದುತ್ವವಾದಿಗಳಿಗೆ ಕೊಡ್ತೀವಿ ಎಂದರು.
ಸಿದ್ದರಾಮಯ್ಯ ಅವರ ಬಗ್ಗೆ ಮಾತಾನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಅವರ ವರ್ಚಸ್ಸು ಎಲ್ಲಿದೆ, ಆರ್ ಆರ್ ನಗರ ಶಿರಾ ಕ್ಷೇತ್ರದಲ್ಲಿ ಏನಾಯ್ತು? ಈಗಲೂ ಸಿಎಂ.. ಮುಂದೆಯೂ ಸಿಎಂ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಈಗ ಎಲ್ಲಿದಾರೆ? ಬದಾಮಿಯಲ್ಲಿ ಹೆಚ್ಚು ಕಡಿಮೆ ಆಗಿದ್ರೆ ರಾಜಕಾರಣದಲ್ಲಿಯೇ ಇರ್ತಿರಲಿಲ್ಲ ಅವರು. ರಾಜಕೀಯವಾಗಿ ನಾವು ಬದುಕಿದ್ದೀವಿ ಅಂತಾ ತೋರಿಸೋಕೆ ಏನೇನೋ ಹೇಳಿಕೆ ಕೊಡ್ತಿದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯನವರಿಗೆ ಖಾರವಾಗಿಯೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಡಿಕೆಶಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು -ವಿಡಿಯೋ ಹೇಳಿಕೆಗೆ ಈಶ್ವರಪ್ಪ ತಿರುಗೇಟು
Published On - 2:25 pm, Sat, 28 November 20




